IPL 2024: ಚೊಚ್ಚಲ ಚಾನ್ಸ್​ ಎದುರು ನೋಡುತ್ತಿರುವ RCB ತಂಡದ ಇಬ್ಬರು ಆಟಗಾರರು ಯಾರು ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Mar 21, 2024 | 7:06 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-16 ರಲ್ಲಿ ಆರ್​ಸಿಬಿ ತಂಡದಲ್ಲಿದ್ದ 6 ಆಟಗಾರರಿಗೆ ಒಂದೇ ಒಂದು ಚಾನ್ಸ್ ಸಿಕ್ಕಿರಲಿಲ್ಲ. ಇದೀಗ ಐಪಿಎಲ್ ಸೀಸನ್ 17 ಶುರುವಾಗುತ್ತಿದೆ. ಕಳೆದ ವರ್ಷದಿಂದ ತಂಡದಲ್ಲಿರುವ ಇಬ್ಬರು ಆಟಗಾರರು ಈ ಬಾರಿ ಆರ್​ಸಿಬಿ ಪರ ಪಾದಾರ್ಪಣೆ ಮಾಡುವ ವಿಶ್ವಾಸದಲ್ಲಿದ್ದಾರೆ. ಅದರಂತೆ ಐಪಿಎಲ್ 2024 ರಲ್ಲಿ ಆರ್​ಸಿಬಿ ಪರ ಕನ್ನಡಿಗ ಕಣಕ್ಕಿಳಿಯಲಿದ್ದಾರಾ ಕಾದು ನೋಡಬೇಕಿದೆ.

1 / 8
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ಗೆ ವೇದಿಕೆ ಸಿದ್ಧವಾಗಿದೆ. ನಾಳೆಯಿಂದ (ಮಾ.22) ಶುರುವಾಗಲಿರುವ ಐಪಿಎಲ್​ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇದರೊಂದಿಗೆ 17ನೇ ಆವೃತ್ತಿಯ ಐಪಿಎಲ್​ಗೆ ಚಾಲನೆ ದೊರೆಯಲಿದೆ.

2 / 8
ಈ ಬಾರಿಯ ಆರ್​ಸಿಬಿ 25 ಆಟಗಾರರನ್ನು ಬಳಗವನ್ನು ಹೊಂದಿದ್ದು, ಇವರಲ್ಲಿ ಯಾರಿಗೆಲ್ಲಾ ಅವಕಾಶ ಸಿಗಲಿದೆ ಎಂಬುದೇ ಈಗ ಕುತೂಹಲ. ಏಕೆಂದರೆ ಐಪಿಎಲ್​ ಸೀಸನ್​ 16 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 14 ಪಂದ್ಯಗಳಲ್ಲಿ ಒಟ್ಟು 21 ಆಟಗಾರರನ್ನು ಕಣಕ್ಕಿಳಿಸಿತ್ತು. ಆದರೆ 6 ಆಟಗಾರರು ಮಾತ್ರ ಇಡೀ ಟೂರ್ನಿಯಲ್ಲಿ ಬೆಂಚ್ ಕಾದಿದ್ದರು. ಅಂದರೆ ಈ ಆರು ಆಟಗಾರರು ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿದಿಲ್ಲ. ಹಾಗಿದ್ರೆ ಕಳೆದ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ಪರ ಒಂದೇ ಒಂದು ಪಂದ್ಯವಾಡದ 6 ಆಟಗಾರರು ಯಾರೆಲ್ಲಾ ನೋಡೋಣ...

3 / 8
1- ಸಿದ್ದಾರ್ಥ್ ಕೌಲ್ (ಬೌಲರ್​): ಐಪಿಎಲ್ 2022 ರಲ್ಲಿ ಆರ್​ಸಿಬಿ ಪರ 1 ಪಂದ್ಯವಾಡಿದ್ದ ಸಿದ್ದಾರ್ಥ್​ ಕೌಲ್​ಗೆ ಕಳೆದ ಬಾರಿ ಒಂದೇ ಒಂದು ಚಾನ್ಸ್ ನೀಡಿರಲಿಲ್ಲ. ಅಲ್ಲದೆ ಈ ಬಾರಿ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

4 / 8
2- ಸೋನು ಯಾದವ್ (ಆಲ್​ರೌಂಡರ್): ಐಪಿಎಲ್ 2023ರ ಹರಾಜಿನಲ್ಲಿ 20 ಲಕ್ಷ ರೂ. ನೀಡಿ ಖರೀದಿಸಿದ್ದ ಸೋನು ಯಾದವ್ ಅವರನ್ನು ಆರ್​ಸಿಬಿ ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿಸಿರಲಿಲ್ಲ. ಇದೀಗ ಅವರು ಸಹ ತಂಡದಿಂದ ಹೊರಬಿದ್ದಿದ್ದಾರೆ.

5 / 8
3- ಅವಿನಾಶ್ ಸಿಂಗ್ (ಬೌಲರ್): 60 ಲಕ್ಷ ರೂ.ಗೆ ಆರ್​ಸಿಬಿ ಖರೀದಿಸಿದ ಅವಿನಾಶ್ ಸಿಂಗ್​ಗೂ ಕಳೆದ ಸೀಸನ್​ನಲ್ಲಿ ಕೂಡ ಚಾನ್ಸ್ ಸಿಕ್ಕಿರಲಿಲ್ಲ. ಅಲ್ಲದೆ ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಆರ್​ಸಿಬಿ ಅವಿನಾಶ್ ಸಿಂಗ್ ಅವರನ್ನು ತಂಡದಿಂದ ಕೈಬಿಟ್ಟಿದೆ.

6 / 8
4- ಮನೋಜ್ ಭಾಂಡಗೆ (ಆಲ್​ರೌಂಡರ್): ಆರ್​ಸಿಬಿ ತಂಡದಲ್ಲಿರುವ ಕನ್ನಡಿಗ ಮನೋಜ್ ಭಾಂಡಗೆಗೂ ಕಳೆದ ಸೀಸನ್​ನಲ್ಲಿ ಒಂದೇ ಒಂದು ಪಂದ್ಯದಲ್ಲಿ ಅವಕಾಶ ನೀಡಿರಲಿಲ್ಲ. ಈ ಬಾರಿ ಕೂಡ ಮನೋಜ್ ತಂಡದಲ್ಲಿದ್ದು, ಚೊಚ್ಚಲ ಚಾನ್ಸ್ ಅನ್ನು ಎದುರು ನೋಡುತ್ತಿದ್ದಾರೆ.

7 / 8
5- ರಜನ್ ಕುಮಾರ್ (ಬೌಲರ್): ಐಪಿಎಲ್ 2023 ರಲ್ಲಿ ಆರ್​ಸಿಬಿ 70 ಲಕ್ಷ ರೂ.ಗೆ ಖರೀದಿಸಿದ್ದ ರಜನ್ ಕುಮಾರ್ ಕಳೆದ ಸೀಸನ್​ನಲ್ಲಿ ಒಂದೇ ಒಂದು ಪಂದ್ಯವಾಡಿರಲಿಲ್ಲ. ಇದಾಗ್ಯೂ ಅವರನ್ನು ಈ ಬಾರಿ ಕೂಡ ತಂಡದಲ್ಲೇ ಉಳಿಸಿಕೊಂಡಿದ್ದಾರೆ. ಇದೀಗ ಅವರು ಸಹ ಪಾದಾರ್ಪಣೆಯ ಅವಕಾಶವನ್ನು ನಿರೀಕ್ಷಿಸುತ್ತಿದ್ದಾರೆ.

8 / 8
6- ಫಿನ್ ಅಲೆನ್ (ಬ್ಯಾಟ್ಸ್​ಮನ್): 2021 ರಿಂದ ತಂಡದಲ್ಲಿದ್ದ ಯುವ ಸ್ಪೋಟಕ ಬ್ಯಾಟ್ಸ್​ಮನ್ 3ನೇ ವರ್ಷಗಳ ಆರ್​ಸಿಬಿ ಪರ  ಬೆಂಚ್ ಕಾದಿದ್ದಾರೆ. ಅಂದರೆ ಕಳೆದ 3 ವರ್ಷಗಳಿಂದ ತಂಡದಲ್ಲಿದ್ದರೂ ಅಲೆನ್​ಗೆ ಒಂದೇ ಒಂದು ಚಾನ್ಸ್ ನೀಡಿರಲಿಲ್ಲ. ಅಲ್ಲದೆ ಈ ಬಾರಿಯ ಐಪಿಎಲ್​ಗೂ ಮುನ್ನ ಅವರನ್ನು ಟೀಮ್​ಯಿಂದ ಕೈ ಬಿಡಲಾಗಿದೆ.

Published On - 7:05 am, Thu, 21 March 24