- Kannada News Photo gallery Cricket photos IPL 2024 Playoffs Dot Balls: How Many Trees BCCI is Going to Plant?
IPL 2024: ಬರೋಬ್ಬರಿ 323 ಡಾಟ್ ಬಾಲ್: ಬಿಸಿಸಿಐ ಎಷ್ಟು ಗಿಡಗಳನ್ನು ನೆಡಲಿದೆ ಗೊತ್ತಾ?
IPL 2024 Playoffs Dot Balls: ಈ ಬಾರಿಯ ಐಪಿಎಲ್ನ ಪ್ಲೇಆಫ್ ಪಂದ್ಯಗಳಲ್ಲಿ ಎಸೆಯಲ್ಪಡುವ ಪ್ರತಿ ಡಾಟ್ ಬಾಲ್ಗೂ ಗಿಡಗಳನ್ನು ನೆಡುವುದಾಗಿ ಬಿಸಿಸಿಐ ಘೋಷಿಸಿತ್ತು. ಅದರಂತೆ ನಾಲ್ಕು ಪ್ಲೇಆಫ್ ಪಂದ್ಯಗಳೊಂದಿಗೆ ಐಪಿಎಲ್ ಮುಗಿದಿದೆ. ಇದೀಗ ಗ್ರೀನ್ ಟ್ರೀ ಅಭಿಯಾನದಂತೆ ಬಿಸಿಸಿಐ ಒಂದುವರೆ ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಡಲಿದೆ.
Updated on:May 27, 2024 | 2:34 PM

IPL 2024: ಐಪಿಎಲ್ ಪ್ಲೇಆಫ್ಸ್ ಪಂದ್ಯಕ್ಕೂ ಮುನ್ನ ಬಿಸಿಸಿಐ ವಿಶೇಷ ಅಭಿಯಾನವನ್ನು ಕೈಗೆತ್ತಿಗೊಂಡಿತ್ತು. ಈ ಅಭಿಯಾನದಂತೆ ಪ್ಲೇಆಫ್ಸ್ ಪಂದ್ಯಗಳಲ್ಲಿ ಮಾಡುವ ಪ್ರತಿ ಡಾಟ್ ಬಾಲ್ಗೆ ಟಾಟಾ ಕಂಪೆನಿಯ ಸಹಭಾಗಿತ್ವದಲ್ಲಿ 500 ಗಿಡಗಳನ್ನು ನೆಡುವುದಾಗಿ ಬಿಸಿಸಿಐ ಘೋಷಿಸಿತ್ತು.

ಇದೇ ಕಾರಣದಿಂದಾಗಿ ಪ್ಲೇಆಫ್ಸ್ ಪಂದ್ಯಗಳ ವೇಳೆ ಡಾಟ್ ಬಾಲ್ ಸ್ಥಾನದಲ್ಲಿ ಹಸಿರು ಮರದ ಚಿತ್ರದ ಗ್ರಾಫಿಕ್ಸ್ ಅನ್ನು ಬಳಸಲಾಗಿತ್ತು. ಇದೀಗ ಐಪಿಎಲ್ ಸೀಸನ್ 17 ಮುಗಿದಿದೆ. ಅಂತಿಮ ಹಂತದ ನಾಲ್ಕು ಪಂದ್ಯಗಳಲ್ಲಿ ಎಷ್ಟು ಡಾಟ್ ಬಾಲ್ ಆಗಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಕುತೂಹಲಕ್ಕೆ ಇಲ್ಲಿದೆ ಉತ್ತರ...

ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಣ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಒಟ್ಟು 73 ಡಾಟ್ ಬಾಲ್ಗಳನ್ನು ಎಸೆಯಲಾಗಿದೆ.

ಇನ್ನು ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಎಲಿಮಿನೇಟರ್ ಪಂದ್ಯದಲ್ಲಿ ಒಟ್ಟು 74 ಡಾಟ್ ಬಾಲ್ಗಳು ಮೂಡಿಬಂದಿದ್ದವು.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಿದ್ದವು. ಈ ಪಂದ್ಯದಲ್ಲಿ ಒಟ್ಟು 96 ಡಾಟ್ ಬಾಲ್ಗಳನ್ನು ಆಡಲಾಗಿದೆ.

ಇನ್ನು ಚೆನ್ನೈನ ಎಂಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಣ ಐಪಿಎಲ್ನ ಫೈನಲ್ ಪಂದ್ಯದಲ್ಲಿ ಒಟ್ಟು 80 ಡಾಟ್ ಬಾಲ್ಗಳು ಮೂಡಿಬಂದಿವೆ.

ಅಂದರೆ ಪ್ಲೇಆಫ್ ಪಂದ್ಯಗಳಲ್ಲಿ ಮೂಡಿಬಂದಿರುವ ಡಾಟ್ ಬಾಲ್ಗಳ ಒಟ್ಟು ಸಂಖ್ಯೆ 323. ಇಲ್ಲಿ ಪ್ರತಿ ಡಾಟ್ ಬಾಲ್ಗೆ 500 ಗಿಡಗಳನ್ನು ನೆಡುವುದಾಗಿ ಬಿಸಿಸಿಐ ಘೋಷಿಸಿದೆ. ಅದರಂತೆ ಬಿಸಿಸಿಐ ಟಾಟಾ ಸಹಭಾಗಿತ್ವದಲ್ಲಿ ಒಟ್ಟು 1,61,500 ಗಿಡಗಳನ್ನು ನೆಡಲಿದೆ.
Published On - 2:32 pm, Mon, 27 May 24




