IPL 2024: ನಾಯಕನಾಗಿ ಮೊದಲ ಅರ್ಧಶತಕ ಸಿಡಿಸಿದ ಶುಭ್‌ಮನ್ ಗಿಲ್..!
IPL 2024 Shubman Gill: ಗಿಲ್ಗೆ ಈ ಅರ್ಧಶತಕ ಹಲವು ರೀತಿಯಲ್ಲಿ ವಿಶೇಷವಾಗಿತ್ತು. ಇದು ನಾಯಕನಾಗಿ ಶುಭ್‌ಮನ್ ಅವರ ಮೊದಲ ಅರ್ಧಶತಕವಾಗದ್ದರೆ, ಈ ಸೀಸನ್ನಲ್ಲಿ ಅರ್ಧಶತಕ ಬಾರಿಸಿದ ಗುಜರಾತ್‌ನ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಶುಭ್‌ಮನ್ ಪಾತ್ರರಾಗಿದ್ದಾರೆ.
1 / 7
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನಾಯಕ ಶುಭ್‌ಮನ್ ಗಿಲ್ ಈ ಸೀಸನ್ನ ಮೊದಲ ಅರ್ಧಶತಕ ಸಿಡಿಸಿದ್ದಾರೆ.
2 / 7
ಗಿಲ್ಗೆ ಈ ಅರ್ಧಶತಕ ಹಲವು ರೀತಿಯಲ್ಲಿ ವಿಶೇಷವಾಗಿತ್ತು. ಇದು ನಾಯಕನಾಗಿ ಶುಭ್‌ಮನ್ ಅವರ ಮೊದಲ ಅರ್ಧಶತಕವಾಗದ್ದರೆ, ಈ ಸೀಸನ್ನಲ್ಲಿ ಅರ್ಧಶತಕ ಬಾರಿಸಿದ ಗುಜರಾತ್‌ನ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಶುಭ್‌ಮನ್ ಪಾತ್ರರಾಗಿದ್ದಾರೆ.
3 / 7
ಆರಂಭಿಕನಾಗಿ ಕಣಕ್ಕಿಳಿದಿದ್ದ ಗಿಲ್ ತಮ್ಮ ಇನ್ನಿಂಗ್ಸ್ನಲ್ಲಿ 48 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 89 ರನ್ ಕಲೆಹಾಕಿದರು. ಅವರ ಇನ್ನಿಂಗ್ಸ್ನ ವಿಶೇಷತೆಯೆಂದರೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಗಿಲ್, ಕೊನೆಯವರೆಗೂ ಔಟಾಗದೆ ಉಳಿದರು.
4 / 7
ಇದು ಶುಭ್‌ಮನ್ ಗಿಲ್ ಅವರ ಐಪಿಎಲ್ ವೃತ್ತಿಜೀವನದ 19ನೇ ಅರ್ಧಶತಕವಾಗಿದ್ದರೆ, ಪಂಜಾಬ್ ವಿರುದ್ಧ ಆರನೇ ಅರ್ಧಶತಕವಾಗಿದೆ. ಗಿಲ್ ಈ ಹಿಂದೆ ಪಂಜಾಬ್ ಕಿಂಗ್ಸ್ ವಿರುದ್ಧ ಔಟಾಗದೆ 65, 57, 57, 9, 7, 96, 9 ಮತ್ತು 67 ರನ್ ಬಾರಿಸಿದ್ದರು.
5 / 7
ಇನ್ನು ಪಂದ್ಯದ ಬಗ್ಗೆ ಮಾತನಾಡುವುದಾದರೆ.. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 199 ರನ್ ಕಲೆಹಾಕಿತು. ಗಿಲ್ ಹೊರತಾಗಿ ಸಾಯಿ ಸುದರ್ಶನ್, ಕೇನ್ ವಿಲಿಯಮ್ಸನ್, ರಾಹುಲ್ ತೇವಾಟಿಯಾ ಉಪಯುಕ್ತ ಇನ್ನಿಂಗ್ಸ್ ಆಡಿದರು.
6 / 7
ಗುಜರಾತ್ ಟೈಟಾನ್ಸ್ ತಂಡ: ಶುಭ್‌ಮನ್ ಗಿಲ್ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಕೇನ್ ವಿಲಿಯಮ್ಸನ್, ವಿಜಯ್ ಶಂಕರ್, ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹಮದ್, ಉಮೇಶ್ ಯಾದವ್ ಮತ್ತು ದರ್ಶನ್ ನಲ್ಕಂಡೆ.
7 / 7
ಪಂಜಾಬ್ ಕಿಂಗ್ಸ್ ತಂಡ: ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಪ್ರಭಾಸಿಮ್ರಾನ್ ಸಿಂಗ್, ಸ್ಯಾಮ್ ಕರನ್, ಶಶಾಂಕ್ ಸಿಂಗ್, ಸಿಕಂದರ್ ರಜಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ ಮತ್ತು ಅರ್ಷದೀಪ್ ಸಿಂಗ್.