- Kannada News Photo gallery Cricket photos IPL 2024: Shubman Gill Likely To Leave Gujarat Titans Reports
IPL 2024: ಗುಜರಾತ್ ಟೈಟಾನ್ಸ್ ತಂಡಕ್ಕೆ ಶುಭ್ಮನ್ ಗಿಲ್ ಗುಡ್ ಬೈ..?
IPL 2024: ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಕೂಡ ಯುವ ಆಟಗಾರನ ಮೇಲೆ ಕಣ್ಣಿಟ್ಟಿದೆ. ಒಂದು ವೇಳೆ ಶುಭ್ಮನ್ ಗಿಲ್ ಹರಾಜಿನಲ್ಲಿ ಕಾಣಿಸಿಕೊಂಡರೆ ಎಸ್ಆರ್ಹೆಚ್ ಬಿಡ್ಡಿಂಗ್ ನಡೆಸುವುದು ಖಚಿತ.
Updated on: Jun 22, 2023 | 10:33 PM

IPL 2024: ಐಪಿಎಲ್ 2024ರ ಮಿನಿ ಹರಾಜಿಗೂ ಮುನ್ನ ಗುಜರಾತ್ ಟೈಟಾನ್ಸ್ (Gujarat Titans) ತಂಡದ ಆರಂಭಿಕ ಆಟಗಾರ ಶುಭಮನ್ ಗಿಲ್ (Shubhman Gill) ತಂಡವನ್ನು ತೊರೆಯಲಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಗಿಲ್ಗೆ ಇತರೆ ಫ್ರಾಂಚೈಸಿಗಳ ಕಡೆಯಿಂದ ಬರುತ್ತಿರುವ ಭರ್ಜರಿ ಆಫರ್.

ಏಕೆಂದರೆ ಪ್ರಸ್ತುತ ಶುಭ್ಮನ್ ಗಿಲ್ಗೆ ಗುಜರಾತ್ ಟೈಟಾನ್ಸ್ ನೀಡುತ್ತಿರುವುದು 8 ಕೋಟಿ ರೂ. ಮಾತ್ರ. ಆದರೆ ಇಶಾನ್ ಕಿಶನ್ (15.25 ಕೋಟಿ ರೂ.), ಶ್ರೇಯಸ್ ಅಯ್ಯರ್ (12.25 ಕೋಟಿ ರೂ.) ಸೇರಿದಂತೆ ಕೆಲ ಆಟಗಾರರು 10 ಕೋಟಿಗಿಂತಲೂ ಅಧಿಕ ಮೊತ್ತ ಪಡೆಯುತ್ತಿದ್ದಾರೆ.

ಅಲ್ಲದೆ ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಗಿಲ್ 17 ಇನ್ನಿಂಗ್ಸ್ ಗಳಲ್ಲಿ 890 ರನ್ ಗಳಿಸಿ ಮಿಂಚಿದ್ದರು. ಇದರಲ್ಲಿ 3 ಶತಕ ಹಾಗೂ 4 ಅರ್ಧ ಶತಕಗಳಿರುವುದು ಗಮನಾರ್ಹ. ಹಾಗೆಯೇ ಗುಜರಾತ್ ಟೈಟಾನ್ಸ್ ತಂಡವನ್ನು ಸತತ ಎರಡನೇ ಬಾರಿಗೆ ಫೈನಲ್ ತಲುಪುವಲ್ಲಿ ಗಿಲ್ ಪ್ರಮುಖ ಪಾತ್ರವಹಿಸಿದ್ದರು.

ಹೀಗಾಗಿ ಇತರೆ ಫ್ರಾಂಚೈಸಿಗಳು ಗಿಲ್ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕಾಗಿ ಯುವ ಆಟಗಾರನನ್ನು ಮಿನಿ ಹರಾಜಿಗೆ ಕರೆತರುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇತ್ತ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಶುಭ್ಮನ್ ಗಿಲ್ ಅವರ ಖರೀದಿಗಾಗಿ ಹೆಚ್ಚಿನ ಆಸಕ್ತಿ ತೋರಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದರ ನಡುವೆ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಕೂಡ ಯುವ ಆಟಗಾರನ ಮೇಲೆ ಕಣ್ಣಿಟ್ಟಿದೆ. ಒಂದು ವೇಳೆ ಶುಭ್ಮನ್ ಗಿಲ್ ಹರಾಜಿನಲ್ಲಿ ಕಾಣಿಸಿಕೊಂಡರೆ ಎಸ್ಆರ್ಹೆಚ್ ಬಿಡ್ಡಿಂಗ್ ನಡೆಸುವುದು ಖಚಿತ ಎನ್ನಬಹುದು. ಏಕೆಂದರೆ ಬೃಹತ್ ಮೊತ್ತ ನೀಡಿ ಎಸ್ಆರ್ಹೆಚ್ ಫ್ರಾಂಚೈಸಿ ಖರೀದಿಸಿದ ಆಟಗಾರರು ಈ ಬಾರಿ ಸಂಪೂರ್ಣ ವಿಫಲರಾಗಿದ್ದರು.

ಹೀಗಾಗಿ ಭಾರತದ ಪ್ರತಿಭಾನ್ವಿತ ಆಟಗಾರರಿಗೆ ಮಣೆಹಾಕಿ ಬ್ರಾಂಡ್ ವ್ಯಾಲ್ಯೂ ಹೆಚ್ಚಿಸಿಕೊಳ್ಳುವ ಇರಾದೆಯಲ್ಲಿದೆ ಸನ್ರೈಸರ್ಸ್ ಹೈದರಾಬಾದ್. ಹೀಗಾಗಿಯೇ ಶುಭ್ಮನ್ ಗಿಲ್ ಗುಜರಾತ್ ಟೈಟಾನ್ಸ್ ತಂಡವನ್ನು ತೊರೆಯುವುದನ್ನು ಸನ್ರೈಸರ್ಸ್ ಹೈದರಾಬಾ್ ಎದುರು ನೋಡುತ್ತಿದೆ.

ಇನ್ನು ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದರೆ ಶುಭ್ಮನ್ ಗಿಲ್ಗೆ ನಾಯಕತ್ವ ಸಿಗುವುದಿಲ್ಲ ಎಂಬುದು ಖಚಿತ. ಏಕೆಂದರೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಇನ್ನು ಐದಾರು ವರ್ಷಗಳ ಕಾಲ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.

ಒಂದು ವೇಳೆ ಶುಭ್ಮನ್ ಗಿಲ್ ಗುಜರಾತ್ ಟೈಟಾನ್ಸ್ ತಂಡವನ್ನು ತೊರೆದರೆ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ಒಲಿಯಬಹುದು. ಹಾಗೆಯೇ ಸನ್ರೈಸರ್ಸ್ ಹೈದರಾಬಾದ್ ಕೂಡ ಯುವ ಆಟಗಾರನನಿಗೆ ಕ್ಯಾಪ್ಟನ್ ಪಟ್ಟ ನೀಡಬಹುದು. ಈ ಎಲ್ಲಾ ಲೆಕ್ಕಾಚಾರಗಳೊಂದಿಗೆ ಶುಭ್ಮನ್ ಗಿಲ್ ಐಪಿಎಲ್ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
