IPL 2025: ಪಂಜಾಬ್ ಕಿಂಗ್ಸ್ ಈಗ ಮಿನಿ ಆಸ್ಟ್ರೇಲಿಯಾ
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 18ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ. ಇನ್ನು ಉಪನಾಯಕನಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ಅಥವಾ ಮಾರ್ಕಸ್ ಸ್ಟೋಯಿನಿಸ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
Updated on: Nov 28, 2024 | 1:32 PM

ಐಪಿಎಲ್ ಮೆಗಾ ಹರಾಜಿನ ಮೂಲಕ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು 25 ಸದಸ್ಯರ ಬಲಿಷ್ಠ ಬಳಗವನ್ನು ರೂಪಿಸಿದೆ. ಈ ಇಪ್ಪತ್ತೈದು ಆಟಗಾರರಲ್ಲಿ 8 ವಿದೇಶಿ ಪ್ಲೇಯರ್ಸ್ ಇದ್ದಾರೆ. ಇವರಲ್ಲಿ ಐವರು ಆಸ್ಟ್ರೇಲಿಯನ್ನರು ಎಂಬುದು ವಿಶೇಷ. ಅಂದರೆ ಈ ಬಾರಿಯ ಹರಾಜಿನ ಮೂಲಕ ಪಂಜಾಬ್ ಕಿಂಗ್ಸ್ ಆಸ್ಟ್ರೇಲಿಯನ್ ಆಟಗಾರರಿಗೆ ಮಣೆ ಹಾಕಿದೆ.

ಇದಕ್ಕೆ ಮುಖ್ಯ ಕಾರಣ ಪಂಜಾಬ್ ಕಿಂಗ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್. ಹೊಸ ತಂಡ ಕಟ್ಟುವ ಇರಾದೆಯಲ್ಲಿದ್ದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಪಾಂಟಿಂಗ್ ಅವರಿಗೆ ಸಂಪೂರ್ಣ ಸ್ವಾತಂತ್ರ ನೀಡಿದ್ದು, ಅದರಂತೆ ತಮಗೆ ಬೇಕಾದ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿತ್ತು.

ಈ ಅವಕಾಶವನ್ನು ಬಳಸಿಕೊಂಡ ರಿಕಿ ಪಾಂಟಿಂಗ್ ಆಸ್ಟ್ರೇಲಿಯನ್ನರಿಗೆ ಮಣೆ ಹಾಕಿದ್ದಾರೆ. ಅದರಂತೆ ಇದೀಗ ಪಂಜಾಬ್ ಕಿಂಗ್ಸ್ ತಂಡದಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯಿನಿಸ್, ಜೋಶ್ ಇಂಗ್ಲಿಸ್, ಕ್ಸೇವಿಯರ್ ಬ್ರಾಟ್ಲೆಟ್, ಆರೋನ್ ಹಾರ್ಡಿ ಇದ್ದಾರೆ. ಹೀಗಾಗಿಯೇ ಪಂಜಾಬ್ ಕಿಂಗ್ಸ್ ತಂಡವನ್ನು ಆಸೀಸ್ ಮಾಧ್ಯಮಗಳು ಮಿನಿ ಆಸ್ಟ್ರೇಲಿಯಾ ತಂಡ ಎಂದು ಕರೆದಿದೆ.

ಇನ್ನು ಆಸ್ಟ್ರೇಲಿಯನ್ನರಲ್ಲದೆ ಪಂಜಾಬ್ ಕಿಂಗ್ಸ್ಗೆ ಆಯ್ಕೆಯಾದ ವಿದೇಶಿ ಆಟಗಾರರೆಂದರೆ ಅಫ್ಘಾನಿಸ್ತಾನದ ಅಝ್ಮತುಲ್ಲಾ ಒಮರ್ಝಾಹಿ,ಸೌತ್ ಆಫ್ರಿಕಾದ ಮಾರ್ಕೊ ಯಾನ್ಸೆನ್ ಹಾಗೂ ನ್ಯೂಝಿಲೆಂಡ್ ವೇಗಿ ಲಾಕಿ ಫರ್ಗುಸನ್. ಇತ್ತ ಐವರು ಆಸ್ಟ್ರೇಲಿಯನ್ನರಲ್ಲಿ ಮೂವರು ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯುವುದು ಖಚಿತ. ಅದರಂತೆ ಈ ಬಾರಿ ರಿಕಿ ಪಾಂಟಿಂಗ್ ಮುಂದಾಳತ್ವದಲ್ಲಿ ಪಂಜಾಬ್ ಕಿಂಗ್ಸ್ ಕಮಾಲ್ ಮಾಡಲಿದೆಯಾ ಕಾದು ನೋಡಬೇಕಿದೆ.

ಪಂಜಾಬ್ ಕಿಂಗ್ಸ್ ತಂಡ: ಶ್ರೇಯಸ್ ಅಯ್ಯರ್, ಯುಜ್ವೇಂದ್ರ ಚಹಲ್, ಅರ್ಷ್‌ದೀಪ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಶಶಾಂಕ್ ಸಿಂಗ್, ಪ್ರಭ್ಸಿಮ್ರಾನ್ ಸಿಂಗ್, ಹರ್‌ಪ್ರೀತ್ ಬ್ರಾರ್, ವಿಜಯ್‌ಕುಮಾರ್ ವೈಶಾಕ್, ಯಶ್ ಠಾಕೂರ್, ಮಾರ್ಕೊ ಯಾನ್ಸೆನ್, ಜೋಶ್ ಇಂಗ್ಲಿಸ್, ಲಾಕಿ ಫರ್ಗುಸನ್, ಅಝ್ಮತುಲ್ಲಾ ಒಮರ್ಝಾಹಿ,ಆರೋನ್ ಹಾರ್ಡಿ, ಮುಶೀರ್ ಖಾನ್, ಸೂರ್ಯಾಂಶ, ಕ್ಸೇವಿಯರ್ ಬ್ರಾಟ್ಲೆಟ್, ಪೈಲಾ ಅವಿನಾಶ್, ಪ್ರವೀಣ್ ದುಬೆ, ನೆಹಾಲ್ ವಧೇರಾ, ಹರ್ನೂರ್ ಪನ್ನು, ಕುಲ್ದೀಪ್ ಸೇನ್.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



