IPL 2025: 42ನೇ ವಯಸ್ಸಿನಲ್ಲಿ ಐಪಿಎಲ್​ನತ್ತ ಜೇಮ್ಸ್ ಅ್ಯಂಡರ್ಸನ್..!

James Anderson: ಜೇಮ್ಸ್ ಅ್ಯಂಡರ್ಸನ್ ಸಾರ್ವಕಾಲಿಕ ಶ್ರೇಷ್ಠ ಬೌಲರ್. ಏಕೆಂದರೆ ಇಂಗ್ಲೆಂಡ್ ಪರ 188 ಟೆಸ್ಟ್ ಪಂದ್ಯಗಳನ್ನಾಡಿರುವ ಅ್ಯಂಡರ್ಸನ್ 40037 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ ಒಟ್ಟು 704 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್ ಇತಿಹಾಸದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಜಿಮ್ಮಿ ಫ್ರಾಂಚೈಸಿ ಲೀಗ್​ನತ್ತ ಮುಖ ಮಾಡುವ ಇರಾದೆಯಲ್ಲಿದ್ದಾರೆ.

ಝಾಹಿರ್ ಯೂಸುಫ್
|

Updated on: Sep 10, 2024 | 12:53 PM

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕಾಣಿಸಿಕೊಳ್ಳದ ಕೆಲವೇ ಕೆಲವು ಶ್ರೇಷ್ಠ ಆಟಗಾರರಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಅ್ಯಂಡರ್ಸನ್ ಕೂಡ ಒಬ್ಬರು. ಇಂಗ್ಲೆಂಡ್ ಪರ ಮೂರು ಸ್ವರೂಪಗಳಲ್ಲಿ ಕಣಕ್ಕಿಳಿದರೂ ಅ್ಯಂಡರ್ಸನ್ ಐಪಿಎಲ್​ನತ್ತ ಮಾತ್ರ ಮುಖ ಮಾಡಿರಲಿಲ್ಲ. ಅದರಲ್ಲೂ ಐಪಿಎಲ್ ಹರಾಜಿಗಾಗಿ ಒಮ್ಮೆಯೂ ಹೆಸರು ನೋಂದಾಯಿಸಿಕೊಂಡಿರಲಿಲ್ಲ ಎಂಬುದು ವಿಶೇಷ.

1 / 5
ಆದರೆ ಇದೀಗ 17 ವರ್ಷಗಳ ಬಳಿಕ ಐಪಿಎಲ್​ ಹರಾಜಿಗಾಗಿ ಜೇಮ್ಸ್ ಅ್ಯಂಡರ್ಸನ್ ಹೆಸರು ನೋಂದಾಯಿಸಿಕೊಳ್ಳುವ ಸಾಧ್ಯತೆಯಿದೆ. ಅದು ಸಹ ತಮ್ಮ 42ನೇ ವಯಸ್ಸಿನಲ್ಲಿ ಎಂಬುದು ವಿಶೇಷ. ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿರುವ ಅ್ಯಂಡರ್ಸನ್ ಫ್ರಾಂಚೈಸಿ ಲೀಗ್​ನತ್ತ ಮುಖ ಮಾಡಲು ಇಚ್ಛಿಸಿದ್ದಾರೆ.

2 / 5
ಇಂಗ್ಲೆಂಡ್​ನಲ್ಲಿ ನಡೆದ ದಿ ಹಂಡ್ರೆಡ್ ಲೀಗ್ ವೇಳೆ ಮಾತನಾಡಿದ್ದ ಜೇಮ್ಸ್ ಅ್ಯಂಡರ್ಸನ್, ಈ ಲೀಗ್​ನಲ್ಲಿ ಒಬ್ಬ ಬೌಲರ್​ಗೆ ಕೇವಲ 20 ಎಸೆತಗಳು ಮಾತ್ರ ಇದೆ. ವಿಶೇಷ ಎಂದರೆ ಮೊದಲ 20 ಎಸೆತಗಳಲ್ಲಿ ಚೆಂಡು ಸ್ವಿಂಗ್ ಪಡೆಯುತ್ತಿರುವುದನ್ನು ನಾನು ಗಮನಿಸಿದ್ದೇನೆ. ನಾನು ಸಹ ಅದನ್ನು ಮಾಡಬಲ್ಲೆ ಎಂದು ತಿಳಿಸಿದ್ದರು. ಈ ಮೂಲಕ ಫ್ರಾಂಚೈಸಿ ಲೀಗ್​ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

3 / 5
ಇತ್ತ ಜೇಮ್ಸ್ ಅ್ಯಂಡರ್ಸನ್ ಅವರ ಈ ಹೇಳಿಕೆಯು ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದೆ. ಇದಕ್ಕೆ ಮುಖ್ಯ ಕಾರಣ ಅ್ಯಂಡರ್ಸನ್ ಅವರಿಗಿರುವ ಅನುಭವ. ಏಕೆಂದರೆ ಇಂಗ್ಲೆಂಡ್ ಮಾಜಿ ವೇಗಿಯನ್ನು ತಂಡಕ್ಕೆ ಸೇರಿಸಿಕೊಂಡರೆ, ಯುವ ಆಟಗಾರರಿಗೆ ಉತ್ತಮ ಮಾರ್ಗದರ್ಶನ ಸಿಗಲಿದೆ. ಒಂದು ವೇಳೆ ಅವರು ಹರಾಜಿನಲ್ಲಿ ಕಾಣಿಸಿಕೊಳ್ಳದಿದ್ದರೂ ಅವರನ್ನು ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡಲು ಕೆಲ ಫ್ರಾಂಚೈಸಿಗಳು ಆಸಕ್ತಿ ಹೊಂದಿದೆ ಎಂದು ವರದಿಯಾಗಿದೆ.

4 / 5
ಸದ್ಯ ಜೇಮ್ಸ್ ಅ್ಯಂಡರ್ಸನ್ ಇಂಗ್ಲೆಂಡ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇನ್ನುಳಿದ ಸಮಯದಲ್ಲಿ ಲೀಗ್ ಕ್ರಿಕೆಟ್ ಆಡುವ ಇರಾದೆಯಲ್ಲಿದ್ದಾರೆ. ಅಂದರೆ ಇಂಗ್ಲೆಂಡ್ ಆಟಗಾರರು ಐಪಿಎಲ್ ಸೇರಿದಂತೆ ಇತರೆ ಲೀಗ್ ಆಡುವ ವೇಳೆ ಜೇಮ್ಸ್ ಅ್ಯಂಡರ್ಸನ್ ಸಂಪೂರ್ಣ ಫ್ರೀಯಾಗಿರಲಿದ್ದಾರೆ. ಹೀಗಾಗಿ 42ನೇ ವಯಸ್ಸಿನಲ್ಲಿ ಜೇಮ್ಸ್ ಅ್ಯಂಡರ್ಸನ್ ಐಪಿಎಲ್​ನತ್ತ ಮುಖ ಮಾಡಿದರೂ ಅಚ್ಚರಿಪಡಬೇಕಿಲ್ಲ.

5 / 5
Follow us
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!

ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?

ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!

ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ

ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?

ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು

ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ

ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ

ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ

ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ