AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dwayne Bravo: ವಿಶ್ವ ದಾಖಲೆಯೊಂದಿಗೆ ವಿದಾಯ ಹೇಳಿದ ಡ್ವೇನ್ ಬ್ರಾವೊ

Dwayne Bravo: ಟಿ20 ಕ್ರಿಕೆಟ್​ನಲ್ಲಿ ಡ್ವೇನ್ ಬ್ರಾವೊ ಒಟ್ಟು 582 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 6970 ರನ್ ಕಲೆಹಾಕಿದರೆ, 631 ವಿಕೆಟ್​ಗಳನ್ನು ಸಹ ಕಬಳಿಸಿದ್ದಾರೆ. ಹಾಗೆಯೇ 275 ಕ್ಯಾಚ್​ಗಳನ್ನು ಸಹ ಹಿಡಿದಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಪಂದ್ಯಗಳನ್ನಾಡಿದ ವಿಶ್ವದ 2ನೇ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು 684 ಪಂದ್ಯಗಳನ್ನಾಡಿರುವ ಕೀರನ್ ಪೋಲಾರ್ಡ್.

ಝಾಹಿರ್ ಯೂಸುಫ್
|

Updated on: Sep 28, 2024 | 8:03 AM

Share
ವೆಸ್ಟ್ ಇಂಡೀಸ್ ದಿಗ್ಗಜ ಡ್ವೇನ್ ಬ್ರಾವೊ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಚಾಂಪಿಯನ್ ಆಟಗಾರನ ಯುಗಾಂತ್ಯವಾಗಿದೆ. ಅದು ಸಹ ವಿಶ್ವ ದಾಖಲೆಯ 17 ಟ್ರೋಫಿಗಳೊಂದಿಗೆ ಎಂಬುದು ವಿಶೇಷ.

1 / 5
ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಟ್ರೋಫಿಗಳನ್ನು ಎತ್ತಿ ಹಿಡಿದ ವಿಶ್ವ ದಾಖಲೆಯೊಂದು ಡ್ವೇನ್ ಬ್ರಾವೊ ಹೆಸರಿನಲ್ಲಿದೆ. ವೆಸ್ಟ್ ಇಂಡೀಸ್ ತಂಡವಲ್ಲದೇ ವಿಶ್ವದ ಹಲವು ಪ್ರಮುಖ ಲೀಗ್​ನಲ್ಲಿ ಕಾಣಿಸಿಕೊಂಡಿರುವ ಬ್ರಾವೊ ಒಟ್ಟು 17 ಬಾರಿ ಚಾಂಪಿಯನ್ ತಂಡದ ಭಾಗವಾಗಿದ್ದರು. ಈ ಮೂಲಕ ಟಿ20 ಕ್ರಿಎಕಟ್​ನಲ್ಲಿ ಅತ್ಯಧಿಕ ಟ್ರೋಫಿಗಳನ್ನು ಎತ್ತಿ ಹಿಡಿದ ಆಟಗಾರ ಎನಿಸಿಕೊಂಡಿದ್ದಾರೆ.

2 / 5
ಡ್ವೇನ್ ಬ್ರಾವೊ 2012 ಮತ್ತು 2016 ರಲ್ಲಿ ಟಿ20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದರು. ಇನ್ನು ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ (2015, 2017, 2018, 2020, 2021) ಬ್ರಾವೊ ಇದ್ದ ತಂಡವು 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಹಾಗೆಯೇ ಐಪಿಎಲ್​ನಲ್ಲಿ (2011, 2018, 2021) ಮೂರು ಬಾರಿ ಚಾಂಪಿಯನ್ ತಂಡದ ಭಾಗವಾಗಿದ್ದಾರೆ.

3 / 5
ಇನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ (2004), ಸ್ಟಾನ್​ಫೋರ್ಡ್ ಟಿ20 ಲೀಗ್ (2008), ಚಾಂಪಿಯನ್ಸ್ ಲೀಗ್ ಟಿ20 (2014), ಸೌತ್ ಆಫ್ರಿಕಾ ರಾಮ್ ಸ್ಲಾಮ್ ಟಿ20 (2015), ಸೂಪರ್50 ಕಪ್ (2015) ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ (2016), ಪಾಕಿಸ್ತಾನ್ ಸೂಪರ್ ಲೀಗ್ (2019), ಇಂಟರ್​ನ್ಯಾಷನಲ್ ಲೀಗ್ ಟಿ20 (2024) ಟೂರ್ನಿಗಳಲ್ಲಿ ಡ್ವೇನ್ ಬ್ರಾವೊ ಚಾಂಪಿಯನ್ ಪಟ್ಟದೊಂದಿಗೆ ಟ್ರೋಫಿಯನ್ನು ಎತ್ತಿ ಹಿಡಿದಿದ್ದಾರೆ.

4 / 5
ಇದೀಗ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಬಾರಿ (17) ಟ್ರೋಫಿ ಗೆದ್ದ ಆಟಗಾರನಾಗಿ ಡ್ವೇನ್ ಬ್ರಾವೊ ವಿದಾಯ ಹೇಳಿದ್ದಾರೆ. ಈ ವಿದಾಯದ ಬೆನ್ನಲ್ಲೇ ವೆಸ್ಟ್ ಇಂಡೀಸ್ ಚಾಂಪಿಯನ್ ಪ್ಲೇಯರ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿ ಆಯ್ಕೆಯಾಗಿದ್ದಾರೆ. ಅದರಂತೆ ಮುಂಬರುವ ದಿನಗಳಲ್ಲಿ ಮೆಂಟರ್ ಆಗಿಯೂ ಬ್ರಾವೊ ಟ್ರೋಫಿ ಗೆಲ್ಲಲಿದ್ದಾರಾ ಕಾದು ನೋಡಬೇಕಿದೆ.

5 / 5
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ಎಂಎಲ್​ಸಿಗಳ ಪ್ರಮಾಣವಚನಕ್ಕೆ ಬೈಕ್​ನಲ್ಲೇ ಆಗಮಿಸಿದ ಮಹಾರಾಷ್ಟ್ರ ಸಿಎಂ

ಸಾವಿರಾರು ಕೋಟಿ ರೂ.ವಂಚನೆ:ಶಿವಂ ಅಸೋಸಿಯೇಟ್ ಮೇಲೆ ದಾಳಿ

ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?

ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು

ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?

‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ

ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!

‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು

ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ