IPL 2024: ಕೊನೆಯ ಅವಕಾಶದಲ್ಲೂ ಎಡವಿದ ಕನ್ನಡಿಗ ದೇವದತ್ ಪಡಿಕ್ಕಲ್..!

Updated on: Apr 13, 2024 | 4:57 PM

IPL 2024: 2020 ರಲ್ಲಿ ಆರ್​ಸಿಬಿ ಪರ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದ ಕನ್ನಡಿಗ ದೇವದತ್ ಪಡಿಕ್ಕಲ್ ಚೊಚ್ಚಲ ಆವೃತ್ತಿಯಲ್ಲೇ ಸಖತ್ ಸದ್ದು ಮಾಡಿದ್ದರು. ಆ ಮೂಲಕ ಟೀಂ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್ ಎನಿಸಿಕೊಂಡಿದ್ದರು. ಆದರೆ ಸೀಸನ್ ಕಳೆದಂತೆ ಪಡಿಕ್ಕಲ್‌ ಆಟ ಹಳ್ಳ ಹಿಡಿದಿದ್ದು, ಅವರ ಐಪಿಎಲ್ ಭವಿಷ್ಯ ಅವನತಿಯತ್ತ ಸಾಗಿದೆ.

1 / 7
2020 ರಲ್ಲಿ ಆರ್​ಸಿಬಿ ಪರ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದ ಕನ್ನಡಿಗ ದೇವದತ್ ಪಡಿಕ್ಕಲ್ ಚೊಚ್ಚಲ ಆವೃತ್ತಿಯಲ್ಲೇ ಸಖತ್ ಸದ್ದು ಮಾಡಿದ್ದರು. ಆ ಮೂಲಕ ಟೀಂ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್ ಎನಿಸಿಕೊಂಡಿದ್ದರು. ಆದರೆ ಸೀಸನ್ ಕಳೆದಂತೆ ಪಡಿಕ್ಕಲ್‌ ಆಟ ಹಳ್ಳ ಹಿಡಿದಿದ್ದು, ಅವರ ಐಪಿಎಲ್ ಭವಿಷ್ಯ ಅವನತಿಯತ್ತ ಸಾಗಿದೆ.

2020 ರಲ್ಲಿ ಆರ್​ಸಿಬಿ ಪರ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದ ಕನ್ನಡಿಗ ದೇವದತ್ ಪಡಿಕ್ಕಲ್ ಚೊಚ್ಚಲ ಆವೃತ್ತಿಯಲ್ಲೇ ಸಖತ್ ಸದ್ದು ಮಾಡಿದ್ದರು. ಆ ಮೂಲಕ ಟೀಂ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್ ಎನಿಸಿಕೊಂಡಿದ್ದರು. ಆದರೆ ಸೀಸನ್ ಕಳೆದಂತೆ ಪಡಿಕ್ಕಲ್‌ ಆಟ ಹಳ್ಳ ಹಿಡಿದಿದ್ದು, ಅವರ ಐಪಿಎಲ್ ಭವಿಷ್ಯ ಅವನತಿಯತ್ತ ಸಾಗಿದೆ.

2 / 7

ಐಪಿಎಲ್ 2024 ಕ್ಕೂ ಮುನ್ನ ಟ್ರೆಡಿಂಗ್ ಮೂಲಕ ರಾಜಸ್ಥಾನ್ ತಂಡದಿಂದ ಲಕ್ನೋ ಸೂಪರ್​ಜೈಂಟ್ಸ್ ತಂಡ ಸೇರಿಕೊಂಡಿದ್ದ ಪಡಿಕ್ಕಲ್, ದೇಶೀ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಲಕ್ನೋ ಫ್ರಾಂಚೈಸಿಯ ಬಲ ಹೆಚ್ಚಿಸಿದ್ದರು. ಅಲ್ಲದೆ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದರು.

3 / 7

ಐಪಿಎಲ್ ಆರಂಭಕ್ಕೂ ಮುನ್ನ ನಡೆದ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯ ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದ ಪಡಿಕ್ಕಲ್ 10 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 65 ರನ್ ಕಲೆಹಾಕಿದ್ದರು.

4 / 7

ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಅದ್ಭುತ ಬ್ಯಾಟಿಂಗ್ ಮಾಡಿದ್ದರಿಂದ ಅವರ ಮೇಲೆ ನಿರೀಕ್ಷೆಗಳು ಹೆಚ್ಚಾಗಿದ್ದವು. ಆದರೆ ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ಪರ ಆಡುತ್ತಿರುವ ಪಡಿಕ್ಕಲ್ ಶೋಚನೀಯವಾಗಿ ವಿಫಲರಾಗಿದ್ದಾರೆ.

5 / 7

ಪಡಿಕ್ಕಲ್ ಎಷ್ಟರ ಮಟ್ಟಿಗೆ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ ಎಂದರೆ, ಆಡಿರುವ 5 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕರೂ ಅವರಿಗೆ ಎರಡಂಕಿಯ ಸ್ಕೋರ್ ಗಳಿಸಲು ಸಾಧ್ಯವಾಗಿಲ್ಲ. ಲಕ್ನೋ ಪರ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿರುವ ಪಡಿಕ್ಕಲ್ 5 ಪಂದ್ಯಗಳಲ್ಲಿ ಕೇವಲ 25 ರನ್ ಮಾತ್ರ ಕಲೆಹಾಕಿದ್ದಾರೆ.

6 / 7

ರಾಜಸ್ಥಾನ ವಿರುದ್ಧದ ಮೊದಲ ಪಂದ್ಯದಲ್ಲಿ ಖಾತೆ ತೆರೆಯದೆ ಔಟಾಗಿದ್ದ ಪಡಿಕ್ಕಲ್, ಪಂಜಾಬ್ ವಿರುದ್ಧ 9, ಆರ್‌ಸಿಬಿ ವಿರುದ್ಧ 6, ಗುಜರಾತ್ ಟೈಟಾನ್ಸ್ ವಿರುದ್ಧ 7 ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 3 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ ಪಡಿಕ್ಕಲ್ 5 ಸರಾಸರಿಯಲ್ಲಿ 25 ರನ್ ಮಾತ್ರ ಕಲೆಹಾಕಿದ್ದಾರೆ.

7 / 7

ಹೀಗಾಗಿ ಕಳಪೆ ಫಾರ್ಮ್​ನಿಂದ ಸತತ ವೈಫಲ್ಯ ಬಳಲುತ್ತಿರುವ ದೇವದತ್ ಪಡಿಕ್ಕಲ್​ಗೆ ಮುಂದಿನ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆಗಳು ತೀರ ಕಡಿಮೆ ಇವೆ. ಇದು ಮುಂಬರುವ ಮೆಗಾ ಹರಾಜಿನಲ್ಲಿ ಪಡಿಕ್ಕಲ್​ರನ್ನು ಯಾರು ಖರೀದಿಸದೆ ಇರಬಹುದು.

Published On - 4:57 pm, Sat, 13 April 24

Loading...
Unable to load recommendations.
Follow Us