IPL 2024: ಈ ಬಾರಿಯ ಐಪಿಎಲ್‌ನಲ್ಲಿ ಕನ್ನಡಿಗರ ಪ್ರದರ್ಶನ ಹೇಗಿತ್ತು?

IPL 2024: 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಒಟ್ಟು 11 ಕರ್ನಾಟಕದ ಆಟಗಾರರು ವಿವಿದ ತಂಡಗಳಲ್ಲಿ ಸ್ಥಾನ ಪಡೆದಿದ್ದರು. ಅವರಲ್ಲಿ 9 ಆಟಗಾರರಿಗೆ ಮಾತ್ರ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಈ 9 ಆಟಗಾರರ ಪ್ರದರ್ಶನ ಹೇಗಿತ್ತು ಎಂಬುದನ್ನು ನೋಡುವುದಾದರೆ..

|

Updated on:May 29, 2024 | 4:51 PM

17ನೇ ಆವೃತ್ತಿಯ ಐಪಿಎಲ್‌ನಲ್ಲಿ ಒಟ್ಟು 11 ಕರ್ನಾಟಕದ ಆಟಗಾರರು ವಿವಿದ ತಂಡಗಳಲ್ಲಿ ಸ್ಥಾನ ಪಡೆದಿದ್ದರು. ಅವರಲ್ಲಿ 9 ಆಟಗಾರರಿಗೆ ಮಾತ್ರ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಈ 9 ಆಟಗಾರರ ಪ್ರದರ್ಶನ ಹೇಗಿತ್ತು ಎಂಬುದನ್ನು ನೋಡುವುದಾದರೆ..

1 / 11
ಲಕ್ನೋ ಸೂಪರ್​ಜೈಂಟ್ಸ್ ತಂಡದ ನಾಯಕತ್ವವಹಿಸಿಕೊಂಡಿದ್ದ ಕನ್ನಡಿಗ ರಾಹುಲ್, ಆಡಿದ 14 ಪಂದ್ಯಗಳಲ್ಲಿ 37.14 ರ ಸರಾಸರಿಯಲ್ಲಿ 520 ರನ್ ಕಲೆಹಾಕಿದರು. ಆದರೆ ತಂಡವನ್ನು ಪ್ಲೇಆಫ್​ಗೆ ಕೊಂಡೊಯ್ಯವಲ್ಲಿ ವಿಫಲರಾದರು.

2 / 11
ಈ ಹಿಂದೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದ ಮಯಾಂಕ್ ಅಗರ್ವಾಲ್​ಗೆ ಈ ಬಾರಿಯ ಐಪಿಎಲ್‌ನಲ್ಲಿ ತಂಡದಲ್ಲಿ ಆಡಲು ಹೆಚ್ಚು ಅವಕಾಶ ಸಿಗಲಿಲ್ಲ. ಆರಂಭದಲ್ಲಿ ಅವಕಾಶ ಪಡೆದ ಮಯಾಂಕ್ ಆಡಿದ 4 ಪಂದ್ಯಗಳಲ್ಲಿ ಕೇವಲ 64 ರನ್ ಮಾತ್ರ ಕಲೆಹಾಕಿದರು. ಹೀಗಾಗಿ ಫ್ರಾಂಚೈಸಿ ಮಯಾಂಕ್​ರನ್ನು ತಂಡದಿಂದ ಹೊರಗಿಟ್ಟು ಅವರ ಜಾಗದಲ್ಲಿ ಟ್ರಾವಿಸ್ ಹೆಡ್​ರನ್ನು ಕಣಕ್ಕಿಳಿಸಿತ್ತು.

3 / 11
ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆದು ಲಕ್ನೋ ಸೂಪರ್​ಜೈಂಟ್ಸ್ ತಂಡವನ್ನು ಸೇರಿದ್ದ ದೇವದತ್ ಪಡಿಕ್ಕಲ್ ಸುವರ್ಣಾವಕಾಶವನ್ನು ಕೈಚೆಲ್ಲಿದರು. ಆಡಿದ 7 ಪಂದ್ಯಗಳಲ್ಲಿ ಪಡಿಕ್ಕಲ್ ಬ್ಯಾಟ್​ನಿಂದ ಬಂದಿದ್ದು, ಕೇವಲ 38 ರನ್. ಹೀಗಾಗಿ ನಾಯಕ ರಾಹುಲ್ ನಂಬಿಕೆ ಸಂಪಾದಿಸುವಲ್ಲಿ ಪಡಿಕಲ್ ಯಶಸ್ವಿಯಾಗಲಿಲ್ಲ.

4 / 11
ಕೋಲ್ಕತ್ತಾ ನೈಟ್ ರೈಡರ್ಸ್​ ತಂಡದಲ್ಲಿದ್ದ ಮನೀಶ್ ಪಾಂಡೆ ಈ ಸೀಸನ್‌ನಲ್ಲಿ ಆಡಿದ್ದು, ಕೇವಲ 1 ಪಂದ್ಯ ಮಾತ್ರ. ಆದರೆ ಈ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದ ಮನೀಶ್ 42 ರನ್​​ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಉಳಿದಂತೆ ಅವರಿಗೆ ಹೆಚ್ಚಿನ ಅವಕಾಶ ಸಿಗಲಿಲ್ಲ.

5 / 11
ಗುಜರಾತ್ ಟೈಟಾನ್ಸ್ ತಂಡದಲ್ಲಿ ಕಳೆದ ಬಾರಿ ಗೇಮ್ ಫಿನಿಶರ್ ಆಗಿ ಕಾಣಿಸಿಕೊಂಡಿದ್ದ ಅಭಿನವ್ ಮನೋಹರ್​ಗೆ ಈ ಆವೃತ್ತಿಯಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಆಡಿದ 2 ಪಂದ್ಯಗಳಲ್ಲಿ ಅಭಿನವ್ ಕೇವಲ 9 ರನ್ ಮಾತ್ರ ಕಲೆಹಾಕಿದರು. ಹೀಗಾಗಿ ಅವರನ್ನು ಪ್ಲೇಯಿಂಗ್ 11 ನಿಂದ ಫ್ರಾಂಚೈಸಿ ಕೈಬಿಟ್ಟಿತ್ತು.

6 / 11
ಗುಜರಾತ್ ತಂಡದ ಪರ ಆಡಿದ್ದ ಮತ್ತೊಬ್ಬ ಕನ್ನಡಿಗ ಬಿ. ಆರ್ ಶರತ್​ಗೂ ಹೆಚ್ಚಿನ ಅವಕಾಶ ಸಿಗಲಿಲ್ಲ. ಆಡಿದ ಏಕೈಕ ಪಂದ್ಯದಲ್ಲಿ ಶರತ್ 1 ರನ್ ಮಾತ್ರ ಕಲೆಹಾಕಿದ್ದರು.

7 / 11
ಲಕ್ನೋ ತಂಡದಲ್ಲಿದ್ದ ಸ್ಪಿನ್ ಆಲ್​ರೌಂಡರ್ ಕೃಷ್ಣಪ್ಪ ಗೌತಮ್​ಗೂ ಈ ಆವೃತ್ತಿಯಲ್ಲಿ ಹೆಚ್ಚಿನ ಅವಕಾಶ ಸಿಗಲಿಲ್ಲ. ಆಡಿದ ಏಕೈಕ ಪಂದ್ಯದಲ್ಲಿ 14.50 ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ದುಬಾರಿಯಾದರು.

8 / 11
ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದ ವೇಗಿ ವಿಧ್ವತ್ ಕಾವೇರಪ್ಪ, ಆರ್​ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದ ಕಾವೇರಪ್ಪ ಆರ್​ಸಿಬಿ ವಿರುದ್ಧ ಪ್ರಮುಖ 2 ವಿಕೆಟ್ ಪಡೆದು ಗಮನಾರ್ಹ ಪ್ರದರ್ಶನ ನೀಡಿದ್ದರು. ಆದರೆ ಆ ಪಂದ್ಯದ ಬಳಿಕ ಇವರಿಗೆ ಪಂಜಾಬ್ ಪ್ಲೇಯಿಂಗ್ 11 ಅವಕಾಶವೇ ಸಿಗಲಿಲ್ಲ.

9 / 11
ಆರ್​ಸಿಬಿ ತಂಡದಲ್ಲಿದ್ದ ವೈಶಾಕ್ ವಿಜಯ್​ಕುಮಾರ್​ಗೆ ಈ ಆವೃತ್ತಿಯಲ್ಲಿ 4 ಪಂದ್ಯಗಳನ್ನಾಡುವ ಅವಕಾಶ ನೀಡಲಾಯಿತು. ಆದರೆ ವೈಶಾಕ್ ತಮ್ಮ ಬೌಲಿಂಗ್ ಮ್ಯಾಜಿಕ್ ತೊರಿಸುವಲ್ಲಿ ವಿಫಲರಾದರು. ಈ 4 ಪಂದ್ಯಗಳಲ್ಲಿ ಅವರು 4 ವಿಕೆಟ್ ಉರುಳಿಸಲಷ್ಟೇ ಶಕ್ತರಾದರು.

10 / 11
ಉಳಿದಂತೆ ಆರ್​ಸಿಬಿ ತಂಡದಲ್ಲಿದ್ದ ಮತ್ತೊಬ್ಬ ಕನ್ನಡಿಗ ಮನೋಜ್ ಬಾಂಡಗೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿದ್ದ ಪ್ರವೀಣ್ ದುಬೆಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಗಲಿಲ್ಲ. ಹೀಗಾಗಿ ಇವರಿಬ್ಬರು ಲೀಗ್ ಉದ್ದಕ್ಕೂ ಬೆಂಚ್ ಕಾದಿದ್ದೆ ಬಂತು.

11 / 11

Published On - 4:51 pm, Wed, 29 May 24

Follow us
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ

ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ

ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು

‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ

ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್

ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ

ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!

ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!

ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್

ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ