AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಐದು ಐಪಿಎಲ್​ ತಂಡಗಳಿಗೆ ಹೊಸ ನಾಯಕರುಗಳು..!

IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ 10 ಫ್ರಾಂಚೈಸಿಗಳು ಒಟ್ಟು 46 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಹಾಗೆಯೇ ಬಿಡುಗಡೆ ಮಾಡಿದ ಆಟಗಾರರಲ್ಲಿ ಐವರು ನಾಯಕರುಗಳಿದ್ದಾರೆ. ಹೀಗಾಗಿ ಐಪಿಎಲ್ 2025 ರಲ್ಲಿ 5 ತಂಡಗಳ ನಾಯಕರುಗಳು ಬದಲಾಗುವುದು ಖಚಿತ ಎನ್ನಬಹುದು.

ಝಾಹಿರ್ ಯೂಸುಫ್
|

Updated on:Nov 02, 2024 | 11:57 AM

Share
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025)​ ಸೀಸನ್-18 ರಲ್ಲಿ ಐದು ತಂಡಗಳ ನಾಯಕರುಗಳು ಬದಲಾಗುವುದು ಖಚಿತವಾಗಿದೆ. ಏಕೆಂದರೆ ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಐದು ಫ್ರಾಂಚೈಸಿಗಳು ಕ್ಯಾಪ್ಟನ್​ಗಳನ್ನು ಬಿಡುಗಡೆ ಮಾಡಿದ್ದಾರೆ. ಆ ಕ್ಯಾಪ್ಟನ್​ಗಳು ಯಾರೆಂದರೆ....

1 / 7
1- ಫಾಫ್ ಡುಪ್ಲೆಸಿಸ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ನಾಯಕ ಫಾಫ್ ಡುಪ್ಲೆಸಿಸ್ ಅವರನ್ನು ಬಿಡುಗಡೆ ಮಾಡಿದೆ. ಕಳೆದ ಮೂರು ಸೀಸನ್​ಗಳಲ್ಲಿ ಫಾಫ್ ಆರ್​ಸಿಬಿ ತಂಡವನ್ನು ಮುನ್ನಡೆಸಿದ್ದರು. ಇದೀಗ ಅವರು ತಂಡದಿಂದ ಹೊರಬಿದ್ದಿರುವ ಕಾರಣ ಮುಂದಿನ ಸೀಸನ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹೊಸ ನಾಯಕ ಮುನ್ನಡೆಸುವುದು ಖಚಿತ ಎನ್ನಬಹುದು.

2 / 7
2- ಕೆಎಲ್ ರಾಹುಲ್: 2022 ರಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದ ಕೆಎಲ್ ರಾಹುಲ್ ಕೂಡ ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಐಪಿಎಲ್ 2025 ರಲ್ಲಿ ಎಲ್​ಎಸ್​ಜಿ ತಂಡವನ್ನು ನಿಕೋಲಸ್ ಪೂರನ್ ಮುನ್ನಡೆಸುವ ಸಾಧ್ಯತೆಯಿದೆ.

3 / 7
3- ರಿಷಭ್ ಪಂತ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಕೂಡ ಐಪಿಎಲ್ ಮೆಗಾ ಹರಾಜಿಗೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಸೀಸನ್-18 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಹೊಸ ಕ್ಯಾಪ್ಟನ್ ಮುನ್ನಡೆಸುವುದು ಖಚಿತ ಎನ್ನಬಹುದು.

4 / 7
4- ಶ್ರೇಯಸ್ ಅಯ್ಯರ್: ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಶ್ರೇಯಸ್ ಅಯ್ಯರ್ ಕೂಡ ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಐಪಿಎಲ್ 2025 ರಲ್ಲಿ ಕೆಕೆಆರ್ ತಂಡಕ್ಕೆ ಹೊಸ ಕ್ಯಾಪ್ಟನ್ ಆಯ್ಕೆಯಾಗುವುದು ಖಚಿತ.

5 / 7
5- ಶಿಖರ್ ಧವನ್: ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಐಪಿಎಲ್​ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಮುಂದಿನ ಸೀಸನ್​ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅಲ್ಲದೆ ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಹೊಸ ನಾಯಕ ಆಯ್ಕೆಯಾಗಲಿದ್ದಾರೆ.

6 / 7
ಅಂದರೆ ಈ ಮೇಲಿನ ಐದು ತಂಡಗಳನ್ನು ಹೊಸ ನಾಯಕರುಗಳು ಮುನ್ನಡೆಸುವುದು ಬಹುತೇಕ ಖಚಿತ. ಇದರ ಜೊತೆ ಉಳಿದ ಐದು ತಂಡಗಳಲ್ಲಿ ಕೆಲ ಟೀಮ್​ಗಳ ಕ್ಯಾಪ್ಟನ್ಸ್​ ಕೂಡ ಬದಲಾಗುವ ಸಾಧ್ಯತೆಯಿದೆ. ಹೀಗಾಗಿ ಮೆಗಾ ಹರಾಜಿನ ಬಳಿಕ ಯಾವೆಲ್ಲಾ ಫ್ರಾಂಚೈಸಿ ಹೊಸ ನಾಯಕರುಗಳೊಂದಿಗೆ ಹೊಸ ಅಭಿಯಾನ ಆರಂಭಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

7 / 7

Published On - 11:54 am, Sat, 2 November 24

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ