ಕ್ರಿಸ್ ಗೇಲ್ ಅಜೇಯ 175 ರನ್: 2013 ರ ಐಪಿಎಲ್ನಲ್ಲಿ ಆರ್ಸಿಬಿಯ ಅಂದಿನ ಆರಂಭಿಕ ಆಟಗಾರನಾಗಿದ್ದ ಗೇಲ್, ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 66 ಎಸೆತಗಳಲ್ಲಿ 175 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಬ್ಯಾಟರ್ ಒಬ್ಬ ಕಲೆಹಾಕಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿ ಉಳಿದಿದೆ. ಗೇಲ್ ಈ ಸಿಡಿಲಬ್ಬರದ ಇನ್ನಿಂಗ್ಸ್ನಲ್ಲಿ 13 ಬೌಂಡರಿ ಮತ್ತು 17 ಸಿಕ್ಸರ್‌ಗಳನ್ನು ಬಾರಿಸಿದ್ದರು.