IPL 2025: ತಂಡದ ನಿರ್ದೇಶಕ ಹಾಗೂ ಮುಖ್ಯ ಕೋಚ್​ಗೆ ಗೇಟ್​ ಪಾಸ್ ನೀಡಿದ ಪಂಜಾಬ್ ಕಿಂಗ್ಸ್ ​

Punjab Kings: ಪ್ರತಿ ಬಾರಿಯಂತೆ ಈ ಬಾರಿಯೂ ಐಪಿಎಲ್ ಹರಾಜಿಗೂ ಮುನ್ನ ತಂಡದಲ್ಲಿ ಬದಲಾವಣೆಯ ಕೆಲಸ ಶುರು ಮಾಡಿರುವ ಪಂಜಾಬ್ ಕಿಂಗ್ಸ್, ತಂಡದ ಕ್ರಿಕೆಟ್ ಅಭಿವೃದ್ಧಿ ನಿರ್ದೇಶಕ ಸಂಜಯ್ ಬಂಗಾರ್ ಮತ್ತು ಮುಖ್ಯ ಕೋಚ್ ಟ್ರೆವರ್ ಬೇಲಿಸ್ ಅವರನ್ನು ಅವರ ಸ್ಥಾನಗಳಿಂದ ತೆಗೆದುಹಾಕಿದೆ.

|

Updated on: Sep 26, 2024 | 4:51 PM

ಪ್ರತಿ ಬಾರಿಯಂತೆ ಈ ಬಾರಿಯೂ ಐಪಿಎಲ್ ಹರಾಜಿಗೂ ಮುನ್ನ ತಂಡದಲ್ಲಿ ಬದಲಾವಣೆಯ ಕೆಲಸ ಶುರು ಮಾಡಿರುವ ಪಂಜಾಬ್ ಕಿಂಗ್ಸ್, ಸೆಪ್ಟೆಂಬರ್ 18 ರಂದು ರಿಕಿ ಪಾಂಟಿಂಗ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿತ್ತು. ಇದೀಗ ತಂಡದ ಮುಖ್ಯ ಕೋಚ್ ಹಾಗೂ ನಿರ್ದೇಶಕರನ್ನೇ ತಂಡದಿಂದ ಹೊರಹಾಕಿದೆ.

1 / 8
ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಮುಖ್ಯ ಕೋಚ್ ಆಗಿ ನೇಮಕವಾದ ಎಂಟು ದಿನಗಳ ನಂತರ, ಇಬ್ಬರು ಅನುಭವಿಗಳು ಕೆಲಸ ಕಳೆದುಕೊಂಡಿದ್ದಾರೆ. ವಾಸ್ತವವಾಗಿ, ಕ್ರಿಕೆಟ್ ಅಭಿವೃದ್ಧಿ ನಿರ್ದೇಶಕ ಸಂಜಯ್ ಬಂಗಾರ್ ಮತ್ತು ಮುಖ್ಯ ಕೋಚ್ ಟ್ರೆವರ್ ಬೇಲಿಸ್ ಅವರನ್ನು ಫ್ರಾಂಚೈಸಿ ಅವರ ಸ್ಥಾನಗಳಿಂದ ತೆಗೆದುಹಾಕಿದೆ. ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಮಂಡಳಿಯ ಸದಸ್ಯರು ಸಭೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

2 / 8
ಅದರಂತೆ ಇದೀಗ ಪಂಜಾಬ್ ಕಿಂಗ್ಸ್ ತಂಡದಿಂದ ಹೊರಬಿದ್ದಿರುವ ಸಂಜಯ್ ಬಂಗಾರ್ ಈ ಹಿಂದೆ ಟೀಂ ಇಂಡಿಯಾಕ್ಕೆ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ 2021 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಸಲಹೆಗಾರರಾಗಿಯೂ ಕೆಲಸ ಮಾಡಿದ್ದರು.

3 / 8
ವಾಸ್ತವವಾಗಿ, ಪಂಜಾಬ್ ಕಿಂಗ್ಸ್ ತಂಡವು ಕಳೆದ 10 ವರ್ಷಗಳಿಂದ ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ. ಆದರೆ ಕಳೆದ ಎರಡು ವರ್ಷಗಳಲ್ಲಿ ಟ್ರಾವಿಸ್ ಬೇಲಿಸ್ ಮುಖ್ಯ ಕೋಚ್ ಆಗಿದ್ದಾಗ ತಂಡದ ಪ್ರದರ್ಶನ ತೀರಾ ಕಳಪೆಯಾಗಿತ್ತು. ಐಪಿಎಲ್ 2024 ರಲ್ಲಿ, ಪಂಜಾಬ್ ತಂಡವು ಪಾಯಿಂಟ್ ಪಟ್ಟಿಯಲ್ಲಿ 9 ನೇ ಸ್ಥಾನ ಪಡೆದುಕೊಂಡರೆ, ಕೊನೆಯ ಸೀಸನ್​ನಲ್ಲಿ 8 ನೇ ಸ್ಥಾನದಲ್ಲಿತ್ತು.

4 / 8
ಮತ್ತೊಂದೆಡೆ, ಸಂಜಯ್ ಬಂಗಾರ್ 2014 ರಿಂದ 2016 ರವರೆಗೆ ಪಂಜಾಬ್ ಕಿಂಗ್ಸ್‌ನ ಮುಖ್ಯ ಕೋಚ್ ಆಗಿದ್ದರು. ಇದರ ನಂತರ, 2021 ರಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಸಲಹೆಗಾರರಾಗಿದ್ದರು. ನಂತರ ಆರ್​ಸಿಬಿ ಅವರಿಗೆ ಮುಖ್ಯ ಕೋಚ್ ಆಗಿ ಬಡ್ತಿ ನೀಡಿತ್ತು. 2023 ರಲ್ಲಿ ಮತ್ತೆ ಪಂಜಾಬ್ ಕಿಂಗ್ಸ್‌ ತಂಡ ಸೇರಿಕೊಂಡಿದ್ದ ಬಂಗಾರ್ ಕ್ರಿಕೆಟ್ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

5 / 8
ಪಂಜಾಬ್ ತಂಡ 2014 ರಲ್ಲಿ ಐಪಿಎಲ್ ಪ್ಲೇಆಫ್‌ಗೆ ಕೊನೆಯ ಬಾರಿಗೆ ಅರ್ಹತೆ ಪಡೆದಿತ್ತು. ಆದರೆ, ಈವರೆಗೆ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಸತತವಾಗಿ ಟ್ರೋಫಿಯ ಹುಡುಕಾಟದಲ್ಲಿರುವ ಫ್ರಾಂಚೈಸ್ ಕಳೆದ 10 ವರ್ಷಗಳಲ್ಲಿ 7 ಕೋಚ್‌ಗಳನ್ನು ಬದಲಾಯಿಸಿದೆ.

6 / 8
2014 ರಿಂದ 2016 ರವರೆಗೆ ತಂಡದ ಮುಖ್ಯ ಕೋಚ್ ಆಗಿ ಸಂಜಯ್ ಬಂಗಾರ್ ಕಾರ್ಯನಿರ್ವಹಿಸಿದ್ದರು. ಆ ಬಳಿಕ 2017 ರಲ್ಲಿ, ತಂಡವು ಅನುಭವಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ2018ರಲ್ಲಿ ಮತ್ತೆ ಕೋಚ್ ಬದಲಾಗಿದ್ದು, ಈ ಬಾರಿ ಬ್ರಾಡ್ ಹಾಡ್ಜ್​ಗೆ ಜವಾಬ್ದಾರಿ ನೀಡಲಾಗಿತ್ತು.

7 / 8
2019 ರಲ್ಲಿ, ಮೈಕ್ ಹೆಸ್ಸನ್ ಮುಖ್ಯ ಕೋಚ್ ಆಗಿದ್ದರೆ, ಅನಿಲ್ ಕುಂಬ್ಳೆ ಅವರು 2020 ರಿಂದ 2022 ರವರೆಗೆ ಮುಖ್ಯ ಕೋಚ್ ಆಗಿದ್ದರು. ಆ ಬಳಿಕ ಟ್ರೆವರ್ ಬೇಲಿಸ್ 2023 ಮತ್ತು 2024 ರ ಸೀಸನ್‌ಗೆ ಮುಖ್ಯ ಕೋಚ್ ಆಗಿದ್ದರು. ಇದೀಗ ರಿಕಿ ಪಾಂಟಿಂಗ್ ಈ ಜವಾಬ್ದಾರಿಯನ್ನು ಪಡೆದುಕೊಂಡಿದ್ದಾರೆ. ಇಷ್ಟೆಲ್ಲಾ ಕೋಚ್​ಗಳನ್ನು ಬದಲಾಯಿಸಿದರೂ ಪಂಜಾಬ್ ಕಿಂಗ್ಸ್ ತಂಡಕ್ಕೆ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ.

8 / 8
Follow us
45 ಲಕ್ಷ ರೂ. ನೋಟುಗಳಿಂದ ದುರ್ಗಾದೇವಿಗೆ ಅಲಂಕಾರ! ಬೆರಗಾದ ಭಕ್ತರು

ನವರಾತ್ರಿ ಉತ್ಸವದಲ್ಲಿ ಕಣ್ಮನ ಸೆಳೆದ ಕಾಂತಾರ ಚಿತ್ರದ ಪಂಜುರ್ಲಿ ನೃತ್ಯ

ಇದು ಮೌನವಾಗಿರುವ ಕಾಲ: ಜೈಲಿಂದ ಹೊರಬಂದ ಮುರುಘಾಶ್ರೀ ಮೊದಲ ಮಾತು

ನರಕದ ನೋವು ಹೆಚ್ಚಲು ಕಾರಣವಾದ ಚೈತ್ರಾ ಕುಂದಾಪುರ? ಎಲ್ಲ ಮುಗಿದ ಬಳಿಕ ಅಳು

ಒಳ ಉಡುಪಿನ ವಿಷಯ ಪ್ರಸ್ತಾಪಿಸಿ ಮಹಿಳಾ ಸ್ಪರ್ಧಿಗಳಿಗೆ ಮುಜುಗರ ತಂದ ಜಗದೀಶ್

ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು

ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್

ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  

ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ

ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ