IPL 2025: ಐಪಿಎಲ್ ಮೆಗಾ ಹರಾಜು: 3-4 ಆಟಗಾರರು ಮಾತ್ರ ರಿಟೈನ್

| Updated By: ಝಾಹಿರ್ ಯೂಸುಫ್

Updated on: Mar 11, 2024 | 1:24 PM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ಮಾರ್ಚ್ 22 ರಿಂದ ಆರಂಭವಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ RCB ಮತ್ತು CSK ತಂಡಗಳು ಮುಖಾಮುಖಿಯಾಗಲಿದೆ. ಈ ಹೈವೋಲ್ಟೆಜ್ ಪಂದ್ಯದೊಂದಿಗೆ IPL 2024 ಶುರುವಾಗಲಿದೆ.

1 / 7
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ಆರಂಭಕ್ಕೂ ಮುನ್ನವೇ IPL 2025 ರ ಬಿಗ್ ಅಪ್​ಡೇಟ್​ವೊಂದು ಹೊರಬಿದ್ದಿದೆ. ಐಪಿಎಲ್ 2025 ಕ್ಕಾಗಿ ಆಟಗಾರರ ಮೆಗಾ ಹರಾಜು ನಡೆಯಲಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ದೃಢಪಡಿಸಿದ್ದಾರೆ. ಹೀಗಾಗಿ ಮುಂದಿನ ವರ್ಷ ಎಲ್ಲಾ ತಂಡಗಳು ಬದಲಾಗುವುದು ಬಹುತೇಕ ಖಚಿತ ಎಂದೇ ಹೇಳಬಹುದು.

2 / 7
ಇದಾಗ್ಯೂ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳಿಗೆ 3-4 ಆಟಗಾರರನ್ನು ರಿಟೈನ್ ಮಾಡಿಕೊಳ್ಳುವ ಅವಕಾಶ ಇರಲಿದೆ ಎಂದು ಅರುಣ್ ಧುಮಾಳ್ ತಿಳಿಸಿದ್ದಾರೆ. ಅಂದರೆ ಒಟ್ಟು 25 ಆಟಗಾರರಲ್ಲಿ 21 ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಬೇಕಾಗುತ್ತದೆ.

3 / 7
ಇಲ್ಲಿ ರಿಟೈನ್ ಮಾಡಿಕೊಳ್ಳಲು ಕೂಡ ಕೆಲ ನಿಯಮಗಳು ಅನ್ವಯವಾಗಲಿದೆ. ಈ ಹಿಂದಿನ ಐಪಿಎಲ್ ಮೆಗಾ ಹರಾಜಿನ ನಿಯಮದ ಪ್ರಕಾರ, ಇಲ್ಲಿ ಒಂದು ತಂಡವು ನಾಲ್ವರನ್ನು ಉಳಿಸಿಕೊಳ್ಳಲು ಬಯಸಿದರೆ 42 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಒಂದು ವೇಳೆ ಮೂವರನ್ನು ಮಾತ್ರ ಉಳಿಸುವುದಾದರೆ 33 ಕೋಟಿ ರೂ. ನೀಡಬೇಕಾಗುತ್ತದೆ.

4 / 7
ಇನ್ನು ಇಬ್ಬರು ಆಟಗಾರರನ್ನು ಉಳಿಸಿಕೊಂಡರೆ 24 ಕೋಟಿ. ರೂ ನೀಡಬೇಕು. ಒಂದು ವೇಳೆ ಒಬ್ಬ ಆಟಗಾರನನ್ನು ಮಾತ್ರ ಉಳಿಸಿಕೊಂಡರೆ 14 ಕೋಟಿ. ರೂ ನೀಡಬೇಕಾಗುತ್ತದೆ. ಇದಾಗ್ಯೂ ರಾಷ್ಟ್ರೀಯ ತಂಡದಲ್ಲಿ ಆಡದ ಆಟಗಾರನನ್ನು ಉಳಿಸಿಕೊಂಡರೆ 4 ಕೋಟಿ ರೂ. ನೀಡಬೇಕು ಎಂಬ ನಿಯಮವಿದೆ. ಇದೇ ನಿಯಮವು ಮುಂದಿನ ಮೆಗಾ ಹರಾಜಿಗೂ ಅನ್ವಯವಾಗುವ ಸಾಧ್ಯತೆಯಿದೆ.

5 / 7
ಇಲ್ಲಿ 4 ಆಟಗಾರರನ್ನು ಉಳಿಸಿಕೊಂಡರೆ, ಮೊದಲ ಆಟಗಾರನಿಗೆ 16 ಕೋಟಿ ರೂ, 2ನೇ ಆಟಗಾರನಿಗೆ 12 ಕೋಟಿ ರೂ, 3ನೇ ಆಟಗಾರನಿಗೆ 8 ಕೋಟಿ ರೂ , 4ನೇ ಆಟಗಾರನಿಗೆ 6 ಕೋಟಿ ರೂ. ನೀಡಬೇಕು. ಅದರಂತೆ ಒಟ್ಟು ಮೊತ್ತ 42 ಕೋಟಿ ಆಗಲಿದೆ. ಇನ್ನು 3 ಆಟಗಾರರನ್ನು ಉಳಿಸಿಕೊಂಡರೆ, ಮೊದಲ ಆಟಗಾರನಿಗೆ 15 ಕೋಟಿ ರೂ, 2ನೇ ಆಟಗಾರನಿಗೆ 11 ಕೋಟಿ ರೂ, 3ನೇ ಆಟಗಾರನಿಗೆ 7 ಕೋಟಿ ರೂ. ನೀಡಬೇಕು. ಅದರಂತೆ ಒಟ್ಟು ಮೊತ್ತ 33 ಕೋಟಿ ರೂ. ವ್ಯಯಿಸಬೇಕು.

6 / 7
ಇಬ್ಬರು ಆಟಗಾರರನ್ನು ಮಾತ್ರ ಉಳಿಸಿಕೊಂಡರೆ, ಮೊದಲ ಆಟಗಾರನಿಗೆ 14 ಕೋಟಿ ರೂ, 2ನೇ ಆಟಗಾರನಿಗೆ 10 ಕೋಟಿ ರೂ. ನೀಡಬೇಕು. ಅದರಂತೆ ಒಟ್ಟು ಮೊತ್ತ 24 ಕೋಟಿ ರೂ. ನೀಡಬೇಕಾಗುತ್ತದೆ. ಇನ್ನು ಒಬ್ಬ ಆಟಗಾರನನ್ನು ಮಾತ್ರ ರಿಟೈನ್ ಮಾಡಿಕೊಂಡರೆ 14 ಕೋಟಿ ರೂ. ನೀಡಬೇಕು.

7 / 7
ಹಾಗೆಯೇ ರಾಷ್ಟ್ರೀಯ ತಂಡದಲ್ಲಿ ಆಡದ ಒಬ್ಬ ಆಟಗಾರನನ್ನು ಮಾತ್ರ ಉಳಿಸಿಕೊಂಡರೆ 4 ಕೋಟಿ ನೀಡಬೇಕಾಗುತ್ತದೆ. ಹೀಗೆ ಉಳಿಸಿಕೊಂಡ ಆಟಗಾರರಿಗೆ ನೀಡಲಾಗುವ ಮೊತ್ತವನ್ನು ಒಟ್ಟು ಹರಾಜು ಮೊತ್ತದಿಂದ ಕಡಿತಗೊಳಿಸಲಾಗುತ್ತದೆ. ಹೀಗಾಗಿ ಮುಂದಿನ ವರ್ಷ ಯಾವ ತಂಡದಿಂದ ಯಾರು ಹೊರಬೀಳಲಿದ್ದಾರೆ ಎಂಬುದು ಈ ಬಾರಿಯ ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ನಿರ್ಧಾರವಾಗುವ ಸಾಧ್ಯತೆ ಹೆಚ್ಚಿದೆ.