IPL 2025: RCB ಕೆಎಲ್​​ ರಾಹುಲ್​ರನ್ನು​ ನೇರವಾಗಿ ಆಯ್ಕೆ ಮಾಡುವಂತಿಲ್ಲ..!

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 18ನೇ ಆವೃತ್ತಿಯ ಹರಾಜಿಗೂ ಮುನ್ನ ಕೆಎಲ್ ರಾಹುಲ್ ಅವರನ್ನು ಟ್ರೇಡ್ ಮಾಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಾಧ್ಯವಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಐಪಿಎಲ್​ನ ಮೆಗಾ ಹರಾಜು ನಿಯಮ. ಈ ನಿಯಮದ ಪ್ರಕಾರ ಆಟಗಾರರ ಟ್ರೇಡಿಂಗ್​ಗೆ ಅವಕಾಶವಿಲ್ಲ.

|

Updated on:Sep 17, 2024 | 1:54 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ಸಿದ್ಧತೆಗಳ ನಡುವೆ ಎಲ್ಲರ ಕುತೂಹಲಕ್ಕೆ ಕಾರಣವಾಗಿರುವುದು ಕೆಎಲ್ ರಾಹುಲ್ (KL Rahul) ಅವರ ಮುಂದಿನ ನಡೆ. ಏಕೆಂದರೆ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಕನ್ನಡಿಗ ಹೊರಬರುವುದು ಬಹುತೇಕ ಖಚಿತ. ಇದನ್ನು ಪುಷ್ಠೀಕರಿಸುವಂತೆ ರಾಹುಲ್ ಕೂಡ ಆರ್​ಸಿಬಿ ಪರ ಕಣಕ್ಕಿಳಿಯುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

1 / 6
ಆದರೆ ಆರ್​ಸಿಬಿ ಪರ ಮತ್ತೆ ಆಡುವ ಇಚ್ಛೆ ಹೊಂದಿದ್ದರೂ ಕೆಎಲ್ ರಾಹುಲ್ ನೇರವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಯ್ಕೆಯಾಗುವುದಿಲ್ಲ. ಅಂದರೆ ಮೆಗಾ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ರಾಹುಲ್ ಅವರನ್ನು ಟ್ರೇಡ್ ಮಾಡಲು ಅವಕಾಶವಿಲ್ಲ. ಬದಲಾಗಿ ಮೆಗಾ ಹರಾಜಿನ ಮೂಲಕವೇ ಖರೀದಿಸಬೇಕಾಗುತ್ತದೆ.

2 / 6
ಏಕೆಂದರೆ ಐಪಿಎಲ್ ನಿಯಮಗಳ ಪ್ರಕಾರ, ಮೆಗಾ ಹರಾಜಿನ ಸಂದರ್ಭಗಳಲ್ಲಿ ಆಟಗಾರರ ಟ್ರೇಡಿಂಗ್​ಗೆ ಅವಕಾಶವಿಲ್ಲ. ಬದಲಾಗಿ ಈ ಮಿನಿ ಹರಾಜಿನ ವೇಳೆ ಮಾತ್ರ ಆಟಗಾರರನ್ನು ಟ್ರೇಡಿಂಗ್​ಗೆ ಅವಕಾಶ ನೀಡಲಾಗುತ್ತದೆ. ಹೀಗಾಗಿ ಈ ಬಾರಿಯ ಹರಾಜಿಗೂ ಮುನ್ನ RCBಗೆ ಕೆಎಲ್ ರಾಹುಲ್ ಅವರನ್ನು ಖರೀದಿಸಲು ಸಾಧ್ಯವಾಗುವುದಿಲ್ಲ.

3 / 6
ಇನ್ನು ಕೆಎಲ್ ರಾಹುಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ ಇತರೆ ಫ್ರಾಂಚೈಸಿಗಳು ಕೂಡ ಅವರ ಖರೀದಿಗೆ ಆಸಕ್ತಿವಹಿಸಲಿದೆ. ಏಕೆಂದರೆ ರಾಹುಲ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್. ಅದರಲ್ಲೂ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನು ಮುನ್ನಡೆಸಿದ ಅನುಭವವನ್ನು ಸಹ ಹೊಂದಿದ್ದಾರೆ.

4 / 6
ಹೀಗಾಗಿ ಕೆಎಲ್ ರಾಹುಲ್ ಅವರ ಖರೀದಿಯಿಂದ ಕ್ಯಾಪ್ಟನ್, ವಿಕೆಟ್ ಕೀಪರ್ ಹಾಗೂ ಓಪನರ್ ಸ್ಥಾನಗಳನ್ನು ತುಂಬಬಹುದು. ಹೀಗೆ ಒಂದೇ ಆಯ್ಕೆಯಿಂದ ಮೂರು ಸ್ಥಾನಗಳನ್ನು ತುಂಬಬಲ್ಲ ಆಟಗಾರರ ಖರೀದಿಗೆ ಹೆಚ್ಚಿನ ಫ್ರಾಂಚೈಸಿಗಳು ಆಸಕ್ತಿವಹಿಸಲಿದೆ.

5 / 6
ಇನ್ನು ಮೆಗಾ ಹರಾಜಿನ ಮೂಲಕ ಆರ್​ಸಿಬಿ ಕೆಎಲ್ ರಾಹುಲ್ ಅವರ ಖರೀದಿಗೆ ಮುಂದಾದರೂ, ಹೆಚ್ಚಿನ ಪೈಪೋಟಿ ಕಂಡು ಬರುವುದು ಖಚಿತ. ಹೀಗಾಗಿ ಮೆಗಾ ಆಕ್ಷನ್​ನಲ್ಲಿ ಕಾಣಿಸಿಕೊಳ್ಳಲಿರುವ ಕನ್ನಡಿಗ ಅಂತಿಮವಾಗಿ ಯಾವ ತಂಡದ ಪಾಲಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

6 / 6

Published On - 1:53 pm, Tue, 17 September 24

Follow us