AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಮಹೇಂದ್ರ ಸಿಂಗ್ ಧೋನಿಗೆ ಕೇವಲ 4 ಕೋಟಿ ರೂ.

IPL 2025 MS Dhoni: ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2021 ರಲ್ಲಿ 15 ಕೋಟಿ ರೂ. ಪಡೆದಿದ್ದರು. ಇನ್ನು 2022 ರಲ್ಲಿ ಹರಾಜಿಗೂ ಮುನ್ನ 12 ಕೋಟಿ ರೂ.ನೊಂದಿಗೆ ಅವರು ಸಿಎಸ್​ಕೆ ತಂಡದಲ್ಲಿ ರಿಟೈನ್ ಆಗಿದ್ದರು. ಇದೀಗ ಮೆಗಾ ಹರಾಜಿಗೂ ಮುನ್ನ ಅನ್​ಕ್ಯಾಪ್ಡ್ ಪಟ್ಟಿಯಲ್ಲಿ ಧೋನಿ ರಿಟೈನ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ.

ಝಾಹಿರ್ ಯೂಸುಫ್
|

Updated on: Oct 06, 2024 | 1:08 PM

Share
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ಮೆಗಾ ಹರಾಜಿಗಾಗಿ ಕೆಲ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಹೀಗೆ ಮಾಡಲಾದ ಬದಲಾವಣೆಗಳಲ್ಲಿ ಅನ್​ಕ್ಯಾಪ್ಡ್ ರೂಲ್ಸ್ ಕೂಡ ಒಂದು. ಅಂದರೆ ಈ ಹಿಂದೆಯಿದ್ದ ಅನ್​ಕ್ಯಾಪ್ಡ್ ಆಟಗಾರರ ನಿಯಮಗಳಲ್ಲಿ ಈ ಬಾರಿ ಮಾರ್ಪಾಡು ಮಾಡಲಾಗಿದೆ.

1 / 6
ಈ ಹಿಂದೆ ರಾಷ್ಟ್ರೀಯ ತಂಡದ ಪರ ಆಡದ ಆಟಗಾರರನ್ನು ಮಾತ್ರ ಅನ್​ಕ್ಯಾಪ್ಡ್ ಪಟ್ಟಿಯಲ್ಲಿ ಆಯ್ಕೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡು 5 ವರ್ಷ ಕಳೆದಿರುವ ಆಟಗಾರರನ್ನು ಸಹ ಅನ್​ಕ್ಯಾಪ್ಡ್​ ಆಟಗಾರರ ಪಟ್ಟಿಗೆ ಪರಿಗಣಿಸಬಹುದು.

2 / 6
ಇಂತಹದೊಂದು ನಿಯಮವು 2008 ರಲ್ಲಿ ಜಾರಿಯಲ್ಲಿತ್ತು. ಆದರೆ ಆ ಸಂದರ್ಭಗಳಲ್ಲಿ ಈ ನಿಯಮ ಬಳಕೆ ಬರದಿದ್ದ ಕಾರಣ ಅದನ್ನು ತೆಗೆದು ಹಾಕಲಾಗಿತ್ತು. ಇದೀಗ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಕೋರಿಕೆಯ ಮೇರೆಗೆ ಈ ನಿಯಮವನ್ನು ಮತ್ತೆ ಜಾರಿಗೊಳಿಸಲಾಗಿದೆ.

3 / 6
ಮಹೇಂದ್ರ ಸಿಂಗ್ ಧೋನಿಯನ್ನು ಕಡಿಮೆ ಮೊತ್ತದಲ್ಲಿ ರಿಟೈನ್ ಮಾಡಿಕೊಳ್ಳಲು ಸಿಎಸ್​ಕೆ ಫ್ರಾಂಚೈಸಿಯು ಈ ನಿಯಮವನ್ನು ಜಾರಿಗೊಳಿಸುವಂತೆ ಆಗ್ರಹಿಸಿದೆ. ಏಕೆಂದರೆ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿ 5 ವರ್ಷ ಕಳೆದಿದೆ. ಇದೀಗ ಅವರನ್ನು ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಗೆ ಪರಿಗಣಿಸಬಹುದು. ಈ ಮೂಲಕ ಕೇವಲ 4 ಕೋಟಿ ರೂ.ಗೆ ​ರಿಟೈನ್ ಮಾಡಿಕೊಳ್ಳಬಹುದು.

4 / 6
ಅದರಂತೆ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಮಹೇಂದ್ರ ಸಿಂಗ್ ಧೋನಿಯನ್ನು 4 ಕೋಟಿ ರೂ.ಗೆ ರಿಟೈನ್ ಮಾಡಿಕೊಂಡರೆ, ಸಿಎಸ್​ಕೆ ಫ್ರಾಂಚೈಸಿಯು ಹೆಚ್ಚಿನ ಹರಾಜು ಮೊತ್ತವನ್ನು ಉಳಿಸಿಕೊಳ್ಳಬಹುದು. ಹೀಗಾಗಿಯೇ ಈ ಬಾರಿ ಧೋನಿ ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ರಿಟೈನ್ ಆಗುವುದು ಖಚಿತ ಎನ್ನಲಾಗಿದೆ.

5 / 6
ಈ ಬಗ್ಗೆ ಚರ್ಚಿಸಲೆಂದೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಮಾಲೀಕರು ಇದೇ ತಿಂಗಳು ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಧೋನಿ ಕೂಡ ಭಾಗವಹಿಸಲಿದ್ದಾರೆ. ಈ ಮೀಟಿಂಗ್​ ಬಳಿಕ ಸಿಎಸ್​ಕೆ ತಂಡದ ರಿಟೈನ್ ಪಟ್ಟಿ ಹೊರಬೀಳುವ ಸಾಧ್ಯತೆಯಿದೆ. ಅದರಂತೆ ಮಹೇಂದ್ರ ಸಿಂಗ್ ಧೋನಿ ಈ ಬಾರಿ ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಉಳಿದುಕೊಂಡರೆ, ಕಳೆದ ಬಾರಿಗಿಂತ 8 ಕೋಟಿ ರೂ. ಕಡಿಮೆ ಪಡೆಯಲಿದ್ದಾರೆ. ಅಂದರೆ ಕೇವಲ 4 ಕೋಟಿ ರೂ. ಮಾತ್ರ.

6 / 6
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!