- Kannada News Photo gallery Cricket photos IPL 2025: BCCI to allow 5 player retentions for IPL Mega Auction
IPL 2025: ಒಂದು RTM, ಮೆಗಾ ಹರಾಜಿಗೂ ಮುನ್ನ ಐವರ ಆಯ್ಕೆ..!
IPL 2025 Mega Auction: ಈ ಬಾರಿಯ ಐಪಿಎಲ್ ಮೆಗಾ ಹರಾಜು ನವೆಂಬರ್ 3ನೇ ಅಥವಾ 4ನೇ ವಾರ ನಡೆಯುವ ಸಾಧ್ಯತೆಯಿದೆ. ಹೀಗಾಗಿ ನವೆಂಬರ್ 15 ರೊಳಗೆ ಎಲ್ಲಾ ಫ್ರಾಂಚೈಸಿಗಳು ತಮ್ಮ ರಿಟೈನ್ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗುತ್ತದೆ.
Updated on:Sep 28, 2024 | 5:42 PM

IPL 2025: ಐಪಿಎಲ್ ಸೀಸನ್-18ರ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳಿಗೆ ಗರಿಷ್ಠ ಆರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಐವರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶ ನೀಡಲಿದ್ದಾರೆ ಎಂದು ವರದಿಯಾಗಿತ್ತು. ಆದರೀಗ 5 ರಿಟೈನ್ ಹಾಗೂ 1 ಆರ್ಟಿಎಂ ಆಯ್ಕೆಗಳನ್ನು ನೀಡಲು ಬಿಸಿಸಿಐ ನಿರ್ಧರಿಸಿದೆ.

ಕ್ರಿಕ್ಇನ್ಫೋ ವರದಿ ಪ್ರಕಾರ, ಬಿಸಿಸಿಐ ಒಟ್ಟು 5 ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಲಿದೆ. ಈ ಹಿಂದೆಯಿದ್ದ ರೈಟ್ ಟು ಮ್ಯಾಚ್ ಕಾರ್ಡ್ ಆಯ್ಕೆಯಲ್ಲಿ ಓರ್ವ ಆಟಗಾರನನ್ನು ಉಳಿಸಿಕೊಳ್ಳಲು ಅವಕಾಶ ನೀಡಲಿದೆ. ಅದರಂತೆ ಮೆಗಾ ಹರಾಜಿಗೂ ಮುನ್ನ 10 ಫ್ರಾಂಚೈಸಿಗಳು ಗರಿಷ್ಠ ಆರು ಆಟಗಾರರನ್ನು ಉಳಿಸಿಕೊಳ್ಳಬಹುದು.

2018 ರಲ್ಲಿ ನಡೆದ ಮೆಗಾ ಹರಾಜಿನ ವೇಳೆ 2 RTM ಆಯ್ಕೆಯನ್ನು ನೀಡಲಾಗಿತ್ತು. ಆರ್ಟಿಎಂ ಎಂದರೆ ಆಟಗಾರರನ್ನು ಆಯ್ಕೆ ಮಾಡಿ ಹರಾಜಿಗೆ ಬಿಡುಗಡೆ ಮಾಡುವುದು. ಉದಾಹರಣೆಗೆ ಆರ್ಸಿಬಿ ತಂಡವು ಫಾಫ್ ಡುಪ್ಲೆಸಿಸ್ ಅವರನ್ನು ಆರ್ಟಿಎಂನಲ್ಲಿ ಆಯ್ಕೆ ಮಾಡಿದ್ದಾರೆ ಎಂದಿಟ್ಟುಕೊಳ್ಳೋಣ. ಇದಾಗ್ಯೂ ಫಾಫ್ ಹೆಸರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ. ಅಲ್ಲದೆ ಹರಾಜಿನಲ್ಲಿ ಇತರೆ ತಂಡಗಳು ಬಿಡ್ ಸಹ ಮಾಡಬಹುದು.

ಹೀಗೆ ಆರ್ಟಿಎಂ ಆಯ್ಕೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡ ಫಾಫ್ ಡುಪ್ಲೆಸಿಸ್ ಅವರನ್ನು ಯಾವುದಾದರೂ ಫ್ರಾಂಚೈಸಿ 15 ಕೋಟಿ ರೂ.ಗೆ ಖರೀದಿಸಿದರೆ, ಆ ಮೊತ್ತವನ್ನು ನಾವೇ ನೀಡುತ್ತೇವೆ ಎಂದು ಆರ್ಸಿಬಿ ತಮ್ಮಲ್ಲೇ ಉಳಿಸಿಕೊಳ್ಳಬಹುದು. ಅಂದರೆ ಇಲ್ಲಿ ಆಟಗಾರನ ಹೆಸರು ಹರಾಜಿನಲ್ಲಿ ಕಾಣಿಸಿಕೊಂಡರೂ, ಮಾರಾಟ ಮಾಡುವ ಹಕ್ಕು ಆರ್ಟಿಎಂ ಬಳಸಿದ ಫ್ರಾಂಚೈಸಿ ಕೈಯಲ್ಲಿರುತ್ತದೆ.

ಆದರೆ ಈ ಬಾರಿ ಕೇವಲ ಒಂದು ಆರ್ಟಿಎಂ ಆಯ್ಕೆಯನ್ನು ಮಾತ್ರ ನೀಡಲಾಗಿದ್ದು, ಬದಲಾಗಿ ಐವರು ಆಟಗಾರರನ್ನು ನೇರವಾಗಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಅದರಂತೆ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳು ಗರಿಷ್ಠ 5+1 ಆಟಗಾರರನ್ನು ರಿಟೈನ್ ಮಾಡಿ, ಉಳಿದ ಪ್ಲೇಯರ್ಸ್ಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ.

ಇನ್ನು ಈ ಬಾರಿಯ ಐಪಿಎಲ್ ಮೆಗಾ ಹರಾಜು ನವೆಂಬರ್ 3ನೇ ಅಥವಾ 4ನೇ ವಾರ ನಡೆಯುವ ಸಾಧ್ಯತೆಯಿದೆ. ಹೀಗಾಗಿ ನವೆಂಬರ್ 15 ರೊಳಗೆ ಎಲ್ಲಾ ಫ್ರಾಂಚೈಸಿಗಳು ತಮ್ಮ ರಿಟೈನ್ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗುತ್ತದೆ. ಅದರಂತೆ ನವೆಂಬರ್ 2ನೇ ವಾರದೊಳಗೆ ಪ್ರತಿ ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರು ಯಾರೆಂಬುದರ ಸಂಪೂರ್ಣ ಮಾಹಿತಿ ಹೊರಬೀಳಲಿದೆ.
Published On - 8:10 am, Thu, 26 September 24
