IPL 2024: ವಿರಾಟ್ ಕೊಹ್ಲಿಯ ಬೇಡದ ದಾಖಲೆ ಮುರಿದ ಶಿಖರ್ ಧವನ್

| Updated By: ಝಾಹಿರ್ ಯೂಸುಫ್

Updated on: Mar 24, 2024 | 12:57 PM

IPL 2024: ಐಪಿಎಲ್​ನ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 174 ರನ್ ಕಲೆಹಾಕಿತು. ಈ ಗುರಿಯನ್ನು 19.2 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ ಪಂಜಾಬ್ ಕಿಂಗ್ಸ್ ತಂಡ ಜಯ ಸಾಧಿಸಿದೆ. ಈ ಮೂಲಕ IPL 2024 ರಲ್ಲಿ ಪಂಜಾಬ್ ಕಿಂಗ್ಸ್ ತಂಡ ಶುಭಾರಂಭ ಮಾಡಿದೆ.

1 / 5
IPL 2024: ಚಂಡೀಗಢ್​ನ ಮಹಾರಾಜ ಯದವೀಂದ್ರ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ 2ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ (Shikhar Dhawan) ಕ್ಲೀನ್ ಬೌಲ್ಡ್ ಆಗಿದ್ದರು. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಧವನ್ 16 ಎಸೆತಗಳಲ್ಲಿ 4 ಫೋರ್​ಗಳೊಂದಿಗೆ 22 ರನ್ ಬಾರಿಸಿ ಇಶಾಂತ್ ಶರ್ಮಾ ಎಸೆತದಲ್ಲಿ ಬೌಲ್ಡ್ ಆದರು.

2 / 5
ಈ ಬೌಲ್ಡ್​ನೊಂದಿಗೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ಬೇಡದ ದಾಖಲೆಯೊಂದನ್ನು ಶಿಖರ್ ಧವನ್ ತಮ್ಮದಾಗಿಸಿಕೊಂಡಿದ್ದಾರೆ. ಅಂದರೆ ಐಪಿಎಲ್​ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಬೌಲ್ಡ್ ಆದ ಬ್ಯಾಟರ್ ಎಂಬ ದಾಖಲೆ ಇದೀಗ ಧವನ್ ಪಾಲಾಗಿದೆ.

3 / 5
ಇದಕ್ಕೂ ಮುನ್ನ ಈ ಅನಗತ್ಯ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು. ಐಪಿಎಲ್​ನಲ್ಲಿ 230 ಇನಿಂಗ್ಸ್ ಆಡಿರುವ ಕಿಂಗ್ ಕೊಹ್ಲಿ ಒಟ್ಟು 38 ಬಾರಿ ಬೌಲ್ಡ್ ಆಗಿ ವಿಕೆಟ್ ಒಪ್ಪಿಸಿದ್ದಾರೆ.

4 / 5
ಇದೀಗ 217ನೇ ಐಪಿಎಲ್ ಇನಿಂಗ್ಸ್​ನಲ್ಲಿ ಶಿಖರ್ ಧವನ್ 39ನೇ ಬಾರಿ ಬೌಲ್ಡ್ ಆಗಿದ್ದಾರೆ. ಈ ಮೂಲಕ ಐಪಿಎಲ್​ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಬೌಲ್ಡ್ ಆದ ಬ್ಯಾಟರ್ ಎಂಬ ಕಳಪೆ ದಾಖಲೆಯೊಂದನ್ನು ಧವನ್ ತಮ್ಮದಾಗಿಸಿಕೊಂಡಿದ್ದಾರೆ.

5 / 5
ಇದಾಗ್ಯೂ ಈ ಪಂದ್ಯದಲ್ಲಿ 4 ಫೋರ್​ಗಳನ್ನು ಬಾರಿಸುವ ಮೂಲಕ ಐಪಿಎಲ್​ನಲ್ಲಿ 900+ ಬೌಂಡರಿಗಳನ್ನು ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. 217 ಐಪಿಎಲ್​ ಇನಿಂಗ್ಸ್​ಗಳಲ್ಲಿ 754 ಫೋರ್​ಗಳು ಮತ್ತು 148 ಸಿಕ್ಸ್​ಗಳನ್ನು ಬಾರಿಸಿ 902 ಬೌಂಡರಿಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ 900 ಬೌಂಡರಿಗಳ ಗಡಿದಾಟಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನೂ ಶಿಖರ್ ಧವನ್ ಇದೇ ಪಂದ್ಯದ ಮೂಲಕ ನಿರ್ಮಿಸಿರುವುದು ವಿಶೇಷ.