- Kannada News Photo gallery Cricket photos Ipl 2025 Mega Auction 3 Team Who Can Target Glenn Maxwell If Rcb Released kannada news
IPL 2025: ಗ್ಲೆನ್ ಮ್ಯಾಕ್ಸ್‌ವೆಲ್ ಖರೀದಿಗೆ ಮೂರು ಫ್ರಾಂಚೈಸಿಗಳ ನಡುವೆ ಪೈಪೋಟಿ
Glenn Maxwell: ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 10 ಪಂದ್ಯಗಳನ್ನು ಆಡಿದದ್ದ ಮ್ಯಾಕ್ಸ್‌ವೆಲ್ ಕೇವಲ 52 ರನ್ ಬಾರಿಸಿದಲ್ಲದೆ, ಕೇವಲ 6 ವಿಕೆಟ್ಗಳನ್ನು ಪಡೆಯುವಲ್ಲಿ ಸಫಲರಾಗಿದ್ದರು. ಹೀಗಾಗಿ ಮೆಗಾ ಹರಾಜಿಗೂ ಮೊದಲು ಮ್ಯಾಕ್ಸ್ವೆಲ್ರನ್ನು ಆರ್ಸಿಬಿ ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ.
Updated on: Aug 12, 2024 | 10:44 PM

2025 ರ ಐಪಿಎಲ್ಗೂ ಮುನ್ನ ಮೆಗಾ ಹರಾಜು ನಡೆಯಲ್ಲಿದೆ. ಹೀಗಾಗಿ ಮೆಗಾ ಹರಾಜಿಗೂ ಮುನ್ನ ಯಾವ್ಯಾವ ಫ್ರಾಂಚೈಸಿಗಳು ಯಾವ್ಯಾವ ಆಟಗಾರರನ್ನು ತಮ್ಮ ತಂಡದಿಂದ ಬಿಡುಗಡೆ ಮಾಡಲಿವೆ ಎಂಬುದು ಕುತೂಹಲ ಮೂಡಿಸಿದೆ. ಈ ನಡುವೆ ಆರ್ಸಿಬಿ ಪಾಳಯದಿಂದ ಗ್ಲೆನ್ ಮ್ಯಾಕ್ಸ್‌ವೆಲ್ ಹೊರಹೋಗಬಹುದು ಎಂದು ಹೇಳಲಾಗುತ್ತಿದೆ.

ವಾಸ್ತವವಾಗಿ 2021 ರ ಐಪಿಎಲ್ಗೂ ಮುನ್ನ ನಡೆದ ಹರಾಜಿನಲ್ಲಿ ಬರೋಬ್ಬರಿ 14.25 ಕೋಟಿ ರೂ. ಪಡೆದು ಆರ್ಸಿಬಿ ತಂಡವನ್ನು ಸೇರಿಕೊಂಡಿದ್ದ ಮ್ಯಾಕ್ಸ್‌ವೆಲ್ ಮೊದಲ ಮೂರು ಆವೃತ್ತಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರಯ. ಆದರೆ ಕಳೆದ ಐಪಿಎಲ್ನಲ್ಲಿ ಅಂದರೆ 2024 ರ ಐಪಿಎಲ್ನಲ್ಲಿ ಮ್ಯಾಕ್ಸ್‌ವೆಲ್ ಪ್ರದರ್ಶನ ತೀರ ಕಳಪೆಯಾಗಿತ್ತು.

ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 10 ಪಂದ್ಯಗಳನ್ನು ಆಡಿದದ್ದ ಮ್ಯಾಕ್ಸ್‌ವೆಲ್ ಕೇವಲ 52 ರನ್ ಬಾರಿಸಿದಲ್ಲದೆ, ಕೇವಲ 6 ವಿಕೆಟ್ಗಳನ್ನು ಪಡೆಯುವಲ್ಲಿ ಸಫಲರಾಗಿದ್ದರು. ಹೀಗಾಗಿ ಮೆಗಾ ಹರಾಜಿಗೂ ಮೊದಲು ಮ್ಯಾಕ್ಸ್ವೆಲ್ರನ್ನು ಆರ್ಸಿಬಿ ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ.

ಇದಕ್ಕೆ ಪೂರಕವಾಗಿ ಮ್ಯಾಕ್ಸ್‌ವೆಲ್ ಕೂಡ ಇನ್ಸ್ಟಾಗ್ರಾಮ್ನಲ್ಲಿ ಆರ್ಸಿಬಿಯನ್ನು ಅನ್ ಫಾಲೋ ಮಾಡಿದ್ದಾರೆ. ಹೀಗಾಗಿ ಮ್ಯಾಕ್ಸ್‌ವೆಲ್ ಮೆಗಾ ಹರಾಜಿಗೆ ಬರುವುದು ಖಚಿತವಾಗಿದ್ದು, ಅವರನ್ನು ಖರೀದಿಸಲು ಹಲವು ಫ್ರಾಂಚೈಸಿಗಳು ತಯಾರಿ ನಡೆಸಿಕೊಂಡಿವೆ. ಅದರಲ್ಲಿ ಪ್ರಮುಖವಾಗಿ ಈ 3 ತಂಡಗಳು ಮ್ಯಾಕ್ಸ್‌ವೆಲ್ ಮೇಲೆ ಕಣ್ಣಿಟ್ಟಿವೆ.

ಸಿಡಿಲಬ್ಬರದ ಬ್ಯಾಟಿಂಗ್ ಮಾಡುವ ಗ್ಲೆನ್ ಮ್ಯಾಕ್ಸ್‌ವೆಲ್ ಮೇಲೆ ಡೆಲ್ಲಿ ಕ್ಯಾಪಿಟಲ್ಸ್ ಕಣ್ಣಿಟ್ಟಿದೆ. 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮ್ಯಾಕ್ಸ್‌ವೆಲ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು. ಇದಕ್ಕಾಗಿ ಮ್ಯಾಕ್ಸ್ವೆಲ್ಗೆ 9 ಕೋಟಿ ರೂ. ಖರ್ಚು ಮಾಡಿತ್ತು. ಇದಲ್ಲದೆ ಡೆಲ್ಲಿ ತಂಡ ಯಾವಾಗಲೂ ಆಸ್ಟ್ರೇಲಿಯನ್ ಆಟಗಾರರ ಮೇಲೆ ಹೆಚ್ಚು ಆಸಕ್ತಿ ತೊರುತ್ತದೆ. ಹೀಗಾಗಿ ಮ್ಯಾಕ್ಸ್‌ವೆಲ್ ಖರೀದಿಗೆ ಡೆಲ್ಲಿ ಮುಂದಾಗುವುದು ಖಚಿತ.

ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡ ಕೂಡ ಮ್ಯಾಕ್ಸ್‌ವೆಲ್ ಮೇಲೆ ಭಾರಿ ಮೊತ್ತವನ್ನು ಬಿಡ್ ಮಾಡಬಹುದು. ಇದಕ್ಕೆ ಕಾರಣವೂ ಇದ್ದು, ಕಳೆದ ಐಪಿಎಲ್ನಲ್ಲಿ ಆಡಿದ 14 ಪಂದ್ಯಗಳಲ್ಲಿ ತಂಡ ಕೇವಲ 4 ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಯಿತು. ಅಂತಹ ಪರಿಸ್ಥಿತಿಯಲ್ಲಿ, ಹೊಸ ತಂಡವನ್ನು ಕಟ್ಟಲು ಮುಂಬೈ ಮುಂದಾಗಿದೆ. ಮ್ಯಾಕ್ಸ್‌ವೆಲ್ ಈ ಹಿಂದೆಯೂ ಮುಂಬೈ ಇಂಡಿಯನ್ಸ್ ಪರ ಆಡಿದ್ದರಿಂದ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಮುಂದಾಗಬಹುದು.

ಈ ಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ಕೂಡ ಸೇರಿದೆ. ಹಾರ್ದಿಕ್ ಪಾಂಡ್ಯ ತಂಡದಿಂದ ಹೊರಬಿದ್ದ ಬಳಿಕ ತಂಡ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದೆ. ಕಳೆದ ಸೀಸನ್ನಲ್ಲಿ ತಂಡದ ಬ್ಯಾಲೆನ್ಸ್ ತುಂಬಾ ಕೆಟ್ಟದಾಗಿತ್ತು. ಇದರ ಪರಿಣಾಮ ಆಡಿದ 14 ಪಂದ್ಯಗಳಲ್ಲಿ ತಂಡ 5 ರಲ್ಲಿ ಮಾತ್ರ ಗೆದ್ದಿತ್ತು. ಇದರಿಂದ ಪ್ಲೇಆಫ್‌ನ ರೇಸ್‌ನಿಂದಲೂ ಹೊರಬಿದ್ದಿತ್ತು. ಹೀಗಾಗಿ ಹಾರ್ದಿಕ್ ಸ್ಥಾನ ತುಂಬಲು ಆಲ್ರೌಂಡರ್ ಮ್ಯಾಕ್ಸ್‌ವೆಲ್ ಮೇಲೆ ಗುಜರಾತ್ ಹಣದ ಮಳೆ ಹರಿಸುವುದು ಖಚಿತ.




