IPL 2025: 4+2… ಹೀಗಿದೆ RCB ತಂಡದ ಪ್ಲೇಆಫ್ ಲೆಕ್ಕಾಚಾರ

Updated on: Apr 22, 2025 | 11:54 AM

IPL 2025 RCB Playoffs Scenarios: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈವರೆಗೆ 8 ಪಂದ್ಯಗಳನ್ನಾಡಿದೆ. ಈ ಎಂಟು ಮ್ಯಾಚ್​ಗಳಲ್ಲಿ 5 ಗೆಲುವು ದಾಖಲಿಸಿದೆ. ಇನ್ನುಳಿದಿರುವುದು ಕೇವಲ 6 ಪಂದ್ಯಗಳು ಮಾತ್ರ. ಈ ಆರು ಮ್ಯಾಚ್​ಗಳಲ್ಲಿ 4 ಪಂದ್ಯಗಳನ್ನು ತವರಿನಲ್ಲಿ ಆಡಿದರೆ, ಇನ್ನೆರಡು ಪಂದ್ಯಗಳನ್ನು ದೆಹಲಿ ಮತ್ತು ಲಕ್ನೋದಲ್ಲಿ ಆಡಲಿದೆ.

1 / 6
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18ರ ಮೊದಲಾರ್ಧ ಮುಗಿದು ದ್ವಿತೀಯಾರ್ಧದ ಪಂದ್ಯಗಳು ಶುರುವಾಗಿದೆ. ದ್ವಿತೀಯಾರ್ಧದ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಬಗ್ಗು ಬಡಿದಿದೆ. ಈ ಗೆಲುವಿನೊಂದಿಗೆ ಆರ್​ಸಿಬಿ ತಂಡವು ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.

2 / 6
ಸದ್ಯ ಮೂರನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಂದಿನ 6 ಪಂದ್ಯಗಳು ಬಹಳ ಮುಖ್ಯ. ಏಕೆಂದರೆ ಈ ಆರು ಮ್ಯಾಚ್​ಗಳಲ್ಲಿ ಭರ್ಜರಿ ಜಯ ಸಾಧಿಸಿದರೆ ಆರ್​ಸಿಬಿ ನೇರವಾಗಿ ಪ್ಲೇಆಫ್​ಗೆ ಎಂಟ್ರಿ ಕೊಡಬಹುದು. ಸಾಮಾನ್ಯವಾಗಿ ಪ್ಲೇಆಫ್​ ಪ್ರವೇಶಿಸಲು 16 ಅಂಕಗಳನ್ನು ಪಡೆದರೆ ಸಾಕು.

3 / 6
ಇದೀಗ ಆರ್​ಸಿಬಿ ತಂಡವು ಒಟ್ಟು 10 ಅಂಕಗಳನ್ನು ಹೊಂದಿದೆ. ಇನ್ನುಳಿದ 6 ಮ್ಯಾಚ್​ಗಳಲ್ಲಿ 3 ರಲ್ಲಿ ಗೆದ್ದರೆ 16 ಅಂಕಗಳು ಆಗಲಿದೆ. ಆದರೆ ಆರ್​ಸಿಬಿ ತಂಡವು ಮುಂದಿನ 6 ಪಂದ್ಯಗಳಲ್ಲಿ 4 ಮ್ಯಾಚ್​ಗಳನ್ನು ತವರಿನಲ್ಲಿ ಆಡಬೇಕಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನಲ್ಲಿ ಈವರೆಗೆ ಒಂದೇ ಒಂದು ಪಂದ್ಯ ಗೆದ್ದಿಲ್ಲ ಎಂಬುದು.

4 / 6
ಈ ಬಾರಿ ತವರಿನಲ್ಲಿ ಆಡಿದ 3 ಪಂದ್ಯಗಳಲ್ಲಿ ಆರ್​ಸಿಬಿ ತಂಡ ಸೋಲನುಭವಿಸಿದೆ. ಇದಾಗ್ಯೂ ಎದುರಾಳಿಗಳ ತವರು ಮೈದಾನದಲ್ಲಿ 5 ಗೆಲುವು ದಾಖಲಿಸಿ 10 ಪಾಯಿಂಟ್ಸ್​ಗಳನ್ನು ಕೆಲೆಹಾಕಿರುವುದು ವಿಶೇಷ. ಇದೀಗ 4+2 ಪಂದ್ಯಗಳನ್ನು ಆಡಬೇಕಿರುವ ಆರ್​ಸಿಬಿಗೆ ತವರಿನಲ್ಲಿ ನಡೆಯಲಿರುವ ಪಂದ್ಯಗಳೇ ನಿರ್ಣಾಯಕ.

5 / 6
ಅಂದರೆ ತವರು ಮೈದಾನದಲ್ಲಿ ಆರ್​ಸಿಬಿ ಆಡಲಿರುವ 4 ಮ್ಯಾಚ್​ಗಳಲ್ಲಿ ಕನಿಷ್ಠ 2 ಗೆಲುವು ಅತ್ಯವಶ್ಯಕ. ಇನ್ನುಳಿದ 2 ಪಂದ್ಯಗಳಲ್ಲಿ 1 ಗೆಲುವು ದಾಖಲಿಸಿದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 16 ಅಂಕಗಳನ್ನು ಪಡೆಯಲಿದೆ. ಈ ಮೂಲಕ ಆರ್​ಸಿಬಿ ಪ್ಲೇಆಫ್ ಹಂತಕ್ಕೇರಬಹುದು.

6 / 6
ಇನ್ನು ಆರ್​ಸಿಬಿ ತಂಡದ ಮುಂದಿನ ಎದುರಾಳಿಗಳು ಯಾರೆಂದು ನೋಡುವುದಾದರೆ.... ರಾಜಸ್ಥಾನ್ ರಾಯಲ್ಸ್ (ಬೆಂಗಳೂರಿನಲ್ಲಿ ಪಂದ್ಯ), ಡೆಲ್ಲಿ ಕ್ಯಾಪಿಟಲ್ಸ್ (ದೆಹಲಿಯಲ್ಲಿ ಪಂದ್ಯ), ಚೆನ್ನೈ ಸೂಪರ್ ಕಿಂಗ್ಸ್ (ಬೆಂಗಳೂರಿನಲ್ಲಿ ಪಂದ್ಯ), ಲಕ್ನೋ ಸೂಪರ್ ಜೈಂಟ್ಸ್ (ಲಕ್ನೋನಲ್ಲಿ ಪಂದ್ಯ), ಸನ್​ರೈಸರ್ಸ್ ಹೈದರಾಬಾದ್ (ಬೆಂಗಳೂರಿನಲ್ಲಿ ಪಂದ್ಯ), ಕೊಲ್ಕತ್ತಾ ನೈಟ್ ರೈಡರ್ಸ್ (ಬೆಂಗಳೂರಿನಲ್ಲಿ ಪಂದ್ಯ). ಈ ಮ್ಯಾಚ್​ಗಳ ಮೂಲಕ ಆರ್​ಸಿಬಿ ತಂಡದ ಪ್ಲೇಆಫ್ ಭವಿಷ್ಯ ನಿರ್ಧಾರವಾಗಲಿದೆ.

Published On - 11:54 am, Tue, 22 April 25