IPL 2024: 204 ರನ್ ಚಚ್ಚಿದ SRH: ಒಂದೇ ಒಂದು ಬೌಂಡರಿ ನೀಡದ ಸುನಿಲ್ ನರೈನ್

Edited By:

Updated on: Mar 24, 2024 | 8:53 AM

IPL 2024: ಐಪಿಎಲ್ 2024 ರ ಮೂರನೇ ಪಂದ್ಯದಲ್ಲಿ ರಣರೋಚಕ ಪೈಪೋಟಿ ಕಂಡು ಬಂದಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ನಡುವಣ ಈ ಪಂದ್ಯದಲ್ಲಿ ಮೂಡಿಬಂದ ಒಟ್ಟು ಸ್ಕೋರ್ ಬರೋಬ್ಬರಿ 412 ರನ್​ಗಳು. ಇದಾಗ್ಯೂ ಐಪಿಎಲ್​ನ ಈ ಪಂದ್ಯದಲ್ಲಿ ಕೆಕೆಆರ್ ಸ್ಪಿನ್ನರ್ ಸುನಿಲ್ ನರೈನ್ ಒಂದೇ ಒಂದು ಬೌಂಡರಿ ನೀಡಿಲ್ಲ ಎಂಬುದು ವಿಶೇಷ.

1 / 5
ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ KKR ಮತ್ತು SRH ನಡುವಣ ಪಂದ್ಯದಲ್ಲಿ ರನ್ ಮಳೆಯೇ ಹರಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆರಂಭಿಕ ಆಟಗಾರ ಫಿಲ್ ಸಾಲ್ಟ್ (54) ಹಾಗೂ ಆ್ಯಂಡ್ರೆ ರಸೆಲ್ (64) ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಕಗಳ ನೆರವಿನಿಂದ ಕೆಕೆಆರ್ ತಂಡವು 7 ವಿಕೆಟ್ ಕಳೆದುಕೊಂಡು 208 ರನ್​ ಕಲೆಹಾಕಿತು.

ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ KKR ಮತ್ತು SRH ನಡುವಣ ಪಂದ್ಯದಲ್ಲಿ ರನ್ ಮಳೆಯೇ ಹರಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆರಂಭಿಕ ಆಟಗಾರ ಫಿಲ್ ಸಾಲ್ಟ್ (54) ಹಾಗೂ ಆ್ಯಂಡ್ರೆ ರಸೆಲ್ (64) ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಕಗಳ ನೆರವಿನಿಂದ ಕೆಕೆಆರ್ ತಂಡವು 7 ವಿಕೆಟ್ ಕಳೆದುಕೊಂಡು 208 ರನ್​ ಕಲೆಹಾಕಿತು.

2 / 5

ಈ ಕಠಿಣ ಗುರಿಯನ್ನು ಬೆನ್ನತ್ತಿದ ಸನ್​ರೈಸರ್ಸ್ ಹೈದರಾಬಾದ್ ದಿಟ್ಟ ಪ್ರದರ್ಶನ ನೀಡಿತು. ಅದರಲ್ಲೂ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆನ್ರಿಕ್ ಕ್ಲಾಸೆನ್ (63) ಸ್ಪೋಟಕ ಅರ್ಧಶತಕ ಸಿಡಿಸಿ ಅಬ್ಬರಿಸಿದರು. ಇದಾಗ್ಯೂ ಅಂತಿಮ ಓವರ್​ ವೇಳೆ ಎಡವಿದ SRH ತಂಡವು 204 ರನ್​ಗಳಿಸಿ 4 ರನ್​ಗಳಿಂದ ಸೋಲೊಪ್ಪಿಕೊಂಡಿತು.

3 / 5

ಅಂದರೆ ಈ ಪಂದ್ಯದಲ್ಲಿ ಮೂಡಿಬಂದ ಒಟ್ಟು ಸ್ಕೋರ್ 412 ರನ್​ಗಳು. ಇದರಲ್ಲಿ SRH ತಂಡವು 204 ರನ್​ ಕಲೆಹಾಕಿದರೂ, ಕೆಕೆಆರ್ ಸ್ಪಿನ್ನರ್ ಸುನಿಲ್ ನರೈನ್ ನೀಡಿದ್ದು ಕೇವಲ 19 ರನ್​ಗಳು ಮಾತ್ರ. ಅಂದರೆ 4 ಓವರ್​ಗಳಲ್ಲಿ ನರೈನ್ 4.80 ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟು 1 ವಿಕೆಟ್ ಪಡೆದು ಮಿಂಚಿದರು.

4 / 5

ವಿಶೇಷ ಎಂದರೆ ಸನ್​ರೈಸರ್ಸ್ ಹೈದರಾಬಾದ್​ ತಂಡವು 204 ರನ್​ಗಳನ್ನು ಬಾರಿಸಿದರೂ ಸುನಿಲ್ ನರೈನ್ ಮಾತ್ರ ಒಂದೇ ಒಂದು ಬೌಂಡರಿ ಬಿಟ್ಟು ಕೊಟ್ಟಿಲ್ಲ. ಅಂದರೆ ನರೈನ್ ಓವರ್​ನಲ್ಲಿ ಎಸ್​ಆರ್​ಹೆಚ್ ತಂಡದ ಯಾವುದೇ ಬ್ಯಾಟ್ಸ್​ಮನ್​​ಗೆ ಸಿಕ್ಸ್ ಅಥವಾ ಫೋರ್​ ಬಾರಿಸಲು ಸಾಧ್ಯವಾಗಿಲ್ಲ. ಇದುವೇ ಕೆಕೆಆರ್ ತಂಡದ ಗೆಲುವಿಗೆ ಟರ್ನಿಂಗ್ ಪಾಯಿಂಟ್ ಎಂದರೆ ತಪ್ಪಾಗಲಾರದು.

5 / 5

ಒಟ್ಟಿನಲ್ಲಿ ಬೃಹತ್ ಮೊತ್ತದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಒಂದೇ ಒಂದು ಬೌಂಡರಿ ಹೊಡೆಸಿಕೊಳ್ಳದ ವಿಶೇಷ ದಾಖಲೆಯೊಂದನ್ನು ಸುನಿಲ್ ನರೈನ್ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಐಪಿಎಲ್ ಸೀಸನ್ 17 ಅಭಿಯಾನವನ್ನು ನರೈನ್ ಅದ್ಭುತವಾಗಿ ಆರಂಭಿಸಿದ್ದು, ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ಅನುಭವಿ ಸ್ಪಿನ್ನರ್ ಕಡೆಯಿಂದ ಸ್ಪಿನ್ ಮೋಡಿಯನ್ನು ನಿರೀಕ್ಷಿಸಬಹುದು.

Loading...
Unable to load recommendations.
Follow Us