IPL 2024: ಆರ್​ಸಿಬಿಗೆ ಮಗ್ಗಲು ಮುಳ್ಳಾದ ಕನ್ನಡಿಗ ಕಾವೇರಪ್ಪ..!

|

Updated on: May 09, 2024 | 8:41 PM

IPL 2024: ಪಂಜಾಬ್ ಪರ ಚೊಚ್ಚಲ ಪಂದ್ಯವನ್ನಾಡುತ್ತಿರುವ ಕನ್ನಡದ ವೇಗಿ ಕಾವೇರಪ್ಪ ಅದ್ಭುತ ಬೌಲಿಂಗ್‌ ಮಾಡಿದರು. ಈ ಪಂದ್ಯದಲ್ಲಿ ತಮ್ಮ ಖೋಟಾದ 4 ಓವರ್ ಬೌಲ್ ಮಾಡಿದ ಕಾವೇರಪ್ಪ ಪ್ರಮುಖ 2 ವಿಕೆಟ್​​ಗಳೊಂದಿಗೆ ಕೇವಲ 36 ರನ್ ಬಿಟ್ಟುಕೊಟ್ಟರು.

1 / 7
ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಸೋತ ತಂಡಕ್ಕೆ ಪ್ಲೇಆಫ್‌ ಬಾಗಿಲು ಮುಚ್ಚುವುದರಿಂದ ಎರಡೂ ತಂಡಗಳಿಗೂ ಗೆಲುವು ಅಗತ್ಯವಾಗಿದೆ.

2 / 7
ಗೆಲ್ಲಲೇಬೇಕಾದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಟಾಸ್ ಸೋತ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಈ ಪಂದ್ಯಕ್ಕೆ ಎರಡೂ ತಂಡಗಳಲ್ಲೂ ಮೂರು ಮೂರು ಬದಲಾವಣೆ ಮಾಡಿದೆ. ಅದರಂತೆ ಪಂಜಾಬ್ ತಂಡದಲ್ಲಿ ಕನ್ನಡಿಗ ವಿಧ್ವತ್ ಕಾವೇರಪ್ಪ ಸ್ಥಾನ ಪಡೆದಿದ್ದಾರೆ.

3 / 7
ಪಂಜಾಬ್ ಪರ ಚೊಚ್ಚಲ ಪಂದ್ಯವನ್ನಾಡುತ್ತಿರುವ ಕನ್ನಡದ ವೇಗಿ ಕಾವೇರಪ್ಪ ಅದ್ಭುತ ಬೌಲಿಂಗ್‌ ಮಾಡಿದರು. ಈ ಪಂದ್ಯದಲ್ಲಿ ತಮ್ಮ ಖೋಟಾದ 4 ಓವರ್ ಬೌಲ್ ಮಾಡಿದ ಕಾವೇರಪ್ಪ ಪ್ರಮುಖ 2 ವಿಕೆಟ್​​ಗಳೊಂದಿಗೆ ಕೇವಲ 36 ರನ್ ಬಿಟ್ಟುಕೊಟ್ಟರು.

4 / 7
ಇನ್ನಿಂಗ್ಸ್​ನ ಮೊದಲ ಓವರ್ ಬೌಲ್ ಮಾಡಿದ ಕಾವೇರಪ್ಪ 2 ಬೌಂಡರಿ ಸಹಿತ 11 ರನ್ ಬಿಟ್ಟುಕೊಟ್ಟರು. ಆದರೆ ಪ್ರಮುಖವಾಗಿ ಶೂನ್ಯಕ್ಕೆ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಅವಕಾಶದಿಂದ ವಂಚಿತರಾದರು. ಓವರ್​ನ 2ನೇ ಎಸತೆದಲ್ಲಿ ಕೊಹ್ಲಿ ಕ್ಯಾಚ್ ನೀಡಿದ್ದರು. ಆದರೆ ಅಶುತೋಷ್ ಕ್ಯಾಚನ್ನು ಕೈಚೆಲ್ಲಿದರು.

5 / 7
ತಮ್ಮ ಖೋಟಾದ 2ನೇ ಓವರ್​ನಲ್ಲಿ ಕೇವಲ 1 ರನ್ ನೀಡಿದ ಕಾವೇರಪ್ಪ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ವಿಪರ್ಯಾಸವೆಂದರೆ ಈ ಓವರ್​ನಲ್ಲೂ ವಿರಾಟ್ ಕೊಹ್ಲಿಯ ಕ್ಯಾಚನ್ನು ಕೈಚೆಲ್ಲಲಾಯಿತು.

6 / 7
ಇನ್ನು ಮೂರನೇ ಓವರ್​ನಲ್ಲಿ 8 ರನ್ ಬಿಟ್ಟುಕೊಟ್ಟ ಕಾವೇರಪ್ಪ ಈ ಓವರ್​ನಲ್ಲಿ ಆರ್​ಸಿಬಿಯ ಸ್ಫೋಟಕ ಬ್ಯಾಟರ್ ವಿಲ್ ಜ್ಯಾಕ್ಸ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇನ್ನೊಂದು ವಿಷಾಧನೀಯ ಸಂಗತಿಯೆಂದರೆ ಈ ಓವರ್​ನಲ್ಲೂ ರಜತ್ ಪಾಟಿದರ್ ಅವರ ಸುಲಭ ಕ್ಯಾಚನ್ನು ಹರ್ಷಲ್ ಪಟೇಲ್ ಕೈಚೆಲ್ಲಿದರು.

7 / 7
ತಮ್ಮ ಖೋಟಾದ ಕೊನೆಯ ಓವರ್​ನಲ್ಲಿ 16 ರನ್ ಬಿಟ್ಟುಕೊಟ್ಟ ಕಾವೇರಪ್ಪ ಕೊಂಚ ದುಬಾರಿಯಾದರು. ಅದ್ಭುತವಾಗಿ ಬೌಲಿಂಗ್ ಮಾಡಿದರು. ಒಟ್ಟಾರೆ ಕಾವೇರಪ್ಪ ಬೌಲಿಂಗ್​ನಲ್ಲಿ 3 ಕ್ಯಾಚ್ ಕೈಚೆಲ್ಲಿದ್ದು, ಪಂಜಾಬ್​ಗೆ ಯಾವ ರೀತಿಯಾಗಿ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ.