- Kannada News Photo gallery Cricket photos IPL 2025 Lucknow Super Giants approach VVS Laxman for coaching role kannada news
IPL 2025: ವಿವಿಎಸ್ ಲಕ್ಷ್ಮಣ್ಗೆ ಐಪಿಎಲ್ ಫ್ರಾಂಚೈಸಿಯಿಂದ ಬಂತು ಮೆಗಾ ಆಫರ್
IPL 2025: ಐಪಿಎಲ್ ತಂಡ ಲಕ್ನೋ ಸೂಪರ್ ಜೈಂಟ್ಸ್ ತನ್ನ ಕೋಚಿಂಗ್ ಸ್ಟಾಫ್‌ನಲ್ಲಿ ವಿವಿಎಸ್ ಲಕ್ಷ್ಮಣ್ ಅವರನ್ನು ಸೇರಿಸಿಕೊಳ್ಳಲು ಆಸಕ್ತಿ ತೋರಿಸಿದೆ. ಪ್ರಸ್ತುತ ಲಕ್ಷ್ಮಣ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿದ್ದು, ಅವರ ಅಧಿಕಾರಾವಧಿ ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳುತ್ತದೆ.
Updated on: Jul 21, 2024 | 8:36 PM

2025 ರ ಐಪಿಎಲ್ ಆರಂಭಕ್ಕೆ ಇನ್ನು ಸಾಕಷ್ಟು ಸಮಯವಿದೆ. ಆದರೂ ಹಲವು ಫ್ರಾಂಚೈಸಿಗಳು ಮುಂದಿನ ಸೀಸನ್‌ಗೆ ಈಗಾಗಲೇ ಸಿದ್ಧತೆ ಆರಂಭಿಸಿವೆ. ವಾಸ್ತವವಾಗಿ ಮುಂದಿನ ಐಪಿಎಲ್ ಆರಂಭಕ್ಕೂ ಮೊದಲು ಮೆಗಾ ಹರಾಜು ನಡೆಯಲಿದೆ. ಹೀಗಾಗಿ ಎಲ್ಲ ಫ್ರಾಂಚೈಸಿಗಳು ಹೊಸದಾಗಿ ತಂಡವನ್ನು ರಚಿಸಬೇಕಾಗಿದೆ. ಈ ಕಾರಣಕ್ಕಾಗಿ, ಫ್ರ್ಯಾಂಚೈಸ್ಗಳು ಈಗಾಗಲೇ ಖ್ಯಾತನಾಮರ ಹಿಂದೆ ಬಿದ್ದಿವೆ.

ವರದಿ ಪ್ರಕಾರ, ಐಪಿಎಲ್ ತಂಡ ಲಕ್ನೋ ಸೂಪರ್ ಜೈಂಟ್ಸ್ ತನ್ನ ಕೋಚಿಂಗ್ ಸ್ಟಾಫ್‌ನಲ್ಲಿ ವಿವಿಎಸ್ ಲಕ್ಷ್ಮಣ್ ಅವರನ್ನು ಸೇರಿಸಿಕೊಳ್ಳಲು ಆಸಕ್ತಿ ತೋರಿಸಿದೆ. ಪ್ರಸ್ತುತ ಲಕ್ಷ್ಮಣ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿದ್ದು, ಅವರ ಅಧಿಕಾರಾವಧಿ ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳುತ್ತದೆ.

ರಾಹುಲ್ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಆದ ನಂತರ, ಅವರ ಸ್ಥಾನ ತುಂಬಿದ್ದ ಲಕ್ಷ್ಮಣ್ ಎನ್‌ಸಿಎ ಮುಖ್ಯಸ್ಥರಾಗಿದ್ದರು. ಆದರೆ ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಲಕ್ಷ್ಮಣ್, ಎನ್‌ಸಿಎಯಲ್ಲಿ ತನ್ನ ಅಧಿಕಾರಾವಧಿಯನ್ನು ವಿಸ್ತರಿಸಲು ನಿರಾಕರಿಸಿದ್ದಾರೆ.

ಅಲ್ಲದೆ ಗೌತಮ್ ಗಂಭೀರ್ಗೂ ಮೊದಲು ಟೀಂ ಇಂಡಿಯಾದ ಮುಖ್ಯ ಕೋಚ್ ಆಗುವಂತೆ ಬಿಸಿಸಿಐ, ವಿವಿಎಸ್ ಲಕ್ಷ್ಮಣ್ಗೆ ಮನವಿ ಮಾಡಿತ್ತು. ಆದರೆ ಲಕ್ಷ್ಮಣ್ ಅವರು ತಂಡದೊಂದಿಗೆ ಹೆಚ್ಚು ಪ್ರಯಾಣಿಸಲು ಇಷ್ಟವಿಲ್ಲದ ಕಾರಣ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಇದೀಗ ಎನ್‌ಸಿಎ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯುತ್ತಿರುವ ಲಕ್ಷ್ಮಣ್ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಲಕ್ನೋ ಸೂಪರ್ಜೈಂಟ್ಸ್ ಫ್ರಾಂಚೈಸಿ ಮುಂದಾಗಿದೆ ಎಂದು ವರದಿಯಾಗಿದೆ.

ಈಗಾಗಲೇ ಲಕ್ನೋ ಸೂಪರ್ಜೈಂಟ್ಸ್ ಆಡಳಿತ ವರ್ಗ ಲಕ್ಷ್ಮಣ್ ಜೊತೆ ಅನೌಪಚಾರಿಕ ಮಾತುಕತೆ ನಡೆಸಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಲಕ್ನೋ ಸೂಪರ್ಜೈಂಟ್ಸ್ ಅಲ್ಲದೆ ಬೇರೆ ಫ್ರಾಂಚೈಸಿಗಳು ಸಹ ಲಕ್ಷ್ಮಣ್ ಹಿಂದೆ ಬಿದ್ದಿವೆ ಎಂದು ಹೇಳಲಾಗುತ್ತಿದೆ.

ಇತ್ತ ಲಕ್ಷ್ಮಣ್ ಅವರ ಅಧಿಕಾರಾವಧಿ ಮುಗಿಯುವುದರಿಂದ ತೆರನಾಗುವ ಎನ್‌ಸಿಎ ಮುಖ್ಯಸ್ಥ ಸ್ಥಾನಕ್ಕೆ ಭಾರತದ ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರನ್ನು ಆಯ್ಕೆ ಮಾಡಬಹುದು ಎಂದು ಮೂಲಗಳು ತಿಳಿಸಿವೆ. ರಾಥೋಡ್ ಅವರು 2012 ರಿಂದ ಬಿಸಿಸಿಐನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಮೊದಲು ಅವರು ರಾಷ್ಟ್ರೀಯ ಆಯ್ಕೆಗಾರನಾಗಿಯೂ ಸೇವೆ ಸಲ್ಲಿಸಿದ್ದರು.



















