- Kannada News Photo gallery Cricket photos IPL 2024 Rajasthan Royals captain Sanju Samson fined 12 lakh
IPL 2024: ಗುಜರಾತ್ ವಿರುದ್ಧ ಮಾಡಿದ ತಪ್ಪಿಗೆ ಭಾರಿ ದಂಡ ತೆತ್ತ ಸಂಜು ಸ್ಯಾಮ್ಸನ್..!
IPL 2024: ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ನಾಯಕ ಸಂಜು ಸ್ಯಾಮ್ಸನ್ ಮಾಡಿದ ತಪ್ಪಿಗೆ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ. ಅದರಂತೆ ಸಂಜು ಪಂದ್ಯ ಶುಲ್ಕದಲ್ಲಿ 12 ಲಕ್ಷ ರೂಗಳನ್ನು ದಂಡವಾಗಿ ಪಾವತಿಸಬೇಕಿದೆ.
Updated on: Apr 11, 2024 | 4:06 PM

ಐಪಿಎಲ್ 2024ರಲ್ಲಿ ನಡೆದ 22ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮೂರು ವಿಕೆಟ್‌ಗಳಿಂದ ಮಣಿಸಿದ ಗುಜರಾತ್ ಟೈಟಾನ್ಸ್ ಲೀಗ್ನಲ್ಲಿ ಮೂರನೇ ಜಯ ಸಾಧಿಸಿದೆ. ಇತ್ತ ಲೀಗ್ನಲ್ಲಿ ಅಜೇಯರಾಗಿ ಉಳಿದಿದ್ದ ರಾಜಸ್ಥಾನ್ ರಾಯಲ್ಸ್ ಕೂಡ ತನ್ನ ಮೊದಲ ಸೋಲು ಎದುರಿಸಿದೆ.

ರಾಜಸ್ಥಾನ್ ನೀಡಿದ196 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೈಟಾನ್ಸ್ ಕೊನೆಯ ಐದು ಓವರ್‌ಗಳಲ್ಲಿ ಅದ್ಭುತ ಆಟ ಪ್ರದರ್ಶಿಸಿ 30 ಎಸೆತಗಳಲ್ಲಿ 73 ರನ್ ಕಲೆ ಹಾಕಿ ಗೆಲುವಿನ ದಡ ಸೇರಿತು. 20ನೇ ಓವರ್ನ ಕೊನೆಯ ಎಸೆತದಲ್ಲಿ ರಶೀದ್ ಖಾನ್ ಬೌಂಡರಿ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸೋಲಿನ ಹೊರತಾಗಿಯೂ ರಾಯಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, ಪಂದ್ಯದಲ್ಲಿ ನಾಯಕ ಸಂಜು ಸ್ಯಾಮ್ಸನ್ ಮಾಡಿದ ತಪ್ಪಿಗೆ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ. ಅದರಂತೆ ಸಂಜು ಪಂದ್ಯ ಶುಲ್ಕದಲ್ಲಿ 12 ಲಕ್ಷ ರೂಗಳನ್ನು ದಂಡವಾಗಿ ಪಾವತಿಸಬೇಕಿದೆ.

ವಾಸ್ತವವಾಗಿ ಗುಜರಾತ್ ಟೈಟಾನ್ಸ್ ವಿರುದ್ಧ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡ ಪರಿಣಾಮವಾಗಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ ದಂಡ ವಿಧಿಸಲಾಗಿದೆ. ಈ ಸೀಸನ್ನಲ್ಲಿ ಸಂಜು ಮಾಡಿದ ಮೊದಲ ಅಪರಾಧವಾಗಿದೆ. ಆದ್ದರಿಂದ ಸ್ಯಾಮ್ಸನ್‌ಗೆ ರೂ 12 ಲಕ್ಷ ದಂಡ ವಿಧಿಸಲಾಗಿದೆ.

ಇನ್ನು ಪಂದ್ಯದ ಬಗ್ಗೆ ಹೇಳುವುದಾದರೆ.. ಮಂದಗತಿಯ ಆರಂಭದ ಹೊರತಾಗಿಯೂ ಆರ್‌ಆರ್ ಅದ್ಭುತ ಪ್ರದರ್ಶನ ನೀಡಿದ್ದು ಗಮನಾರ್ಹ. ತಂಡದ ಪರ ನಾಯಕ ಸ್ಯಾಮ್ಸನ್ ಕೇವಲ 38 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದರೆ ರಿಯಾನ್ ಪರಾಗ್ ಕೂಡ 48 ಎಸೆತಗಳಲ್ಲಿ 76 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ರಾಜಸ್ಥಾನ ರಾಯಲ್ಸ್ 3 ವಿಕೆಟ್‌ಗೆ 196 ರನ್ ಗಳಿಸಲು ನೆರವಾದರು.

ಗುರಿ ಬೆನ್ನಟ್ಟಿದ ಟೈಟಾನ್ಸ್ ಪರ ಶುಭ್‌ಮನ್ ಗಿಲ್ 44 ಎಸೆತಗಳಲ್ಲಿ 72 ರನ್ ಗಳಿಸಿದರೆ ರಾಹುಲ್ ತೆವಾಟಿಯಾ (11 ಎಸೆತಗಳಲ್ಲಿ 22) ಮತ್ತು ರಶೀದ್ ಖಾನ್ (11 ಎಸೆತಗಳಲ್ಲಿ 24*) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.




