IPL 2026: ಗರಿಷ್ಠ ಮೂಲ ಬೆಲೆ ಘೋಷಿಸಿದ ಆಟಗಾರರು ಯಾರೆಲ್ಲಾ ಗೊತ್ತಾ?

Updated on: Dec 09, 2025 | 3:10 PM

IPL 2026 Auction: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿಗೆ ವೇದಿಕೆ ಸಿದ್ಧವಾಗಿದೆ. ಡಿಸೆಂಬರ್ 16 ರಂದು ಅಬುಧಾಬಿಯ ಇತಿಹಾದ್ ಅರೇನಾದಲ್ಲಿ ನಡೆಯಲಿರುವ ಈ ಹರಾಜಿನಲ್ಲಿ ಒಟ್ಟು 350 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಈ 350 ಆಟಗಾರರಲ್ಲಿ 40 ಮಂದಿ ತಮ್ಮ ಆರಂಭಿಕ ಬಿಡ್ಡಿಂಗ್ ಬೆಲೆ 2 ಕೋಟಿ ರೂ. ಎಂದು ಘೋಷಿಸಿದ್ದಾರೆ.

1 / 5
IPL 2026: ಐಪಿಎಲ್ ಮಿನಿ ಹರಾಜಿಗಾಗಿ ಬರೋಬ್ಬರಿ 350 ಆಟಗಾರರು ಆಯ್ಕೆಯಾಗಿದ್ದಾರೆ. ಈ ಆಟಗಾರರನ್ನು 8 ಕೆಟಗರಿಯಲ್ಲಿ ವಿಂಗಡಿಸಲಾಗಿದೆ. ಇಲ್ಲಿ ಮೊದಲ ಪಟ್ಟಿಯಲ್ಲಿ ಗರಿಷ್ಠ ಮೂಲ ಬೆಲೆ ಘೋಷಿಸಿರುವ ಆಟಗಾರರು ಕಾಣಿಸಿಕೊಂಡಿದ್ದಾರೆ. ಅಂದರೆ ನಲ್ವತ್ತು ಆಟಗಾರರು ತಮ್ಮ ಆರಂಭಿಕ ಬಿಡ್ಡಿಂಗ್ ಮೊತ್ತ 2 ಕೋಟಿ ರೂ. ಎಂದು ಘೋಷಿಸಿದ್ದಾರೆ.

2 / 5
ಇನ್ನು 9 ಆಟಗಾರರ ಬೇಸ್ ಪ್ರೈಸ್ 1.50 ಕೋಟಿ ರೂ. ಹಾಗೆಯೇ 4 ಆಟಗಾರರು 1.25 ಕೋಟಿ ರೂ. ಮೂಲ ಬೆಲೆ ಘೋಷಿಸಿದ್ದಾರೆ. ಇನ್ನು 17 ಆಟಗಾರರು 1 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡರೆ, 42 ಆಟಗಾರರು ತಮ್ಮ ಆರಂಭಿಕ ಬೆಲೆ 75 ಲಕ್ಷ ರೂ. ಎಂದು ತಿಳಿಸಿದ್ದಾರೆ. ಹಾಗೆಯೇ 50 ಲಕ್ಷ ರೂ. ಮೂಲ ಬೆಲೆ ಹೊಂದಿರುವ 4 ಆಟಗಾರರು, 40 ಲಕ್ಷ ರೂ. ಮೂಲ ಬೆಲೆ ಘೋಷಿಸಿರುವ 7 ಆಟಗಾರರು ಈ ಪಟ್ಟಿಯಲ್ಲಿದ್ದಾರೆ. ಇದಲ್ಲದೆ 30 ಲಕ್ಷ ರೂ. ಮೂಲ ಬೆಲೆಯೊಂದು 227 ಆಟಗಾರರ ಹೆಸರು ಕಾಣಿಸಿಕೊಂಡಿದೆ. ಅದರಂತೆ ಈ ಬಾರಿ 2 ಕೋಟಿ ರೂ. ಮೂಲ ಬೆಲೆ ಘೋಷಿಸಿರುವ 40 ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

3 / 5
ಡೆವೊನ್ ಕಾನ್ವೇ, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಕ್ಯಾಮರೋನ್ ಗ್ರೀನ್, ಡೇವಿಡ್ ಮಿಲ್ಲರ್, ಸ್ಟೀವ್ ಸ್ಮಿತ್, ಗಸ್ ಅಟ್ಕಿನ್ಸನ್, ವನಿಂದು ಹಸರಂಗ, ವೆಂಕಟೇಶ್ ಅಯ್ಯರ್, ಲಿಯಾಮ್ ಲಿವಿಂಗ್‌ಸ್ಟೋನ್, ರಚಿನ್ ರವೀಂದ್ರ, ಶಾನ್ ಅಬಾಟ್, ಮೈಕೆಲ್ ಬ್ರೇಸ್‌ವೆಲ್, ಜೇಸನ್ ಹೋಲ್ಡರ್.

4 / 5
ಡೇರಿಲ್ ಮಿಚೆಲ್, ಕೂಪರ್ ಕೊನೊಲಿ, ಟಾಮ್ ಕರನ್, ಡೇನಿಯಲ್ ಲಾರೆನ್ಸ್, ಲಿಯಾಮ್ ಡಾಸನ್, ಫಿನ್ ಅಲೆನ್, ಬೆನ್ ಡಕೆಟ್, ಜೇಮಿ ಸ್ಮಿತ್, ಟಾಮ್ ಬ್ಯಾಂಟನ್, ಶಾಯ್ ಹೋಪ್, ಜೋಶ್ ಇಂಗ್ಲಿಸ್, ಜೆರಾಲ್ಡ್ ಕೋಟ್ಝಿ, ಜೇಕಬ್ ಡಫಿ, ಮ್ಯಾಟ್ ಹೆನ್ರಿ, ಅನ್ರಿಕ್ ನೋಕಿಯ.

5 / 5
ಮಥೀಶ ಪತಿರಾಣ, ರವಿ ಬಿಷ್ಣೋಯ್, ಅಕೀಲ್ ಹೋಸೇನ್, ಮುಜೀಬ್ ಉರ್ ರೆಹಮಾನ್, ಮಹೀಶ್ ತೀಕ್ಷಣ, ಕೈಲ್ ಜೇಮಿಸನ್, ಆ್ಯಡಂ ಮಿಲ್ನ್​, ಲುಂಗಿ ಎನ್‌ಗಿಡಿ, ವಿಲಿಯಂ ಒರೋಕ್, ಮುಸ್ತಾಫಿಜುರ್ ರೆಹಮಾನ್, ಅಲ್ಝಾರಿ ಜೋಸೆಫ್, ನವೀನ್-ಉಲ್-ಹಕ್.