IPL 2025: RCB ತಂಡಕ್ಕೆ ವಿರಾಟ್ ಕೊಹ್ಲಿ ನಾಯಕ
IPL 2025 Virat Kohli: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ವಿರಾಟ್ ಕೊಹ್ಲಿ 143 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ 66 ಪಂದ್ಯಗಳಲ್ಲಿ ಆರ್ಸಿಬಿ ಜಯ ಸಾಧಿಸಿದೆ. ಹಾಗೆಯೇ 2016 ರಲ್ಲಿ ಕಿಂಗ್ ಕೊಹ್ಲಿ ನಾಯಕತ್ವದಲ್ಲೇ ಆರ್ಸಿಬಿ ಫೈನಲ್ಗೆ ಪ್ರವೇಶಿಸಿತ್ತು.
1 / 5
ಐಪಿಎಲ್ ಸೀಸನ್-18ರ ಮೆಗಾ ಹರಾಜು ಪೂರ್ಣಗೊಂಡಿದೆ. ಈ ಬಾರಿಯ ಹರಾಜಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 19 ಆಟಗಾರರನ್ನು ಖರೀದಿಸಿದೆ. ಈ ಮೂಲಕ ಆರ್ಸಿಬಿ ಫ್ರಾಂಚೈಸಿ 22 ಆಟಗಾರರ ಬಲಿಷ್ಠ ಪಡೆಯನ್ನು ರೂಪಿಸಿದೆ. ಆದರೆ ಈ ಪಡೆಯನ್ನು ಮುನ್ನಡೆಸುವವರು ಯಾರು ಎಂಬುದೇ ಈಗ ಪ್ರಶ್ನೆ.
2 / 5
ಈ ಪ್ರಶ್ನೆಗೆ ಆರ್ಸಿಬಿ ಕಡೆಯಿಂದ ಕೇಳಿ ಬರುತ್ತಿರುವ ಉತ್ತರ ವಿರಾಟ್ ಕೊಹ್ಲಿ. ಆರ್ಸಿಬಿ ಈ ಬಾರಿಯ ಮೆಗಾ ಹರಾಜಿಗೂ ಮುನ್ನ ವಿರಾಟ್ ಕೊಹ್ಲಿ, ಯಶ್ ದಯಾಳ್ ಹಾಗೂ ರಜತ್ ಪಾಟಿದಾರ್ ಅವರನ್ನು ಉಳಿಸಿಕೊಂಡಿತ್ತು. ಇದೀಗ ಹರಾಜಿನ ಮೂಲಕ 19 ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ. ಹೀಗೆ ಆರ್ಸಿಬಿಗೆ ಎಂಟ್ರಿ ಕೊಟ್ಟಿರುವ 19 ಆಟಗಾರರಲ್ಲಿ ಯಾರು ಸಹ ಯಶಸ್ವಿ ನಾಯಕರಾಗಿ ಗುರುತಿಸಿಕೊಂಡಿಲ್ಲ. ಅಂದರೆ ಯಾವುದೇ ತಂಡದ ಖಾಯಂ ನಾಯಕರಾಗಿ ಕಾಣಿಸಿಕೊಂಡಿಲ್ಲ.
3 / 5
ಇತ್ತ 22 ಆಟಗಾರರಲ್ಲಿ ನಾಯಕತ್ವದ ಅನುಭವ ಹೊಂದಿರುವವರು ವಿರಾಟ್ ಕೊಹ್ಲಿ ಮಾತ್ರ. ಹೀಗಾಗಿಯೇ ಆರ್ಸಿಬಿ ಫ್ರಾಂಚೈಸಿ ಕಿಂಗ್ ಕೊಹ್ಲಿಗೆ ಕ್ಯಾಪ್ಟನ್ ಪಟ್ಟ ನೀಡುವುದು ಖಚಿತ ಎನ್ನಲಾಗುತ್ತಿದೆ. ಇದೇ ಕಾರಣದಿಂದಾಗಿ ಈ ಬಾರಿಯ ಮೆಗಾ ಹರಾಜಿನಲ್ಲಿ ಆರ್ಸಿಬಿ ನಾಯಕನ ಸ್ಥಾನ ತುಂಬಲು ಯಾವುದೇ ಆಟಗಾರನನ್ನು ಟಾರ್ಗೆಟ್ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ.
4 / 5
ಅಲ್ಲದೆ ಆರ್ಸಿಬಿ ಮೂಲಗಳ ಮಾಹಿತಿ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಈಗಾಗಲೇ ಕ್ಯಾಪ್ಟನ್ ಯಾರೆಂಬುದು ನಿರ್ಧರಿಸಿಯಾಗಿದೆ. ಅಂದರೆ ಮೆಗಾ ಹರಾಜಿಗೂ ಮುನ್ನವೇ ಐಪಿಎಲ್ ಸೀಸನ್-18 ರಲ್ಲಿ ಆರ್ಸಿಬಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದು ನಿರ್ಧರಿತವಾಗಿದೆ.
5 / 5
ಹೀಗಾಗಿಯೇ ಐಪಿಎಲ್ 2025 ರಲ್ಲಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳುವುದು ಖಚಿತ. ಅದರಂತೆ ಈ ಬಾರಿ ಕಿಂಗ್ ಕೊಹ್ಲಿ ಸಾರಥ್ಯದಲ್ಲಿ ಆರ್ಸಿಬಿ ಪಡೆ ಕಣಕ್ಕಿಳಿಯಲಿದ್ದು, ಈ ಮೂಲಕ 17 ವರ್ಷಗಳ ಕಪ್ ಗೆಲ್ಲಬೇಕೆಂಬ ಕನಸನ್ನು ಈಡೇರಿಸಲಿದೆಯಾ ಕಾದು ನೋಡಬೇಕಿದೆ.