
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಪುನರಾರಂಭಕ್ಕೆ ಡೇಟ್ ಫಿಕ್ಸ್ ಆಗಿದೆ. ಅದರಂತೆ ಮೇ 17 ರಿಂದ ಐಪಿಎಲ್ಗೆ ಮತ್ತೆ ಚಾಲನೆ ದೊರೆಯಲಿದೆ. ಈ ಆದರೆ ಉಳಿದ ಪಂದ್ಯಗಳಿಗೆ ಕೆಲ ವಿದೇಶಿ ಆಟಗಾರರು ಅಲಭ್ಯರಾಗಲಿದ್ದಾರೆ. ಈ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವೇಗಿ ಜೋಶ್ ಹೇಝಲ್ವುಡ್ ಹೆಸರು ಕೂಡ ಇದೆ.

ಭುಜದ ನೋವಿನಿಂದ ಬಳಲುತ್ತಿರುವ ಜೋಶ್ ಹೇಝಲ್ವುಡ್ ಆರ್ಸಿಬಿ ತಂಡದ ಉಳಿದ ಮ್ಯಾಚ್ಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬದಲಿ ಆಟಗಾರನ ಹುಡುಕಾಟದಲ್ಲಿದೆ ಎಂಬ ಸುದ್ದಿಗಳು ಹರಿದಾಡುತ್ತಿದೆ.

ಈ ಸುದ್ದಿಗಳ ನಡುವೆ ಆರ್ಸಿಬಿ ತಂಡಕ್ಕೆ ಅಫ್ಘಾನಿಸ್ತಾನ್ ತಂಡದ ವೇಗಿ ನವೀನ್ ಉಲ್ ಹಕ್ ಎಂಟ್ರಿ ಕೊಟ್ಟಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೋಶ್ ಹೇಝಲ್ವುಡ್ ಬದಲಿಗೆ ಆರ್ಸಿಬಿ ನವೀನ್ ಉಲ್ ಹಕ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಫೋಟೋಗಳನ್ನು ಹರಿಬಿಡಲಾಗಿದೆ.

ಈ ಸುದ್ದಿ ನಿಜನಾ? ಎಂದು ಕೇಳಿದ್ರೆ... ಅಲ್ಲಾ, ಇದೊಂದು ಸುಳ್ಳು ಸುದ್ದಿ. ಜೋಶ್ ಹೇಝಲ್ವುಡ್ ಅವರ ಅಲಭ್ಯತೆಯನ್ನು ಆರ್ಸಿಬಿ ಫ್ರಾಂಚೈಸಿ ಇನ್ನೂ ಸಹ ಅಧಿಕೃತವಾಗಿ ಖಚಿತಪಡಿಸಿಲ್ಲ. ಅಲ್ಲದೆ ಅವರ ಬದಲಿಯಾಗಿ ಯಾವುದೇ ಆಟಗಾರನನ್ನು ಕೂಡ ಆಯ್ಕೆ ಮಾಡಿಲ್ಲ ಎಂದು ಆರ್ಸಿಬಿ ಮೂಲಗಳು ತಿಳಿಸಿವೆ.

ಅಂದಹಾಗೆ ನವೀನ್ ಉಲ್ ಹಕ್ 2023 ರಲ್ಲಿ ಲಕ್ನೋ ಸೂಪರ್ ಜೈಂಟ್ಟ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ RCB vs LSG ನಡುವಣ ಪಂದ್ಯದ ವೇಳೆ ನವೀನ್ ಉಲ್ ಹಕ್ ವಿರಾಟ್ ಕೊಹ್ಲಿ ಜೊತೆ ಕಿರಿಕ್ ಮಾಡಿಕೊಂಡಿದ್ದರು. ಅಲ್ಲದೆ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋತಾಗ ನವೀನ್ ಉಲ್ ಹಕ್ ಸೋಷಿಯಲ್ ಮೀಡಿಯಾದಲ್ಲಿ ಮಾವಿನ ಹಣ್ಣಿನ ಫೋಟೋ ಹಂಚಿಕೊಂಡು, ಸ್ವೀಟ್ ಮ್ಯಾಂಗೊ ಎಂದು ಆರ್ಸಿಬಿಯ ಕಾಲೆಳೆದಿದ್ದರು.

ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನವೀನ್ ಉಲ್ ಹಕ್ ಅವರನ್ನು ಜೋಶ್ ಹೇಝಲ್ವುಡ್ ಅವರ ಬದಲಿಯಾಗಿ ಆಯ್ಕೆ ಮಾಡುವ ಸಾಧ್ಯತೆಯಿಲ್ಲ ಎನ್ನಬಹುದು. ಇನ್ನು ಹೇಝಲ್ವುಡ್ ಬರದಿದ್ದರೆ, ಆರ್ಸಿಬಿ ಫ್ರಾಂಚೈಸಿ ಬದಲಿಯಾಗಿ ನ್ಯೂಝಿಲೆಂಡ್ ವೇಗಿಗಳತ್ತ ಮುಖ ಮಾಡುವ ಸಾಧ್ಯತೆ ಹೆಚ್ಚಿದೆ.
Published On - 7:25 am, Thu, 15 May 25