IPL 2025: CSK ಯತ್ತ ರಿಷಭ್ ಪಂತ್ ಚಿತ್ತ
MS Dhoni - Rishabh Pant: 43 ವರ್ಷದ ಮಹೇಂದ್ರ ಸಿಂಗ್ ಧೋನಿ ಮುಂದಿನ ಸೀಸನ್ನಲ್ಲಿ ಸಿಎಸ್ಕೆ ಪರ ಕಣಕ್ಕಿಳಿಯುವುದು ಅನುಮಾನ ಎನ್ನಲಾಗುತ್ತಿದೆ. ಇದಾಗ್ಯೂ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೆಂಟರ್ ಅಥವಾ ಕೋಚ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹೀಗಾಗಿಯೇ ಹೊಸ ತಂಡವನ್ನು ಕಟ್ಟಲು ಧೋನಿ ಕೂಡ ತೆರೆಮರೆಯ ಸಿದ್ಧತೆಗಳನ್ನು ಆರಂಭಿಸಿದ್ದಾರೆ.
1 / 5
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಮೆಗಾ ಹರಾಜಿನ ಸಿದ್ಧತೆಗಳು ಆರಂಭವಾದ ಬೆನ್ನಲ್ಲೇ, ಇತ್ತ ಐಪಿಎಲ್ ಸ್ಟಾರ್ ಆಟಗಾರರ ಲೆಕ್ಕಾಚಾರಗಳು ಶುರುವಾಗಿದೆ. ಈ ಲೆಕ್ಕಾಚಾರಗಳ ನಡುವೆ ಎಲ್ಲರ ಗಮನ ಸೆಳೆಯುತ್ತಿರುವುದು ರಿಷಭ್ ಪಂತ್. ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.
2 / 5
ಸಿಎಸ್ಕೆ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಸೂಚನೆಯ ಮೇರೆಗೆ ಈ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಅಂದರೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಖರೀದಿಸುವ ಬಗ್ಗೆ ಪಂತ್ಗೆ ಧೋನಿ ಮಾತುಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
3 / 5
ಇದೇ ಕಾರಣದಿಂದಾಗಿ ಇದೀಗ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನು ತ್ಯಜಿಸಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದತ್ತ ಮುಖ ಮಾಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಅದರಂತೆ ಮುಂಬರುವ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ಹೆಸರು ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು.
4 / 5
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ರಿಷಭ್ ಪಂತ್ ಎಂಟ್ರಿ ಕೊಟ್ಟರೆ ನಾಯಕತ್ವ ಒಲಿಯುವುದು ಕೂಡ ಖಚಿತ. ಕಳೆದ ಸೀಸನ್ನಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ರುತುರಾಜ್ ಗಾಯಕ್ವಾಡ್ ಧೋನಿಯನ್ನು ಅವಲಂಭಿಸಿಯೇ ತಂಡವನ್ನು ಮುನ್ನಡೆಸಿದ್ದರು. ಇದರೊಂದಿಗೆ ಧೋನಿಯ ಬಳಿಕ ತಂಡವನ್ನು ಮುನ್ನಡೆಸಬಲ್ಲ ಸಮರ್ಥ ನಾಯಕನ ಅವಶ್ಯಕತೆ ಸಿಎಸ್ಕೆ ತಂಡಕ್ಕಿದೆ ಎಂಬುದು ಫ್ರಾಂಚೈಸಿಗೂ ಮನದಟ್ಟದಾಗಿದೆ.
5 / 5
ಹೀಗಾಗಿಯೇ ರಿಷಭ್ ಪಂತ್ ಅವರ ಮೇಲೆ ಸಿಎಸ್ಕೆ ಕಣ್ಣಿಟ್ಟಿದೆ. ಇಲ್ಲಿ ಪಂತ್ ಅವರ ಆಯ್ಕೆಯಿಂದ ಸಿಎಸ್ಕೆ ಎರಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದೆ. ಅಂದರೆ ಧೋನಿಯ ಸ್ಥಾನದಲ್ಲಿ ಹೊಸ ವಿಕೆಟ್ ಕೀಪರ್ ಹಾಗೂ ನಾಯಕನಾಗಿ ರಿಷಭ್ ಪಂತ್ ಅವರನ್ನು ಕಣಕ್ಕಿಳಿಸಬಹುದು. ಈ ಮೂಲಕ ಮಹೇಂದ್ರ ಸಿಂಗ್ ಧೋನಿಯ ಉತ್ತರಾಧಿಕಾರಿಯನ್ನು ನೇಮಿಸಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಪ್ಲ್ಯಾನ್ ರೂಪಿಸಿದೆ. ಅದರಂತೆ ಸಿಎಸ್ಕೆ ತಂಡಕ್ಕೆ ಪಂತ್ ಎಂಟ್ರಿ ಕೊಟ್ಟರೆ ನಾಯಕನಾಗಿ ಕಣಕ್ಕಿಳಿಯುವುದು ಖಚಿತ ಎನ್ನಬಹುದು.