Rinku Singh: ಐಪಿಎಲ್ಗಿಂತ ಬಿಸಿಸಿಐ ಕಡೆಯಿಂದ ಹೆಚ್ಚಿನ ಸಂಭಾವೆನ ಪಡೆದ ರಿಂಕು ಸಿಂಗ್
TV9 Web | Updated By: ಝಾಹಿರ್ ಯೂಸುಫ್
Updated on:
Mar 03, 2024 | 12:08 PM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ 17 ರಲ್ಲಿ ರಿಂಕು ಸಿಂಗ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಕಳೆದ 5 ವರ್ಷಗಳಿಂದ ಕೆಕೆಆರ್ ಪರ ಆಡುತ್ತಿರುವ ರಿಂಕು ಸಿಂಗ್ಗೆ IPL ನಲ್ಲಿ ಸಿಗುವ ಮೊತ್ತಕ್ಕಿಂತ ಹೆಚ್ಚಿನ ಸಂಭಾವನೆಯನ್ನು ಬಿಸಿಸಿಐ ಘೋಷಿಸಿದೆ. ಅದು ಕೂಡ ಹೊಸ ಗುತ್ತಿಗೆ ಒಪ್ಪಂದದ ಮೂಲಕ ಎಂಬುದು ವಿಶೇಷ.
1 / 7
ಬಿಸಿಸಿಐ ಇತ್ತೀಚೆಗೆ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿತ್ತು. 30 ಆಟಗಾರರನ್ನು ಒಳಗೊಂಡ ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಯುವ ಆಟಗಾರ ರಿಂಕು ಸಿಂಗ್ ಕೂಡ ಸ್ಥಾನ ಪಡೆದಿದ್ದಾರೆ.
2 / 7
ಗ್ರೇಡ್-C ಗುತ್ತಿಗೆ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ರಿಂಕು ಸಿಂಗ್ ಅವರಿಗೆ ಬಿಸಿಸಿಐ ವಾರ್ಷಿಕ 1 ಕೋಟಿ ರೂ. ಸಂಭಾವನೆ ನೀಡಲಿದೆ. ವಿಶೇಷ ಎಂದರೆ ಇದು ರಿಂಕು ಅವರ ಐಪಿಎಲ್ ವೇತನಕ್ಕಿಂತ ಹೆಚ್ಚು.
3 / 7
ಐಪಿಎಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿಯುತ್ತಿರುವ ರಿಂಕು ಸಿಂಗ್ ಪಡೆಯುತ್ತಿರುವ ಸಂಭಾವನೆ 55 ಲಕ್ಷ ರೂ. ಮಾತ್ರ. 2018 ರಿಂದ ಕೆಕೆಆರ್ ಪರ ಕಣಕ್ಕಿಳಿಯುತ್ತಿರುವ ರಿಂಕು ಕಳೆದ ಸೀಸನ್ನ ಐಪಿಎಲ್ನಲ್ಲಿ ಸಂಚಲ ಸೃಷ್ಟಿಸಿದ್ದರು. ಇದರ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲೂ ಚಾನ್ಸ್ ಲಭಿಸಿತ್ತು.
4 / 7
ಅದರಂತೆ ಈ ಬಾರಿ ಕೂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲೇ ಉಳಿದಿರುವ ರಿಂಕು ಸಿಂಗ್ 55 ಲಕ್ಷ ರೂ. ವೇತನ ಪಡೆಯಲಿದ್ದಾರೆ. ಇತ್ತ ಬಿಸಿಸಿಐ ಕಡೆಯಿಂದ ಯುವ ಎಡಗೈ ದಾಂಡಿಗನಿಗೆ 1 ಕೋಟಿ ರೂ. ಸಿಗಲಿದೆ.
5 / 7
ವಿಶೇಷ ಎಂದರೆ ಟೀಮ್ ಇಂಡಿಯಾದ ಬಹುತೇಕ ಆಟಗಾರರ ಐಪಿಎಲ್ ವೇತನ ಹೆಚ್ಚಿದ್ದು, ಬಿಸಿಸಿಐ ಸಂಭಾವನೆ ಕಡಿಮೆ ಇದೆ. ಉದಾಹರಣೆಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬಿಸಿಸಿಐಯಿಂದ ಪಡೆಯುತ್ತಿರುವ ವಾರ್ಷಿಕ ಮೊತ್ತ ತಲಾ 7 ಕೋಟಿ ರೂ.
6 / 7
ಇದೇ ವೇಳೆ ರೋಹಿತ್ ಶರ್ಮಾಗೆ ಐಪಿಎಲ್ನಿಂದ ಸಿಗುವ ಮೊತ್ತ 16 ಕೋಟಿ ರೂ. ಹಾಗೆಯೇ ವಿರಾಟ್ ಕೊಹ್ಲಿಗೆ ಆರ್ಸಿಬಿ ನೀಡುತ್ತಿರುವ ಸಂಭಾವನೆ 15 ಕೋಟಿ ರೂ. ಅಂದರೆ ಈ ಆಟಗಾರರು ಬಿಸಿಸಿಐ ನೀಡುವುದಕ್ಕಿಂತ ಐಪಿಎಲ್ನಲ್ಲಿ ಹೆಚ್ಚಿನ ಮೊತ್ತ ಪಡೆಯುತ್ತಿದ್ದಾರೆ.
7 / 7
ಆದರೆ ರಿಂಕು ಸಿಂಗ್ ವಿಷಯದಲ್ಲಿ ಇದು ಉಲ್ಟಾ. ಕೊಲ್ಕತ್ತಾ ನೈಟ್ ರೈಡರ್ಸ್ ಕಡೆಯಿಂದ 55 ಲಕ್ಷ ರೂ. ಪಡೆಯುತ್ತಿರುವ ರಿಂಕುಗೆ ಬಿಸಿಸಿಐ 1 ಕೋಟಿ ರೂ. ನೀಡಲಿದೆ.