IPL 2024: ಪ್ಲೇಆಫ್ ಪ್ರವೇಶಿಸಲು RCB ತಂಡಕ್ಕಿದೆ ಉತ್ತಮ ಅವಕಾಶ

| Updated By: ಝಾಹಿರ್ ಯೂಸುಫ್

Updated on: Apr 29, 2024 | 9:29 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ (ಐಪಿಎಲ್ 2024) ಸೀಸನ್ 17 ರಲ್ಲಿ ಇದುವರೆಗೆ 10 ಪಂದ್ಯಗಳನ್ನಾಡಿರುವ ಆರ್​ಸಿಬಿ 3 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಸಿಎಸ್​ಕೆ ವಿರುದ್ಧದ ಸೋಲಿನೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿದ ಆರ್​ಸಿಬಿ ಆ ಬಳಿಕ ಪಂಜಾಬ್ ಕಿಂಗ್ಸ್, ಎಸ್​ಆರ್​ಹೆಚ್​ ಹಾಗೂ ಗುಜರಾತ್ ಟೈಟಾನ್ಸ್ ವಿರುದ್ಧ ಗೆಲುವಿನ ನಗೆ ಬೀರಿದೆ.

1 / 6
ಇಂಡಿಯನ್ ಪ್ರೀಮಿಯರ್ ಲೀಗ್​ (IPL 2024) ಸೀಸನ್​ 17 ರಲ್ಲಿ ಸೋಲುಗಳಿಂದ ಕಂಗೆಟ್ಟಿದ್ದ ಆರ್​ಸಿಬಿ ತಂಡವು ಇದೀಗ ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸಿದೆ. ಮೊದಲಾರ್ಧದ 7 ಪಂದ್ಯಗಳಲ್ಲಿ ಕೇವಲ 1 ಜಯ ಸಾಧಿಸಿದ್ದ ಆರ್​ಸಿಬಿ, ದ್ವಿತೀಯಾರ್ಧದಲ್ಲಿ 2 ಗೆಲುವು ಸಾಧಿಸಿದೆ. ಈ ಮೂಲಕ ಒಟ್ಟು 6 ಅಂಕಗಳನ್ನು ಕಲೆಹಾಕಿದೆ.

2 / 6
ಈ 6 ಅಂಕಗಳೊಂದಿಗೆ ಆರ್​ಸಿಬಿ ತಂಡದ ಪ್ಲೇಆಫ್ ಆಸೆ ಕೂಡ ಜೀವಂತವಾಗಿದೆ. ಅಂದರೆ ಮುಂದಿನ 4 ಪಂದ್ಯಗಳಲ್ಲೂ ಭರ್ಜರಿ ಜಯ ಸಾಧಿಸಿದರೆ ಆರ್​ಸಿಬಿ ತಂಡಕ್ಕೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಸಿಗಲಿದೆ. ಆದರೆ ಅದಕ್ಕೂ ಮುನ್ನ ಇತರೆ ತಂಡಗಳ ಫಲಿತಾಂಶಗಳನ್ನು ಎದುರು ನೋಡಬೇಕಾಗುತ್ತದೆ.

3 / 6
ಪ್ರಸ್ತುತ ಅಂಕ ಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ಆರ್​ಸಿಬಿ 6 ಅಂಕಗಳನ್ನು ಹೊಂದಿದೆ. ಇನ್ನು ಗುಜರಾತ್ ಟೈಟಾನ್ಸ್ ತಂಡ 8 ಪಾಯಿಂಟ್ಸ್​ ಪಡೆದುಕೊಂಡಿದೆ. ಇನ್ನುಳಿದಂತೆ ಕೆಕೆಆರ್, ಸಿಎಸ್​ಕೆ, ಎಲ್​ಎಸ್​ಜಿ, ಎಸ್​ಆರ್​ಹೆಚ್, ಡೆಲ್ಲಿ ಕ್ಯಾಪಿಟಲ್ಸ್ ತಂಡ 10 ಅಂಕಗಳನ್ನು ಹೊಂದಿದೆ. ಅತ್ತ ರಾಜಸ್ಥಾನ್ ರಾಯಲ್ಸ್ 16 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸುವುದನ್ನು ಬಹುತೇಕ ಖಚಿತಪಡಿಸಿಕೊಂಡಿದೆ.

4 / 6
ಅಂದರೆ ಇಲ್ಲಿ ಆರ್​ಆರ್​ ತಂಡದ ಗೆಲುವು ಮತ್ತು ಸೋಲು ಆರ್​ಸಿಬಿ ತಂಡವನ್ನು ಬಾಧಿಸುವುದಿಲ್ಲ. ಇದಾಗ್ಯೂ ರಾಜಸ್ಥಾನ್ ರಾಯಲ್ಸ್ 20 ಅಂಕಗಳನ್ನು ಪಡೆದರೆ ಆರ್​ಸಿಬಿಗೆ ಅನುಕೂಲವಾಗಲಿದೆ. ಹಾಗೆಯೇ ಎಸ್​ಆರ್​ಹೆಚ್ ಮುಂದಿನ ಪಂದ್ಯಗಳನ್ನು ಗೆದ್ದು 20 ಅಂಕಗಳನ್ನು ಪಡೆಯಬೇಕು. ಇನ್ನುಳಿದಂತೆ ಕೆಕೆಆರ್ 16 ಅಂಕಗಳನ್ನು ಪಡೆದರೆ ಆರ್​ಸಿಬಿ ತಂಡದ ಪ್ಲೇಆಫ್ ಹಾದಿ ಸುಗಮವಾಗಲಿದೆ.

5 / 6
ಆರ್​ಆರ್​, ಎಸ್​ಆರ್​ಹೆಚ್, ಕೆಕೆಆರ್ ಕ್ರಮವಾಗಿ 20, 20 ಮತ್ತು 16 ಅಂಕಗಳನ್ನು ಪಡೆಯುವುದರಿಂದ ಸಿಎಸ್​ಕೆ, ಎಲ್​ಎಸ್​ಜಿ, ಜಿಟಿ, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ಅಂಕಗಳು 12 ರಲ್ಲೇ ಉಳಿಯಲಿದೆ. ಅಂದರೆ ಈ ತಂಡಗಳು ಆರಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಗೆಲ್ಲಬಾರದು. ಒಂದು ವೇಳೆ 7 ಮ್ಯಾಚ್​ಗಳಲ್ಲಿ ಜಯ ಸಾಧಿಸಿದರೆ ನೆಟ್ ರನ್ ರೇಟ್ ಪರಿಗಣನೆಗೆ ಬರಲಿದೆ.

6 / 6
ಇದೇ ವೇಳೆ ಆರ್​ಸಿಬಿ ತಂಡವು ಮುಂದಿನ ಎಲ್ಲಾ ಪಂದ್ಯಗಳಲ್ಲೂ ಭರ್ಜರಿ ಜಯ ಸಾಧಿಸಿ ಉತ್ತಮ ನೆಟ್ ರನ್​ ರೇಟ್​ನೊಂದಿಗೆ ಒಟ್ಟು 14 ಅಂಕಗಳನ್ನು ಸಂಪಾದಿಸಬಹುದು. ಈ ಮೂಲಕ ಇತರೆ ತಂಡಗಳನ್ನು ಹಿಂದಿಕ್ಕಿ ಪ್ಲೇಆಫ್ ಪ್ರವೇಶಿಸುವ ಅವಕಾಶ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊರೆಯಲಿದೆ. ಅದರಂತೆ ಆರ್​ಸಿಬಿ ತಂಡ ಈ ಬಾರಿ ಪ್ಲೇಆಫ್ ಹಂತಕ್ಕೇರಲಿದೆಯಾ ಕಾದು ನೋಡಬೇಕಿದೆ.