IPL 2025: 75 ಕೋಟಿ ರೂ. ನೀಡಿ 5 ಆಟಗಾರರನ್ನು ಉಳಿಸಿಕೊಂಡ SRH
IPL 2025 Retention: ಐಪಿಎಲ್ನ ಮುಂದಿನ ಸೀಸನ್ಗಾಗಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಒಟ್ಟು ಐವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಅದು ಕೂಡ 75 ಕೋಟಿ ರೂ. ನೀಡುವ ಮೂಲಕ. ಅಂದರೆ ಎಸ್ಆರ್ಹೆಚ್ ಫ್ರಾಂಚೈಸಿಯು ಒಟ್ಟು ಹರಾಜು ಮೊತ್ತ 120 ಕೋಟಿ ರೂ.ನಿಂದ ಈಗಾಗಲೇ 75 ಕೋಟಿ ರೂ. ಅನ್ನು ಖರ್ಚು ಮಾಡಿದೆ.
Updated on: Oct 31, 2024 | 9:23 AM

ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2025) 18ನೇ ಆವೃತ್ತಿಗೂ ಮುನ್ನ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಐವರು ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ. ಈ ಐವರು ಆಟಗಾರರಿಗಾಗಿ ಎಸ್ಆರ್ಹೆಚ್ ಫ್ರಾಂಚೈಸಿಯು ವ್ಯಯಿಸಿರುವುದು ಬರೋಬ್ಬರಿ 75 ಕೋಟಿ ರೂ. ಎಂಬುದು ವಿಶೇಷ. ಅದರಂತೆ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲೇ ಮುಂದುವರೆಯಲಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

ಹೆನ್ರಿಕ್ ಕ್ಲಾಸೆನ್: ಸೌತ್ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮೊದಲ ರಿಟೈನ್ ಆಗಿ ತಂಡದಲ್ಲೇ ಉಳಿಸಿಕೊಂಡಿದೆ. ಇದಕ್ಕಾಗಿ ಕ್ಲಾಸೆನ್ ಅವರಿಗೆ ನೀಡಿರುವ ಮೊತ್ತ ಬರೋಬ್ಬರಿ 23 ಕೋಟಿ ರೂ. ಎಂಬುದು ವಿಶೇಷ.

ಪ್ಯಾಟ್ ಕಮಿನ್ಸ್: ಸನ್ರೈಸರ್ಸ್ ಹೈದರಾಬಾದ್ ತಂಡದ 2ನೇ ಆಯ್ಕೆ ಪ್ಯಾಟ್ ಕಮಿನ್ಸ್. ಆಸ್ಟ್ರೇಲಿಯಾದ ಆಲ್ರೌಂಡರ್ನನ್ನು ಎಸ್ಆರ್ಹೆಚ್ ಫ್ರಾಂಚೈಸಿಯು 18 ಕೋಟಿ ರೂ.ಗೆ ರಿಟೈನ್ ಮಾಡಿಕೊಂಡಿದೆ. ಹೀಗಾಗಿ ಮುಂದಿನ ಸೀಸನ್ನಲ್ಲೂ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಕಮಿನ್ಸ್ ಮುನ್ನಡೆಸಲಿದ್ದಾರೆ.

ಅಭಿಷೇಕ್ ಶರ್ಮಾ: ಎಸ್ಆರ್ಹೆಚ್ ಫ್ರಾಂಚೈಸಿಯು ಯುವ ಎಡಗೈ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರನ್ನು ಸಹ ತಂಡದಲ್ಲೇ ಉಳಿಸಿಕೊಂಡಿದೆ. ಬರೋಬ್ಬರಿ 14 ಕೋಟಿ ರೂ. ನೀಡಿ ಅಭಿಷೇಕ್ ಶರ್ಮಾ ಅವರನ್ನು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ರಿಟೈನ್ ಮಾಡಿಕೊಂಡಿದೆ.

ಟ್ರಾವಿಸ್ ಹೆಡ್: ಸನ್ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರನ್ನು ಬರೋಬ್ಬರಿ 14 ಕೋಟಿ ರೂ. ನೀಡಿ ತಂಡದಲ್ಲೇ ಉಳಿಸಿಕೊಂಡಿದ್ದಾರೆ. ಹೀಗಾಗಿ ಮುಂದಿನ ಸೀಸನ್ ಐಪಿಎಲ್ನಲ್ಲೂ ಹೆಡ್-ಅಭಿಷೇಕ್ ಜೋಡಿ ಎಸ್ಆರ್ಹೆಚ್ ಪರ ಇನಿಂಗ್ಸ್ ಆರಂಭಿಸುವುದನ್ನು ಎದುರು ನೋಡಬಹುದು.

ನಿತೀಶ್ ಕುಮಾರ್ ರೆಡ್ಡಿ: ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು 6 ಕೋಟಿ ರೂ.ಗೆ ಉಳಿಸಿಕೊಂಡಿದ್ದು, ಈ ಮೂಲಕ ಹೈದರಾಬಾದ್ ಆಟಗಾರನನ್ನು ಮುಂದಿನ ಸೀಸನ್ನಲ್ಲೂ ತಂಡದಲ್ಲೇ ಮುಂದುವರೆಸಲು ಎಸ್ಆರ್ಹೆಚ್ ಫ್ರಾಂಚೈಸಿ ನಿರ್ಧರಿಸಿದೆ.
