
ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಲ್ (Yuzvendra Chahal) ಧನಶ್ರೀ ವರ್ಮಾ ಅವರಿಂದ ವಿಚ್ಛೇದನ ಪಡೆದಿರುವುದು ಗೊತ್ತೇ ಇದೆ. ಈ ಡೈವೋರ್ಸ್ ಬೆನ್ನಲ್ಲೇ ಚಹಲ್ ಅವರೊಂದಿಗೆ ಆರ್ಜೆ ಮಹ್ವಾಶ್ (Rj Mahvash) ಹೆಸರು ತಳುಕು ಹಾಕಿಕೊಂಡಿತ್ತು. ಅದರಲ್ಲೂ ಚಾಂಪಿಯನ್ಸ್ ಟ್ರೋಫಿ ವೇಳೆ ಇಬ್ಬರು ಜೊತೆಯಾಗಿ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು.

ಇದೀಗ ಐಪಿಎಲ್ ವೇಳೆಯೂ ಆರ್ಜೆ ಮಹ್ವಾಶ್ ಕಾಣಿಸಿಕೊಂಡಿದ್ದಾರೆ. ಅದು ಸಹ ಯುಜ್ವೇಂದ್ರ ಚಹಲ್ ಪ್ರತಿನಿಧಿಸುವ ಪಂಜಾಬ್ ಕಿಂಗ್ಸ್ ತಂಡದ ಪಂದ್ಯದ ವೇಳೆ. ಚಂಡೀಗಢ್ನ ಮುಲ್ಲನ್ಪುರ್ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಮಹ್ವಾಶ್, ಯುಜ್ವೇಂದ್ರ ಚಹಲ್ ಹಾಗೂ ಪಂಜಾಬ್ ಕಿಂಗ್ಸ್ ತಂಡವನ್ನು ಹುರಿದುಂಬಿಸುತ್ತಿರುವುದು ಕಂಡು ಬಂದಿದೆ.

ಸ್ಟೇಡಿಯಂನಲ್ಲಿ ಗ್ಯಾಲರಿಯಲ್ಲಿ ಹುರಿದುಂಬಿಸುತ್ತಾ ಕುಣಿದು ಕುಪ್ಪಳಿಸುತ್ತಿದ್ದ ಮಹ್ವಾಶ್ ಅವರ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರೊಂದಿಗೆ ಯುಜ್ವೇಂದ್ರ ಚಹಲ್ ಡೇಟಿಂಗ್ನಲ್ಲಿರುವುದು ಖಚಿತವಾಗಿದೆ. ಏಕೆಂದರೆ ಮಹ್ವಾಶ್ ಕಾಣಿಸಿಕೊಂಡಿದ್ದು, ವಿಐಪಿ ಗ್ಯಾಲರಿಯಲ್ಲಿ. ಗೆಳತಿಗೆ ಈ ಟಿಕೆಟ್ಗಳನ್ನು ಚಹಲ್ ಕೊಡಿಸಿದ್ದಾರೆ ಎಂದು ವರದಿಯಾಗಿದೆ.

ಒಟ್ಟಿನಲ್ಲಿ ದಾಂಪತ್ಯ ಜೀವನ ಅಂತ್ಯಗೊಳಿಸಿರುವ ಯುಜ್ವೇಂದ್ರ ಚಹಲ್ ಇದೀಗ ಆರ್ಜೆ ಮಹ್ವಾಶ್ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದು, ಈ ತಾರಾ ಜೋಡಿ ಇದೀಗ ಪಾಪರಾಜಿಗಳ ಹಾಟ್ ಫೇವರೇಟ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಣಗ್ಸ್ ತಂಡವು ಪ್ರಿಯಾಂಶ್ ಆರ್ಯ (103) ಅವರ ಶತಕದ ನೆರವಿನಿಂದ 20 ಓವರ್ಗಳಲ್ಲಿ 219 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 201 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡ 18 ರನ್ಗಳ ಜಯ ಸಾಧಿಸಿದೆ.