IPL 2024: ಗುಜರಾತ್​ಗೆ ಕನ್ನಡಿಗ, ರಾಜಸ್ಥಾನಕ್ಕೆ ರಣಜಿ ಹೀರೋ ಬದಲಿಯಾಗಿ ಎಂಟ್ರಿ

|

Updated on: Mar 22, 2024 | 4:28 PM

IPL 2024: 17ನೇ ಆವೃತ್ತಿಯ ಐಪಿಎಲ್ ಇಂದಿನಿಂದ ಆರಂಭವಾಗುತ್ತಿದ್ದು, ಅದಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ತಲಾ ಒಬ್ಬೊಬ್ಬರು ಬದಲಿ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿವೆ. ಅದರಂತೆ ಕನ್ನಡಿಗ ಬಿಆರ್ ಶರತ್ ಗುಜರಾತ್ ತಂಡಕ್ಕೆ ಹಾಗೂ ರಣಜಿ ಹೀರೋ ತನುಷ್ ಕೋಟ್ಯಾನ್ ರಾಜಸ್ಥಾನ ತಂಡಕ್ಕೆ ಸೇರಿಕೊಂಡಿದ್ದಾರೆ.

1 / 7
ಕೆಲವು ದಿನಗಳ ಹಿಂದೆ ಬೈಕ್ ಅಪಘಾತಕ್ಕೀಡಾಗಿದ್ದ ಗುಜರಾತ್ ಟೈಟಾನ್ಸ್ ತಂಡದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಾಬಿನ್ ಮಿಂಜ್ ಲೀಗ್​ನಿಂದಲೇ ಹೊರಬಿದ್ದಿದ್ದರು. ಇದೀಗ ಅವರ ಬದಲಿ ಆಟಗಾರನನ್ನು ಫ್ರಾಂಚೈಸಿ  ಹೆಸರಿಸಿದೆ.

2 / 7
ಐಪಿಎಲ್ 2024 ರ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ರಾಬಿನ್ ಮಿಂಜ್ ಅವರನ್ನು 3.60 ಕೋಟಿ ರೂಪಾಯಿಗೆ ಖರೀದಿಸಿತ್ತು. ಆದರೀಗ ಅವರ ಸ್ಥಾನವನ್ನು ತುಂಬಲು ಫ್ರಾಂಚೈಸಿ ಕನ್ನಡಿಗ ಬಿಆರ್ ಶರತ್ ಅವರನ್ನು ಮೂಲ ಬೆಲೆ 20 ಲಕ್ಷಕ್ಕೆ ತಂಡಕ್ಕೆ ಸೇರಿಸಿಕೊಂಡಿದೆ.

3 / 7
ಬಿಆರ್ ಶರತ್ ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕದ ಪರ ಆಡುತ್ತಿದ್ದಾರೆ. ಅವರು ಇಲ್ಲಿಯವರೆಗೆ 20 ಪ್ರಥಮ ದರ್ಜೆ ಪಂದ್ಯಗಳಲ್ಲಿ 1 ಶತಕ ಮತ್ತು ಮೂರು ಅರ್ಧ ಶತಕಗಳನ್ನು ಒಳಗೊಂಡಂತೆ 616 ರನ್ ಗಳಿಸಿದ್ದಾರೆ. ಹಾಗೆಯೇ 43 ಲಿಸ್ಟ್-ಎ ಪಂದ್ಯಗಳಲ್ಲಿ 732 ರನ್ 28 ಟಿ20 ಪಂದ್ಯಗಳಲ್ಲಿ 328 ರನ್ ಗಳಿಸಿದ್ದಾರೆ.

4 / 7
ಗುಜರಾತ್ ಜೊತೆಗೆ ರಾಜಸ್ಥಾನ್ ತಂಡಕ್ಕೂ ಬದಲಿ ಆಟಗಾರನ ಆಗಮನವಾಗಿದೆ. ನಿನ್ನೆಯಷ್ಟೇ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆಡಮ್ ಝಂಪಾ ವೈಯಕ್ತಿಕ ಕಾರಣಗ ನೀಡಿ ಲೀಗ್​ನಿಂದ ಹಿಂದೆ ಸರಿದಿದ್ದರು. ಇದೀಗ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ತನುಷ್ ಕೋಟ್ಯಾನ್ ರಾಜಸ್ಥಾನ್ ತಂಡವನ್ನು ಸೇರಿಕೊಂಡಿದ್ದಾರೆ.

5 / 7
ರಾಜಸ್ಥಾನ್ ತಂಡ ಸೇರಿಕೊಂಡಿರವ ತನುಷ್ ಕೋಟ್ಯಾನ್ ಪ್ರಸಕ್ತ ರಣಜಿಯಲ್ಲಿ ಮುಂಬೈ ಪರ ಅದ್ಭುತ ಪ್ರದರ್ಶನ ನೀಡಿದ್ದರು. ರಣಜಿಯಲ್ಲಿ ಆಡಿದ 14 ಇನ್ನಿಂಗ್ಸ್‌ಗಳಲ್ಲಿ 41.83 ಸರಾಸರಿಯಲ್ಲಿ ಒಂದು ಶತಕ ಮತ್ತು 5 ಅರ್ಧ ಶತಕ ಒಳಗೊಂಡಂತೆ 502 ರನ್ ಬಾರಿಸಿದ್ದರು. ಹಾಗೆಯೇ ಬೌಲಿಂಗ್​ನಲ್ಲೂ ಮಿಂಚಿದ್ದ ಕೋಟ್ಯಾನ್ 18 ಇನ್ನಿಂಗ್ಸ್‌ಗಳಲ್ಲಿ 29 ವಿಕೆಟ್‌ಗಳನ್ನು ಪಡೆದಿದ್ದರು.

6 / 7
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಧ್ರುವ್ ಜುರೆಲ್, ಕುನಾಲ್ ರಾಥೋರ್, ಡೊನೊವನ್ ಫೆರೇರಾ, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ರೋವ್ಮನ್ ಪೊವೆಲ್, ಶುಭಂ ದುಬೆ, ರವಿಚಂದ್ರನ್ ಅಶ್ವಿನ್, ಅಬಿದ್ ಮುಷ್ತಾಕ್, ಟ್ರೆಂಟ್ ಬೌಲ್ಟ್, ಸಂಜ್ವೇಂದ್ರ ಚಾಹಲ್, ನವದೀಪ್ ಸೈನಿ, ಕುಲದೀಪ್ ಸೇನ್, ತನುಷ್ ಕೋಟ್ಯಾನ್, ನಾಂದ್ರೆ ಬರ್ಗರ್, ಅವೇಶ್ ಖಾನ್.

7 / 7
ಗುಜರಾತ್ ಟೈಟಾನ್ಸ್: ಶುಭ್​ಮನ್ ಗಿಲ್ (ನಾಯಕ), ಡೇವಿಡ್ ಮಿಲ್ಲರ್, ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹಾ, ಕೇನ್ ವಿಲಿಯಮ್ಸನ್, ಅಭಿನವ್ ಮನೋಹರ್, ಬಿ ಸಾಯಿ ಸುದರ್ಶನ್, ದರ್ಶನ್ ನಲ್ಕಂಡೆ, ವಿಜಯ್ ಶಂಕರ್, ಜಯಂತ್ ಯಾದವ್, ರಾಹುಲ್ ತೆವಾಟಿಯಾ, ನೂರ್ ಅಹಮದ್, ಸಾಯಿ ಕಿಶೋರ್, ರಶೀದ್ ಖಾನ್, ಜೋಸ್ಹು ಲಿಟಲ್, ಮೋಹಿತ್ ಶರ್ಮಾ, ಅಜ್ಮತುಲ್ಲಾ ಒಮರ್ಜಾಯ್, ಉಮೇಶ್ ಯಾದವ್, ಶಾರುಖ್ ಖಾನ್, ಸುಶಾಂತ್ ಮಿಶ್ರಾ, ಕಾರ್ತಿಕ್ ತ್ಯಾಗಿ, ಮಾನವ್ ಸುತಾರ್, ಸ್ಪೆನ್ಸರ್ ಜಾನ್ಸನ್, ಸಂದೀಪ್ ವಾರಿಯರ್, ಬಿಆರ್ ಶರತ್.