- Kannada News Photo gallery Cricket photos Dwayne Bravo Retires With World record for winning most T20 finals
Dwayne Bravo: ವಿಶ್ವ ದಾಖಲೆಯೊಂದಿಗೆ ವಿದಾಯ ಹೇಳಿದ ಡ್ವೇನ್ ಬ್ರಾವೊ
Dwayne Bravo: ಟಿ20 ಕ್ರಿಕೆಟ್ನಲ್ಲಿ ಡ್ವೇನ್ ಬ್ರಾವೊ ಒಟ್ಟು 582 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 6970 ರನ್ ಕಲೆಹಾಕಿದರೆ, 631 ವಿಕೆಟ್ಗಳನ್ನು ಸಹ ಕಬಳಿಸಿದ್ದಾರೆ. ಹಾಗೆಯೇ 275 ಕ್ಯಾಚ್ಗಳನ್ನು ಸಹ ಹಿಡಿದಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಪಂದ್ಯಗಳನ್ನಾಡಿದ ವಿಶ್ವದ 2ನೇ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು 684 ಪಂದ್ಯಗಳನ್ನಾಡಿರುವ ಕೀರನ್ ಪೋಲಾರ್ಡ್.
Updated on: Sep 28, 2024 | 8:03 AM

ವೆಸ್ಟ್ ಇಂಡೀಸ್ ದಿಗ್ಗಜ ಡ್ವೇನ್ ಬ್ರಾವೊ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಚಾಂಪಿಯನ್ ಆಟಗಾರನ ಯುಗಾಂತ್ಯವಾಗಿದೆ. ಅದು ಸಹ ವಿಶ್ವ ದಾಖಲೆಯ 17 ಟ್ರೋಫಿಗಳೊಂದಿಗೆ ಎಂಬುದು ವಿಶೇಷ.

ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಟ್ರೋಫಿಗಳನ್ನು ಎತ್ತಿ ಹಿಡಿದ ವಿಶ್ವ ದಾಖಲೆಯೊಂದು ಡ್ವೇನ್ ಬ್ರಾವೊ ಹೆಸರಿನಲ್ಲಿದೆ. ವೆಸ್ಟ್ ಇಂಡೀಸ್ ತಂಡವಲ್ಲದೇ ವಿಶ್ವದ ಹಲವು ಪ್ರಮುಖ ಲೀಗ್ನಲ್ಲಿ ಕಾಣಿಸಿಕೊಂಡಿರುವ ಬ್ರಾವೊ ಒಟ್ಟು 17 ಬಾರಿ ಚಾಂಪಿಯನ್ ತಂಡದ ಭಾಗವಾಗಿದ್ದರು. ಈ ಮೂಲಕ ಟಿ20 ಕ್ರಿಎಕಟ್ನಲ್ಲಿ ಅತ್ಯಧಿಕ ಟ್ರೋಫಿಗಳನ್ನು ಎತ್ತಿ ಹಿಡಿದ ಆಟಗಾರ ಎನಿಸಿಕೊಂಡಿದ್ದಾರೆ.

ಡ್ವೇನ್ ಬ್ರಾವೊ 2012 ಮತ್ತು 2016 ರಲ್ಲಿ ಟಿ20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದರು. ಇನ್ನು ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ (2015, 2017, 2018, 2020, 2021) ಬ್ರಾವೊ ಇದ್ದ ತಂಡವು 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಹಾಗೆಯೇ ಐಪಿಎಲ್ನಲ್ಲಿ (2011, 2018, 2021) ಮೂರು ಬಾರಿ ಚಾಂಪಿಯನ್ ತಂಡದ ಭಾಗವಾಗಿದ್ದಾರೆ.

ಇನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ (2004), ಸ್ಟಾನ್ಫೋರ್ಡ್ ಟಿ20 ಲೀಗ್ (2008), ಚಾಂಪಿಯನ್ಸ್ ಲೀಗ್ ಟಿ20 (2014), ಸೌತ್ ಆಫ್ರಿಕಾ ರಾಮ್ ಸ್ಲಾಮ್ ಟಿ20 (2015), ಸೂಪರ್50 ಕಪ್ (2015) ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ (2016), ಪಾಕಿಸ್ತಾನ್ ಸೂಪರ್ ಲೀಗ್ (2019), ಇಂಟರ್ನ್ಯಾಷನಲ್ ಲೀಗ್ ಟಿ20 (2024) ಟೂರ್ನಿಗಳಲ್ಲಿ ಡ್ವೇನ್ ಬ್ರಾವೊ ಚಾಂಪಿಯನ್ ಪಟ್ಟದೊಂದಿಗೆ ಟ್ರೋಫಿಯನ್ನು ಎತ್ತಿ ಹಿಡಿದಿದ್ದಾರೆ.

ಇದೀಗ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಬಾರಿ (17) ಟ್ರೋಫಿ ಗೆದ್ದ ಆಟಗಾರನಾಗಿ ಡ್ವೇನ್ ಬ್ರಾವೊ ವಿದಾಯ ಹೇಳಿದ್ದಾರೆ. ಈ ವಿದಾಯದ ಬೆನ್ನಲ್ಲೇ ವೆಸ್ಟ್ ಇಂಡೀಸ್ ಚಾಂಪಿಯನ್ ಪ್ಲೇಯರ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿ ಆಯ್ಕೆಯಾಗಿದ್ದಾರೆ. ಅದರಂತೆ ಮುಂಬರುವ ದಿನಗಳಲ್ಲಿ ಮೆಂಟರ್ ಆಗಿಯೂ ಬ್ರಾವೊ ಟ್ರೋಫಿ ಗೆಲ್ಲಲಿದ್ದಾರಾ ಕಾದು ನೋಡಬೇಕಿದೆ.
