- Kannada News Photo gallery Cricket photos IPL 2025 Dwayne Bravo left CSK joins KKR as mentor kannada news
IPL 2025: ಸಿಎಸ್ಕೆ ತೊರೆದು ಚಾಂಪಿಯನ್ ತಂಡ ಸೇರಿಕೊಂಡ ಡ್ವೇನ್ ಬ್ರಾವೋ
Dwayne Bravo: 2025 ರ ಐಪಿಎಲ್ಗೂ ಮುನ್ನ ಎಲ್ಲಾ ತಂಡಗಳಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ಅದರಂತೆ ಇದೀಗ ಕಳೆದ ಆವೃತ್ತಿಯ ಚಾಂಪಿಯನ್ ಕೆಕೆಆರ್ ತಂಡಕ್ಕೆ ಹೊಸಬರ ಎಂಟ್ರಿಯಾಗಿದೆ. ಈ ಮೊದಲು ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಅವರ ಸ್ಥಾನಕ್ಕೆ ಅನುಭವಿ ಕ್ರಿಕೆಟಿಗ ಡ್ವೇನ್ ಬ್ರಾವೋ ಅವರನ್ನು ನೇಮಕ ಮಾಡಲಾಗಿದೆ ಎಂದು ಕೆಕೆಆರ್ ಫ್ರಾಂಚೈಸಿ ತಿಳಿಸಿದೆ ಮೆಂಟರ್ ಆಗಿ ಸೇರ್ಪಡೆಗೊಂಡಿದ್ದಾರೆ
Updated on:Sep 27, 2024 | 11:53 AM

2025 ರ ಐಪಿಎಲ್ಗೂ ಮುನ್ನ ಎಲ್ಲಾ ತಂಡಗಳಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ಅದರಂತೆ ಇದೀಗ ಕಳೆದ ಆವೃತ್ತಿಯ ಚಾಂಪಿಯನ್ ಕೆಕೆಆರ್ ತಂಡಕ್ಕೆ ಹೊಸಬರ ಎಂಟ್ರಿಯಾಗಿದೆ. ಈ ಮೊದಲು ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಅವರ ಸ್ಥಾನಕ್ಕೆ ಅನುಭವಿ ಕ್ರಿಕೆಟಿಗ ಡ್ವೇನ್ ಬ್ರಾವೋ ಅವರನ್ನು ನೇಮಕ ಮಾಡಲಾಗಿದೆ ಎಂದು ಕೆಕೆಆರ್ ಫ್ರಾಂಚೈಸಿ ತಿಳಿಸಿದೆ ಮೆಂಟರ್ ಆಗಿ ಸೇರ್ಪಡೆಗೊಂಡಿದ್ದಾರೆ.

ಇತ್ತೀಚೆಗಷ್ಟೇ ಎಲ್ಲಾ ರೀತಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಡ್ವೇನ್ ಬ್ರಾವೋ ಇದೀಗ ಐಪಿಎಲ್‌ನಲ್ಲಿ ಹೊಸ ತಂಡದೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಪ್ರಸ್ತುತ ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುತ್ತಿದ್ದ ಬ್ರಾವೋ, ಇಂಜುರಿ ಕಾರಣದಿಂದಾಗಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

ಈ ಮೂಲಕ ಬಹಳ ವರ್ಷಗಳಿಂದ ಸಿಎಸ್ಕೆ ತಂಡದೊಂದಿಗಿನ ಬಂಧವನ್ನು ಬ್ರಾವೋ ಮುರಿದುಕೊಂಡಿದ್ದಾರೆ. ಕಳೆದ ಆವೃತ್ತಿಯವರೆಗೂ ಸಿಎಸ್ಕೆ ತಂಡದ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದ ಬ್ರಾವೋ, ಇದೀಗ ಕೆಕೆಆರ್ ತಂಡದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಐಪಿಎಲ್‌ನಲ್ಲಿ ಸಿಎಸ್ಕೆ ತಂಡವನ್ನು ಪ್ರತಿನಿಧಿಸುತ್ತಿದ್ದ ಬ್ರಾವೋ, ಸಿಪಿಎಲ್‌ನಲ್ಲಿ ಕೆಕೆಆರ್ ಒಡೆತನದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಪರ ಆಡುತ್ತಿದ್ದರು. ಇದೀಗ ಅದೇ ಒಡನಾಟವನ್ನು ಐಪಿಎಲ್‌ನಲ್ಲೂ ಮುಂದುವರೆಸಿರುವ ಬ್ರಾವೋ, ಮುಂದಿನ ಆವೃತ್ತಿಯಿಂದ ಈ ಹಿಂದೆ ಕೆಕೆಆರ್ ತಂಡದಲ್ಲಿ ಗೌತಮ್ ಗಂಭೀರ್ ಮಾಡುತ್ತಿದ್ದ ಕೆಲಸವನ್ನು ಮುಂದುವರೆಸಲಿದ್ದಾರೆ.

ಇನ್ನು ಕೆಕೆಆರ್ ಸೇರಿರುವ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಬ್ರಾವೋ, ‘ನಾನು ಕಳೆದ 10 ವರ್ಷಗಳಿಂದ ಸಿಪಿಎಲ್‌ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದೇನೆ. ವಿವಿಧ ಲೀಗ್‌ಗಳಲ್ಲಿ ನೈಟ್ ರೈಡರ್ಸ್ ಪರ ಮತ್ತು ವಿರುದ್ಧವಾಗಿ ಆಡಿರುವ ನನಗೆ ಅವರು ಕಾರ್ಯನಿರ್ವಹಿಸುವ ರೀತಿಗೆ ಅಪಾರ ಗೌರವವಿದೆ.

ಮಾಲೀಕರ ಉತ್ಸಾಹ, ನಿರ್ವಹಣೆಯ ವೃತ್ತಿಪರತೆ ಮತ್ತು ಕುಟುಂಬದಂತಹ ವಾತಾವರಣವು ಇದನ್ನು ವಿಶೇಷ ಸ್ಥಳವನ್ನಾಗಿ ಮಾಡುತ್ತದೆ. ಇಷ್ಟು ದಿನ ತಂಡದಲ್ಲಿ ಆಟಗಾರನಾಗಿದ್ದ ನಾನು ಇನ್ಮುಂದೆ ಮುಂದಿನ ಪೀಳಿಗೆಯ ಆಟಗಾರರಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡುವುದಕ್ಕೆ ಉತ್ಸುಕನಾಗಿದ್ದೇನೆ ಎಂದಿದ್ದಾರೆ.

ತಮ್ಮ ಟಿ20 ವೃತ್ತಿಜೀವನದಲ್ಲಿ ಒಟ್ಟು 582 ಪಂದ್ಯಗಳನ್ನು ಆಡಿರುವ ಡ್ವೇನ್ ಬ್ರಾವೋ, ಒಟ್ಟು 631 ವಿಕೆಟ್ ಕಬಳಿಸಿದ್ದು, 6970 ರನ್ ಗಳಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಡ್ವೇನ್ ಬ್ರಾವೋ ಟಿ20 ಕ್ರಿಕೆಟ್‌ನಲ್ಲಿ 11 ಬಾರಿ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಮತ್ತು ಎರಡು ಬಾರಿ 5 ವಿಕೆಟ್ ಪಡೆದಿದ್ದಾರೆ.
Published On - 11:12 am, Fri, 27 September 24
























