- Kannada News Photo gallery Cricket photos Suryakumar Yadav's IPL 2024 fate to be decided today: Fitness Test Today in Bengaluru
IPL 2024: ಸೂರ್ಯಕುಮಾರ್ ಯಾದವ್ ಐಪಿಎಲ್ ಭವಿಷ್ಯ ಇಂದು ನಿರ್ಧಾರ: ಬೆಂಗಳೂರಿನಲ್ಲಿ ಅಗ್ನಿಪರೀಕ್ಷೆ
Suryakumar Yadav Fitness Test: ಸೂರ್ಯಕುಮಾರ್ ಯಾದವ್ ಅವರು ಇಂದು ಬೆಂಗಳೂರಿನ ಎನ್‌ಸಿಎ ಅಂದರೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಈ ಫಿಟ್ನೆಸ್ ಪರೀಕ್ಷೆಯ ಫಲಿತಾಂಶಗಳತ್ತ ಎಲ್ಲರ ಕಣ್ಣಿದೆ. ಏಕೆಂದರೆ ಸೂರ್ಯಕುಮಾರ್ ಅವರ ಐಪಿಎಲ್ ಭವಿಷ್ಯ ಈ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.
Updated on: Mar 21, 2024 | 7:38 AM

ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್ಗೆ ಮಾರ್ಚ್ 22 ರಂದು ಅದ್ಧೂರಿ ಚಾಲನೆ ಸಿಗಲಿದೆ. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಿಂದ ದೊಡ್ಡ ಸುದ್ದಿ ಹೊರಬಿದ್ದಿದೆ. ಮಾರ್ಚ್ 21 ಗುರುವಾರ ಮುಂಬೈ ಇಂಡಿಯನ್ಸ್ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್‌ಗೆ ನಿರ್ಣಾಯಕ ದಿನವಾಗಿದೆ.

ಸೂರ್ಯಕುಮಾರ್ ಅವರು ಇಂದು ಬೆಂಗಳೂರಿನ ಎನ್‌ಸಿಎ ಅಂದರೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಈ ಫಿಟ್ನೆಸ್ ಪರೀಕ್ಷೆಯ ಫಲಿತಾಂಶಗಳತ್ತ ಎಲ್ಲರ ಕಣ್ಣಿದೆ. ಏಕೆಂದರೆ ಸೂರ್ಯಕುಮಾರ್ ಅವರ ಐಪಿಎಲ್ ಭವಿಷ್ಯ ಈ ಫಲಿತಾಂಶದ ಮೇಲೆ ಅವಲಂಬಿತವಾಗಿದೆ. ಪುನಃ ಫೇಲ್ ಆದರೆ ಎಂಐ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ.

ಸೂರ್ಯಕುಮಾರ್ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಗಾಯಗೊಂಡು ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ನಂತರ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಗಾಯದಿಂದ ಸೂರ್ಯ ಚೇತರಿಸಿಕೊಂಡಿದ್ದಾರೆ. ಆದರೆ ತಾನು ಸಂಪೂರ್ಣ ಫಿಟ್ ಎಂದು ಎನ್ಸಿಎಗೆ ಸಾಬೀತು ಮಾಡಬೇಕಿದೆ. ಆಗ ಮಾತ್ರ ಸೂರ್ಯನಿಗೆ ಆಡಲು ಅವಕಾಶ ಸಿಗುತ್ತದೆ.

ಸೂರ್ಯಕುಮಾರ್ ಯಾದವ್ ಮಾರ್ಚ್ 19 ರಂದು ಎನ್ಸಿಎನಲ್ಲಿ ಫಿಟ್ನೆಸ್ ಪರೀಕ್ಷೆಯನ್ನು ನೀಡಿದ್ದರು. ಆದರೆ ಸೂರ್ಯ ಇದರಲ್ಲಿ ವಿಫಲರಾದರು. ಈ ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ ಆದ ನಂತರ ಸೂರ್ಯ ಬ್ರೋಕನ್ ಹಾರ್ಟ್ ಎಮೋಜಿಯನ್ನು ಇನ್ಸ್ಟಾಗ್ರಾಮ್ನ್ಲಿ ಪೋಸ್ಟ್ ಮಾಡಿದ್ದರು. ಇದೀಗ ಸೂರ್ಯ ಗುರುವಾರ ಮತ್ತೊಮ್ಮೆ ಅಗ್ನಿಪರೀಕ್ಷೆ ಎದುರಿಸಲಿದ್ದಾರೆ.

ಸೂರ್ಯಕುಮಾರ್ ಯಾದವ್ 1 ಟೆಸ್ಟ್, 37 ODI ಮತ್ತು 60 T20I ಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಈ ಮೂರು ಮಾದರಿಗಳಲ್ಲಿ ಕ್ರಮವಾಗಿ 8, 773 ಮತ್ತು 2 ಸಾವಿರದ 141 ರನ್ ಗಳಿಸಿದ್ದಾರೆ. ಸೂರ್ಯಕುಮಾರ್ 2012ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ 16ನೇ ಋತುವಿನ ತನಕ ಸೂರ್ಯ 139 ಪಂದ್ಯಗಳಲ್ಲಿ 1 ಶತಕ ಮತ್ತು 21 ಅರ್ಧಶತಕಗಳೊಂದಿಗೆ 3,249 ರನ್ ಗಳಿಸಿದ್ದಾರೆ.
