
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಲಿದೆ. ಏಪ್ರಿಲ್ 18 ರಂದು ನಡೆಯಲಿರುವ ಈ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ವಿಶೇಷ ಎಂದರೆ ಈ ಪಂದ್ಯದ ಬಳಿಕ ಆರ್ಸಿಬಿ ತಂಡದ ಮುಂದಿನ ಎದುರಾಳಿ ಪಂಜಾಬ್ ಕಿಂಗ್ಸ್.

ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳಲ್ಲಿ ಮುಖಾಮುಖಿಯಾಗಲಿದೆ. ಮೊದಲ ಪಂದ್ಯವು ಏಫ್ರಿಲ್ 18 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದರೆ, ಎರಡು ದಿನಗಳ ಬಳಿಕ ಉಭಯ ತಂಡಗಳು ಚಂಡೀಗಢ್ನಲ್ಲಿ ಮತ್ತೆ ಕಣಕ್ಕಿಳಿಯಲಿದೆ.

ಇತ್ತ ಒಂದೇ ತಂಡದ ವಿರುದ್ಧ ಸತತ ಪಂದ್ಯಗಳನ್ನು ಆಯೋಜಿಸಿದರೂ, ಉಭಯ ತಂಡಗಳಿಗೆ ನೀಡಿರುವುದು ಕೇವಲ ಒಂದು ದಿನದ ಬಿಡುವು ಮಾತ್ರ. ಅಂದರೆ ಏಪ್ರಿಲ್ 18 ಮತ್ತು ಏಪ್ರಿಲ್ 20 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದರ ನಡುವೆ ಏಪ್ರಿಲ್ 19 ರಂದು ಮಾತ್ರ ಉಭಯ ತಂಡಗಳಿಗೆ ಬಿಡುವು ನೀಡಲಾಗಿದೆ.

ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ ಏಪ್ರಿಲ್ 20 ರಂದು ಮಧ್ಯಾಹ್ನ ಪಂಜಾಬ್ ಕಿಂಗ್ಸ್ ಮತ್ತು ಆರ್ಸಿಬಿ ಕಣಕ್ಕಿಳಿಯಲಿವೆ. ಅಂದರೆ ಏಪ್ರಿಲ್ 18 ರಂದು ರಾತ್ರಿ ಪಂದ್ಯ ಮುಗಿದ ಬಳಿಕ ಏಪ್ರಿಲ್ 19 ರಂದು ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಚಂಡೀಗಢ್ನತ್ತ ಪ್ರಯಾಣ ಬೆಳೆಸಬೇಕು. ಅಲ್ಲದೆ ಮರುದಿನ ಮಧ್ಯಾಹ್ನದೊಳಗೆ ಮತ್ತೆ ಪಂದ್ಯವಾಡಲು ಸಜ್ಜಾಗಬೇಕಿದೆ.

ಒಟ್ಟಿನಲ್ಲಿ ಐಪಿಎಲ್ ಮ್ಯಾನೇಜ್ಮೆಂಟ್ ರೂಪಿಸಿರುವ ಈ ವೇಳಾಪಟ್ಟಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ಆಟಗಾರರು ಸಂಕಷ್ಟಕ್ಕೆ ಸಿಲುಕುವುದಂತು ದಿಟ. ಹೀಗಾಗಿ ಏಪ್ರಿಲ್ 20ರ ಬಳಿಕ ಈ ಬಗ್ಗೆ ಆಟಗಾರರಿಂದಲೇ ಆಕ್ರೋಶಗಳು ವ್ಯಕ್ತವಾದರೂ ಅಚ್ಚರಿಪಡಬೇಕಿಲ್ಲ.
Published On - 9:54 am, Thu, 17 April 25