IPL 2024: RCB ತಂಡದ ಮುಂದಿನ ಎದುರಾಳಿ ಯಾರು? ಇಲ್ಲಿದೆ ಮಾಹಿತಿ

|

Updated on: May 19, 2024 | 2:23 PM

IPL 2024: ಐಪಿಎಲ್​ನ 68 ಪಂದ್ಯಗಳ ಮುಕ್ತಾಯದ ವೇಳೆಗೆ ರಾಜಸ್ಥಾನ್ ರಾಯಲ್ಸ್ ತಂಡ 16 ಅಂಕಗಳನ್ನು ಕಲೆಹಾಕಿದರೆ, ಸನ್​ರೈಸರ್ಸ್​ ಹೈದರಾಬಾದ್ ತಂಡ 15 ಅಂಕಗಳನ್ನು ಗಳಿಸಿದೆ. ಉಭಯ ತಂಡಗಳಿಗೂ ಇನ್ನೂ ಒಂದು ಪಂದ್ಯವಿದ್ದು, ಈ ಮ್ಯಾಚ್​ನಲ್ಲಿ ಗೆಲ್ಲುವ ತಂಡ 2ನೇ ಸ್ಥಾನಕ್ಕೇರಲಿದೆ. ಒಂದು ವೇಳೆ ಮುಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಜಯ ಸಾಧಿಸಿದರೆ, ಮೇ 22 ರಂದು ಅಹಮದಾಬಾದ್​ನಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ಮತ್ತು ಎಸ್​ಆರ್​ಹೆಚ್​ ತಂಡಗಳು ಮುಖಾಮುಖಿಯಾಗಲಿದೆ.

1 / 5
IPL 2024: ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್​ಗೆ (CSK) ಸೋಲುಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ರಾಯಲ್ಲಾಗಿಯೇ ಪ್ಲೇಆಫ್​ಗೆ ಪ್ರವೇಶಿಸಿದೆ. ಇನ್ನು ಆರ್​ಸಿಬಿ ತಂಡ ಕಣಕ್ಕಿಳಿಯಬೇಕಿರುವುದು ಎಲಿಮಿನೇಟರ್ ಪಂದ್ಯದಲ್ಲಿ. ಈ ಮ್ಯಾಚ್​ನಲ್ಲಿ ಫಾಫ್ ಪಡೆಯ ಎದುರಾಳಿ ಯಾರು ಎಂಬುದೇ ಈಗ ಕುತೂಹಲ.

2 / 5
ಏಕೆಂದರೆ ಆರ್​ಸಿಬಿ ತಂಡಕ್ಕೆ ಮುಂದಿನ ಎದುರಾಳಿಯಾಗಿ ರಾಜಸ್ಥಾನ್ ರಾಯಲ್ಸ್ ಅಥವಾ ಸನ್​ರೈಸರ್ಸ್ ಹೈದರಾಬಾದ್ ತಂಡ ಸಿಗಬಹುದು. ಇಲ್ಲಿ ಉಭಯ ತಂಡಗಳಿಗೂ ಒಂದೊಂದು ಪಂದ್ಯ ಬಾಕಿಯಿದ್ದು, ಈ ಪಂದ್ಯಗಳ ಫಲಿತಾಂಶದ ಬಳಿಕ ಇದು ನಿರ್ಧಾರವಾಗಲಿದೆ.

3 / 5
ಅಂದರೆ ಇಂದಿನ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ರಾಜಸ್ಥಾನ್ ರಾಯಲ್ಸ್ ಸೋತು, ಪಂಜಾಬ್ ಕಿಂಗ್ಸ್ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ ಗೆದ್ದರೆ, ಆರ್​ಸಿಬಿ ತಂಡಕ್ಕೆ ಆರ್​ಆರ್​ ಎದುರಾಳಿಯಾಗಿ ಸಿಗಲಿದೆ.

4 / 5
ಒಂದು ವೇಳೆ ವೇಳೆ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಇಂದಿನ ಪಂದ್ಯದಲ್ಲಿ ಸೋತರೆ, ಆರ್​ಸಿಬಿ ತಂಡದ ಎದುರಾಳಿ ಎಸ್​ಆರ್​ಹೆಚ್​ ತಂಡ. ಇನ್ನು ಉಭಯ ತಂಡಗಳು ಇಂದಿನ ಪಂದ್ಯದಲ್ಲಿ ಗೆದ್ದರೆ ಆರ್​ಸಿಬಿ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಎಲಿಮಿನೇಟರ್​ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

5 / 5
ಇಂದು ಮಧ್ಯಾಹ್ನ ನಡೆಯಲಿರುವ ಸನ್​ರೈಸರ್ಸ್ ಹೈದರಾಬಾದ್​ ಮತ್ತು ಪಂಜಾಬ್ ಕಿಂಗ್ಸ್ ನಡುವಣ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ಜಯ ಸಾಧಿಸಿದರೆ ಆರ್​ಸಿಬಿ ಎಸ್​ಆರ್​ಹೆಚ್​ ವಿರುದ್ಧ ಎಲಿಮಿನೇಟರ್ ಪಂದ್ಯವಾಡುವುದು ಖಚಿತವಾಗಲಿದೆ. ಹೀಗಾಗಿ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳ ಫಲಿತಾಂಶದೊಂದಿಗೆ ಆರ್​ಸಿಬಿ ತಂಡದ ಮುಂದಿನ ಎದುರಾಳಿ ಯಾರು ಎಂಬುದು ನಿರ್ಧಾರವಾಗಲಿದೆ.

Published On - 7:52 am, Sun, 19 May 24