RCB ಗೆದ್ದರೂ, DC ಜಯಿಸಿದರೂ ಹೊಸ ಇತಿಹಾಸ ನಿರ್ಮಾಣ

Edited By:

Updated on: Mar 16, 2024 | 2:54 PM

IPL 2024 - WPL 2024: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (ಐಪಿಎಲ್) 16 ಸೀಸನ್​ಗಳನ್ನು ಆಡಿದೆ. ಇದೇ ಫ್ರಾಂಚೈಸಿಯ ಮಹಿಳಾ ತಂಡಗಳು ವುಮೆನ್ಸ್ ಪ್ರೀಮಿಯರ್ ಲೀಗ್​ನ 2 ಆವೃತ್ತಿಗಳಲ್ಲಿ ಕಣಕ್ಕಿಳಿದಿದೆ. ಇದೀಗ ಈ ಎರಡೂ ತಂಡಗಳು ಮೊದಲ ಬಾರಿ ಫೈನಲ್​ನಲ್ಲಿ ಮುಖಾಮುಖಿಯಾಗುತ್ತಿರುವುದು ವಿಶೇಷ.

1 / 5
ವುಮೆನ್ಸ್ ಪ್ರೀಮಿಯರ್ ಲೀಗ್​ನ (WPL 2024) ಫೈನಲ್ ಫೈಟ್​ಗೆ ವೇದಿಕೆ ಸಿದ್ಧವಾಗಿದೆ. ಭಾನುವಾರ (ಮಾ.17) ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿಯಾಗಲಿದೆ. ವಿಶೇಷ ಎಂದರೆ ಈ ಪಂದ್ಯದ ಫಲಿತಾಂಶದೊಂದಿಗೆ ಒಂದು ತಂಡ ಪ್ರಶಸ್ತಿ ಖಾತೆ ತೆರೆಯಲಿದೆ.

ವುಮೆನ್ಸ್ ಪ್ರೀಮಿಯರ್ ಲೀಗ್​ನ (WPL 2024) ಫೈನಲ್ ಫೈಟ್​ಗೆ ವೇದಿಕೆ ಸಿದ್ಧವಾಗಿದೆ. ಭಾನುವಾರ (ಮಾ.17) ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿಯಾಗಲಿದೆ. ವಿಶೇಷ ಎಂದರೆ ಈ ಪಂದ್ಯದ ಫಲಿತಾಂಶದೊಂದಿಗೆ ಒಂದು ತಂಡ ಪ್ರಶಸ್ತಿ ಖಾತೆ ತೆರೆಯಲಿದೆ.

2 / 5

ಅಂದರೆ ಉಭಯ ಫ್ರಾಂಚೈಸಿಗಳು ಕಳೆದ 16 ವರ್ಷಗಳಿಂದ ಭಾರತೀಯ ಅಂಗಳದಲ್ಲಿ ಟೂರ್ನಿ ಆಡುತ್ತಿದ್ದರೂ ಒಮ್ಮೆಯೂ ಟ್ರೋಫಿಯನ್ನು ಎತ್ತಿ ಹಿಡಿದಿಲ್ಲ. ಆರ್​ಸಿಬಿ ತಂಡವು ಒಟ್ಟು ನಾಲ್ಕು ಬಾರಿ ಫೈನಲ್​ಗೆ ಪ್ರವೇಶಿಸಿ ಅಂತಿಮ ಪಂದ್ಯದಲ್ಲಿ ಎಡವಿದರೆ, ಡೆಲ್ಲಿ ಕ್ಯಾಪಿಟಲ್ಸ್ 2 ಬಾರಿ ಪ್ರಶಸ್ತಿ ಹಣಾಹಣಿಯಲ್ಲಿ ಮುಗ್ಗರಿಸಿದೆ.

3 / 5

ಆರ್​ಸಿಬಿ ತಂಡವು 2009 ರ ಐಪಿಎಲ್​ನಲ್ಲಿ ಮೊದಲ ಬಾರಿ ಫೈನಲ್​ಗೆ ಪ್ರವೇಶಿಸಿ ಸೋಲನುಭವಿಸಿತ್ತು. ಇದಾದ ಬಳಿಕ 2011 ಮತ್ತು 2016 ರಲ್ಲಿ ಐಪಿಎಲ್​ ಫೈನಲ್ ಆಡಿದ್ದರೂ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದರ ನಡುವೆ 2011 ರ ಚಾಂಪಿಯನ್ಸ್​ ಟ್ರೋಫಿ ಫೈನಲ್​ನಲ್ಲೂ ಮುಗ್ಗರಿಸಿತ್ತು. ಇದೀಗ ಚೊಚ್ಚಲ ಟ್ರೋಫಿಯ ಕನಸಿನೊಂದಿಗೆ ಆರ್​ಸಿಬಿ ಮಹಿಳಾ ತಂಡ ಫೈನಲ್​ಗೆ ಪ್ರವೇಶಿಸಿದೆ.

4 / 5

ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 2020 ರಲ್ಲಿ ಮೊದಲ ಬಾರಿ ಐಪಿಎಲ್​ ಫೈನಲ್ ಆಡಿತ್ತು. ಆದರೆ ನಿರ್ಣಾಯಕ ಪಂದ್ಯದಲ್ಲಿ ಸೋಲುವ ಮೂಲಕ ಪ್ರಶಸ್ತಿ ಕೈಚೆಲ್ಲಿಕೊಂಡಿತು. ಇನ್ನು 2023ರ ವುಮೆನ್ಸ್ ಪ್ರೀಮಿಯರ್ ಲೀಗ್​ ಫೈನಲ್ ಆಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲನುಭವಿಸಿತ್ತು.

5 / 5

ಇದೀಗ ಪ್ರಶಸ್ತಿ ಮರೀಚಿಕೆಯಾಗಿರುವ ಎರಡು ತಂಡಗಳು ಫೈನಲ್ ಆಡುತ್ತಿದೆ. ಇಲ್ಲಿ ಗೆಲ್ಲುವ ಒಂದು ಫ್ರಾಂಚೈಸಿಯು ಪ್ರಶಸ್ತಿ ಖಾತೆಯನ್ನು ತೆರೆಯಲಿದೆ. ಅದರಂತೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲಲಿದೆಯಾ ಅಥವಾ ಡೆಲ್ಲಿ ಕ್ಯಾಪಿಟಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆಯಾ? ಎಂಬ ಪ್ರಶ್ನೆಗೆ ಭಾನುವಾರ (ಮಾ.17) ರಾತ್ರಿ ಉತ್ತರ ಸಿಗಲಿದೆ.

Published On - 2:52 pm, Sat, 16 March 24

Loading...
Unable to load recommendations.
Follow Us