IPL 2025: ಅರಬ್ಬರ ನಾಡಿನಲ್ಲಿ ಐಪಿಎಲ್ ಮೆಗಾ ಹರಾಜು
IPL 2025 Mega Auction: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳು ಗರಿಷ್ಠ 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು. ಹೀಗೆ ರಿಟೈನ್ ಮಾಡಿಕೊಂಡ ಆಟಗಾರರಿಗೆ ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಅಂದರೆ ಒಂದು ಫ್ರಾಂಚೈಸಿಯು ಆರು ಆಟಗಾರರನ್ನು ರಿಟೈನ್ ಮಾಡಿದರೆ 79 ಕೋಟಿ ರೂ. ಖರ್ಚಾಗಲಿದೆ. ಈ ಮೊತ್ತವು ಒಟ್ಟು ಹರಾಜು ಮೊತ್ತದಿಂದ ಕಡಿತವಾಗಲಿದೆ. ಈ ಬಾರಿಯ ಮೆಗಾ ಆಕ್ಷನ್ಗಾಗಿ 120 ಕೋಟಿ ರೂ. ಹರಾಜು ಮೊತ್ತ ಘೋಷಿಸಲಾಗಿದೆ.
1 / 5
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಇದರ ಮೊದಲ ಹೆಜ್ಜೆಯಾಗಿ ಈಗಾಗಲೇ ಆಟಗಾರರ ಧಾರಣ ನಿಯಮವನ್ನು ಪ್ರಕಟಿಸಲಾಗಿದೆ. ಅಲ್ಲದೆ ಅಕ್ಟೋಬರ್ 31 ರೊಳಗೆ ಎಲ್ಲಾ ಫ್ರಾಂಚೈಸಿಗಳು ರಿಟೈನ್ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕೆಂದು ಬಿಸಿಸಿಐ ತಿಳಿಸಿದೆ.
2 / 5
ಇನ್ನು ರಿಟೈನ್ ಆಟಗಾರರ ಪಟ್ಟಿ ಸಲ್ಲಿಕೆಯ ಬೆನ್ನಲ್ಲೇ ಮೆಗಾ ಹರಾಜಿಗಾಗಿ ಹೆಸರು ನೋಂದಣಿ ಪ್ರಕ್ರಿಯೆ ನಡೆಯಲಿದೆ. ಅಲ್ಲದೆ ನವೆಂಬರ್ ಅಂತ್ಯದೊಳಗೆ ಐಪಿಎಲ್ ಮೆಗಾ ಹರಾಜು ನಡೆಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಅದರಂತೆ ಈ ಬಾರಿಯ ಮೆಗಾ ಹರಾಜು ಸೌದಿ ಅರೇಬಿಯಾದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.
3 / 5
ಐಪಿಎಲ್ 2023 ರ ಹರಾಜು ಪ್ರಕ್ರಿಯೆಯನ್ನು ದುಬೈನಲ್ಲಿ ಆಯೋಜಿಸಲಾಗಿತ್ತು. ಆದರೆ ಈ ಬಾರಿಯ ಐಪಿಎಲ್ನ ಮೆಗಾ ಹರಾಜಿನ ಆತಿಥ್ಯವಹಿಸಿಕೊಳ್ಳಲು ಸೌದಿ ಅರೇಬಿಯಾ ಆಸಕ್ತಿವಹಿಸಿದೆ. ಹೀಗಾಗಿ ಅಬ್ಬರನಾಡಿನಲ್ಲಿ ಈ ಬಾರಿ ಮೆಗಾ ಆಕ್ಷನ್ ನಡೆಯುವ ಸಾಧ್ಯತೆಯಿದೆ.
4 / 5
ಇತ್ತ ಮೆಗಾ ಹರಾಜಿನ ಪ್ರಕ್ರಿಯೆಗಾಗಿ ಸೂಕ್ತವಾದ ಸ್ಥಳ ಅಥವಾ ಹೋಟೆಲ್ ಅನ್ನು ಹುಡುಕುವುದು ಬಿಸಿಸಿಐಗೆ ಮುಂದಿರುವ ದೊಡ್ಡ ಸವಾಲು. ಏಕೆಂದರೆ ಫ್ರಾಂಚೈಸ್ ಮಾಲೀಕರಿಗೆ ಬೆಲೆಯು ಗಮನಾರ್ಹ ಅಂಶವಾಗಿರಬಾರದು. ಅದರಲ್ಲೂ ಸೌದಿ ಅರೇಬಿಯಾದಲ್ಲಿನ ವೆಚ್ಚಗಳು ದುಬೈಗಿಂತ ಹೆಚ್ಚು ಎಂದು ವರದಿಯಾಗಿದೆ.
5 / 5
ಇದಾಗ್ಯೂ ದುಬೈಯಿಂದ ಸೌದಿ ಅರೇಬಿಯಾದತ್ತ ಐಪಿಎಲ್ ಅನ್ನು ಕೊಂಡೊಯ್ಯಲು ಬಿಸಿಸಿಐ ಆಸಕ್ತಿ ಹೊಂದಿದೆ. ಹೀಗಾಗಿ ಈ ಬಾರಿಯ ಮೆಗಾ ಹರಾಜು ಸೌದಿ ಅರೇಬಿಯಾದ ರಿಯಾದ್ ಅಥವಾ ಜಿದ್ದಾದಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದೆ. ಅದರಂತೆ ನವೆಂಬರ್ ತಿಂಗಳಾಂತ್ಯದಲ್ಲಿ ಅರಬ್ಬರ ನಾಡಿನಲ್ಲಿ 10 ಫ್ರಾಂಚೈಸಿಗಳ ನಡುವಣ ಹರಾಜು ಪೈಪೋಟಿಯನ್ನು ನಿರೀಕ್ಷಿಸಬಹುದು.