IPL 2024: ಗೋಲ್ಡನ್ ಡಕ್, ಸಿಲ್ವರ್ ಡಕ್, ಡೈಮಂಡ್ ಡಕ್: ಕ್ರಿಕೆಟ್​ನಲ್ಲಿ 8 ಡಕ್​ ಔಟ್​ಗಳಿವೆ..!

Edited By:

Updated on: May 08, 2024 | 12:09 PM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಗೋಲ್ಡನ್ ಡಕ್​ಗೆ ಔಟಾದ ಆಟಗಾರನೆಂದರೆ ರಶೀದ್ ಖಾನ್. 11 ಬಾರಿ ಮೊದಲ ಎಸೆತದಲ್ಲಿ ಔಟಾಗಿ ರಶೀದ್ ಖಾನ್ ಈ ಅನಗತ್ಯ ದಾಖಲೆ ಬರೆದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಗ್ಲೆನ್ ಮ್ಯಾಕ್ಸ್​ವೆಲ್. ಐಪಿಎಲ್​ನಲ್ಲಿ ಮ್ಯಾಕ್ಸ್​ವೆಲ್ ಒಟ್ಟು 9 ಬಾರಿ ಗೋಲ್ಡನ್ ಡಕ್ ಆಗಿದ್ದಾರೆ.

1 / 11
ಡಕ್ ಡಕ್ ಡಕ್... ಗೋಲ್ಡನ್ ಡಕ್. ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರೆ ಗೋಲ್ಡನ್ ಡಕ್ ಎಂಬ ಪದ ಬಳಕೆ ಕೇಳಿ ಬರುತ್ತಿರುತ್ತವೆ.  ಆದರೆ ಆಟಗಾರನೊಬ್ಬ ಶೂನ್ಯಕ್ಕೆ ಔಟಾಗುವುದನ್ನು ಗೋಲ್ಡನ್ ಡಕ್ ಎಂದು ನೀವಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಏಕೆಂದರೆ ಕ್ರಿಕೆಟ್​ನಲ್ಲಿ ಗೋಲ್ಡನ್ ಡಕ್ ಝೀರೋಗೆ ಔಟಾದ್ರೆ ಬಳಸುವ ಪದವಲ್ಲ. ಬದಲಾಗಿ ಬ್ಯಾಟ್ಸ್​ಮನ್​ ಎದುರಿಸಿದ ಮೊದಲ ಎಸೆತದಲ್ಲೇ ಔಟಾದರೆ ಮಾತ್ರ ಅದು ಗೋಲ್ಡನ್ ಡಕ್. ಇಲ್ಲಿ ಗೋಲ್ಡನ್ ಡಕ್ ಜೊತೆ ಸಿಲ್ವರ್, ಡೈಮಂಡ್, ಪ್ಲಾಟಿನಂ ಡಕ್ ಔಟ್​ಗಳಿವೆ ಎಂಬುದು ಅನೇಕರಿಗೆ ತಿಳಿದಿಲ್ಲ. ಹಾಗಿದ್ರೆ ಕ್ರಿಕೆಟ್ ಅಂಗಳದಲ್ಲಿರುವ ಇತರೆ ಡಕ್​ ಔಟ್​ಗಳಾವುವು ಎಂದು ನೋಡೋಣ...

ಡಕ್ ಡಕ್ ಡಕ್... ಗೋಲ್ಡನ್ ಡಕ್. ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರೆ ಗೋಲ್ಡನ್ ಡಕ್ ಎಂಬ ಪದ ಬಳಕೆ ಕೇಳಿ ಬರುತ್ತಿರುತ್ತವೆ.  ಆದರೆ ಆಟಗಾರನೊಬ್ಬ ಶೂನ್ಯಕ್ಕೆ ಔಟಾಗುವುದನ್ನು ಗೋಲ್ಡನ್ ಡಕ್ ಎಂದು ನೀವಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಏಕೆಂದರೆ ಕ್ರಿಕೆಟ್​ನಲ್ಲಿ ಗೋಲ್ಡನ್ ಡಕ್ ಝೀರೋಗೆ ಔಟಾದ್ರೆ ಬಳಸುವ ಪದವಲ್ಲ. ಬದಲಾಗಿ ಬ್ಯಾಟ್ಸ್​ಮನ್​ ಎದುರಿಸಿದ ಮೊದಲ ಎಸೆತದಲ್ಲೇ ಔಟಾದರೆ ಮಾತ್ರ ಅದು ಗೋಲ್ಡನ್ ಡಕ್. ಇಲ್ಲಿ ಗೋಲ್ಡನ್ ಡಕ್ ಜೊತೆ ಸಿಲ್ವರ್, ಡೈಮಂಡ್, ಪ್ಲಾಟಿನಂ ಡಕ್ ಔಟ್​ಗಳಿವೆ ಎಂಬುದು ಅನೇಕರಿಗೆ ತಿಳಿದಿಲ್ಲ. ಹಾಗಿದ್ರೆ ಕ್ರಿಕೆಟ್ ಅಂಗಳದಲ್ಲಿರುವ ಇತರೆ ಡಕ್​ ಔಟ್​ಗಳಾವುವು ಎಂದು ನೋಡೋಣ...

2 / 11

ಈ ವಿಷಯ ಈಗ ಯಾಕೆಂದರೆ, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಗೋಲ್ಡನ್ ಡಕ್ ಆಗಿದ್ದಾರೆ. ಇದರ ಬೆನ್ನಲ್ಲೇ ಡಕ್​ ಔಟ್ ಚರ್ಚೆಗಳು ಶುರುವಾಗಿದೆ. ಈ ಚರ್ಚೆಗಳ ನಡುವೆ ಕ್ರಿಕೆಟ್​ನಲ್ಲಿ ಗೋಲ್ಡನ್ ಅಲ್ಲದೆ, ಸಿಲ್ವರ್, ಡೈಮಂಡ್, ಪ್ಲಾಟಿನಂ ಡಕ್ ಔಟ್​ ವಿಷಯಗಳು ಮುನ್ನಲೆಗೆ ಬಂದಿವೆ. ಹಾಗಿದ್ರೆ ಕ್ರಿಕೆಟ್ ಅಂಗಳದಲ್ಲಿರುವ ಇತರೆ ಡಕ್​ ಔಟ್​ಗಳಾವುವು ಎಂದು ನೋಡೋಣ...

3 / 11

1- ಗೋಲ್ಡನ್ ಡಕ್: ಬ್ಯಾಟ್ಸ್​ಮನ್​ ಎದುರಿಸಿದ ಮೊದಲ ಎಸೆತದಲ್ಲೇ ಔಟಾದರೆ ಮಾತ್ರ ಅದು ಗೋಲ್ಡನ್ ಡಕ್. ಉದಾಹರಣೆಗೆ 1 ಎಸೆತಗಳಲ್ಲಿ 0 ರನ್​ಗಳಿಸಿ ಬೌಲ್ಡ್ ಅಥವಾ ಕ್ಯಾಚ್ ನೀಡಿ ಔಟಾಗುವುದನ್ನು ಗೋಲ್ಡನ್ ಡಕ್ ಔಟ್ ಎಂದು ಕರೆಯಲಾಗುತ್ತದೆ.

4 / 11

2- ಸಿಲ್ವರ್ ಡಕ್: ಬ್ಯಾಟ್ಸ್‌ಮನ್ ತನ್ನ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ ಶೂನ್ಯಕ್ಕೆ ಔಟಾದರೆ, ಅದನ್ನು ಸಿಲ್ವರ್ ಡಕ್ ಎಂದು ಕರೆಯಲಾಗುತ್ತದೆ. ಇಲ್ಲೂ ಕೂಡ ಎರಡು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಕ್ಯಾಚ್ ಅಥವಾ ಬೌಲ್ಡ್ ಆಗಿ ವಿಕೆಟ್ ಒಪ್ಪಿಸುವುದನ್ನು ಸಿಲ್ವರ್ ಡಕ್ ಎಂದು ಕರೆಯಲಾಗುತ್ತದೆ.

5 / 11

3- ಬ್ರೋನ್ಝ್​ ಡಕ್: ಬ್ಯಾಟ್ಸ್‌ಮನ್ ತನ್ನ ಇನ್ನಿಂಗ್ಸ್‌ನ ಮೂರನೇ ಎಸೆತದಲ್ಲಿ ಖಾತೆ ತೆರೆಯದೆ ಔಟಾದರೆ ಅದು ಬ್ರೋನ್ಝ್​ ಡಕ್. ಅಂದರೆ ಮೂರು ಎಸೆತಗಳನ್ನು ಎದುರಿಸಿ ಕ್ಯಾಚ್ ಅಥವಾ ಬೌಲ್ಡ್ ಆಗಿ ವಿಕೆಟ್ ಒಪ್ಪಿಸಿದರೆ ಅದು ಬ್ರೋನ್ಝ್​ ಡಕ್ ಔಟ್.

6 / 11

4- ಡೈಮಂಡ್ ಡಕ್: ಬ್ಯಾಟ್ಸ್‌ಮನ್ ಒಂದೇ ಒಂದು ಎಸೆತವನ್ನು ಎದುರಿಸದೆ ಔಟಾದರೆ ಅದನ್ನು ‘ಡೈಮಂಡ್ ಡಕ್’ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನಾನ್​ ಸ್ಟ್ರೈಕ್​ನಲ್ಲಿದ್ದ ಆಟಗಾರರು ಒಂದು ಎಸೆತವನ್ನು ಎದುರಿಸದೇ ರನೌಟ್ ಆದರೆ ಅದನ್ನು ಡೈಮಂಡ್ ಡಕ್ ಔಟ್ ಎಂದು ಕರೆಯಲಾಗುತ್ತದೆ.

7 / 11

5- ಪ್ಲಾಟಿನಂ ಡಕ್ ಅಥವಾ ರಾಯಲ್ ಡಕ್: ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ಬ್ಯಾಟ್ಸ್‌ಮನ್ ಶೂನ್ಯಕ್ಕೆ ಔಟಾದರೆ ಅದನ್ನು ಪ್ಲಾಟಿನಂ ಡಕ್ ಅಥವಾ ರಾಯಲ್ ಡಕ್ ಎಂದು ಕರೆಯಲಾಗುತ್ತದೆ. ಅಂದರೆ ಪಂದ್ಯದ ಮೊದಲ ಓವರ್​ನ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾದರೆ ಅದು ಪ್ಲಾಟಿನಂ ಡಕ್ ಅಥವಾ ರಾಯಲ್ ಡಕ್.

8 / 11

6- ಪೇರ್ ಡಕ್: ಟೆಸ್ಟ್‌ನಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ಸ್‌ಮನ್ ಶೂನ್ಯಕ್ಕೆ ಔಟಾದಾದರೆ ಅದನ್ನು ಪೇರ್ ಡಕ್ ಎಂದು ಕರೆಯಲಾಗುತ್ತದೆ. ಅಂದರೆ ಮೊದಲ ಇನಿಂಗ್ಸ್​ನಲ್ಲಿ ಶೂನ್ಯಕ್ಕೆ ಔಟಾಗಿ ದ್ವಿತೀಯ ಇನಿಂಗ್ಸ್​ನಲ್ಲೂ ಸೊನ್ನೆ ಸುತ್ತಿದರೆ ಅದು ಪೇರ್ ಡಕ್ ಔಟ್.

9 / 11

7- ಕಿಂಗ್ ಪೇರ್ ಡಕ್: ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ಸ್‌ಮನ್ ಎದುರಿಸಿದ ಮೊದಲ ಎಸೆತದಲ್ಲೇ ಔಟಾದರೆ ಅದನ್ನು ಕಿಂಗ್ ಪೇರ್ ಡಕ್​ ಔಟ್ ಎಂದು ಕರೆಯಲಾಗುತ್ತದೆ. 

10 / 11

ಲಾಫಿಂಗ್ ಡಕ್​: ಇನ್ನಿಂಗ್ಸ್​ನ ಕೊನೆಯ ಎಸೆತದಲ್ಲಿ ಬ್ಯಾಟ್ಸ್​ಮನ್ ಶೂನ್ಯಕ್ಕೆ ಔಟಾದರೆ ಅದನ್ನು ಲಾಫಿಂಗ್ ಡಕ್ ಔಟ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಟಿ20, ಏಕದಿನ ಅಥವಾ ಟೆಸ್ಟ್ ಪಂದ್ಯದ ಅಂತಿಮ ಓವರ್​ನ ಕೊನೆಯ ಎಸೆತದಲ್ಲಿ ಸೊನ್ನೆಗೆ ಔಟಾದರೆ ಅದು ಲಾಫಿಂಗ್ ಡಕ್ ಔಟ್.

11 / 11

ಡಕ್ ಔಟ್ ಎಂದು ಯಾಕೆ ಕರೆಯಲಾಗುತ್ತೆ? ಇಂಗ್ಲಿಷ್​ನಲ್ಲಿ ಡಕ್ ಅಂದರೆ ಬಾತುಕೋಳಿ. ಕ್ರಿಕೆಟ್​ಗೂ ಬಾತುಕೋಳಿಗೂ ಏನು ಸಂಬಂಧ ಎಂದು ನೀವು ಯೋಚಿಸುತ್ತಿದ್ದರೆ, ಉತ್ತರ ಸಿಂಪಲ್. ನಾವು ಸಾಮಾನ್ಯವಾಗಿ ಝೀರೋ ಸಿಕ್ಕಾಗ ಬಳಸುವ ಪದ, ಮೊಟ್ಟೆ. ಝೀರೋ ಬಾತುಕೋಳಿಯ ಮೊಟ್ಟೆಯಾಕಾರದಲ್ಲಿ ಇರುವ ಕಾರಣ ಕ್ರಿಕೆಟ್​ನಲ್ಲಿ ಡಕ್​ ಎಂದು ಬಳಸಲಾಗಿದೆ. ಹೀಗಾಗಿ ಶೂನ್ಯಕ್ಕೆ ಔಟಾದರೆ ಡಕ್​ ಔಟ್ ಎಂದು ಕರೆಯಲಾಗುತ್ತದೆ.

TV9 Web

TV9 Kannada

Read More
Loading...
Unable to load recommendations.
Follow Us