IPL 2026: ಸ್ವಾಪ್ ಡೀಲ್ ಆಫರ್… ರವೀಂದ್ರ ಜಡೇಜಾರನ್ನೇ ಕೈ ಬಿಡಲು ಮುಂದಾದ CSK 

Updated on: Nov 09, 2025 | 1:58 PM

IPL 2026 Ravindra Jadeja: ರವೀಂದ್ರ ಜಡೇಜಾ ಕಳೆದ 10 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ. ಅದರಲ್ಲೂ ಸಿಎಸ್​ಕೆ ತಂಡ ಖಾಯಂ ಸದಸ್ಯರಾಗಿ ಕಣಕ್ಕಿಳಿದಿದ್ದಾರೆ. ಇದರ ನಡುವೆ ನಾಯಕನಾಗಿಯೂ ಕಾಣಿಸಿಕೊಂಡಿದ್ದರು. ಇದೀಗ 36 ವರ್ಷದ ರವೀಂದ್ರ ಜಡೇಜಾ ಅವರನ್ನು ಸ್ವಾಪ್ ಡೀಲ್ ಮೂಲಕ ಟ್ರೇಡ್ ಮಾಡಲು ಸಿಎಸ್​ಕೆ ಫ್ರಾಂಚೈಸಿ ಮುಂದಾಗಿದೆ.

1 / 7
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿಗೂ ಮುಂಚಿತವಾಗಿ ಬಿಗ್ಗೆಸ್ಟ್ ಟ್ರೇಡ್ ಪ್ರಕ್ರಿಯೆ ನಡೆಯಲಿದೆಯಾ? ಅದು ಕೂಡ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ರಾಜಸ್ಥಾನ್ ರಾಯಲ್ಸ್ (RR) ನಡುವೆ. ಇಂತಹದೊಂದು ಸುದ್ದಿ ಇದೀಗ ಭಾರೀ ಮಹತ್ವ ಪಡೆದುಕೊಂಡಿದೆ.

2 / 7
ಈ ಸುದ್ದಿಯು ಇಷ್ಟೊಂದು ಮಹತ್ವ ಪಡೆಯಲು ಮುಖ್ಯ ಕಾರಣ ಸಿಎಸ್​ಕೆ ಫ್ರಾಂಚೈಸಿ ಟ್ರೇಡ್ ಮಾಡಲು ಮುಂದಾಗಿರುವುದು ತನ್ನ ಖಾಯಂ ಸದಸ್ಯ ರವೀಂದ್ರ ಜಡೇಜಾ ಅವರನ್ನು. ಹೌದು, ಕೆಲ ಮೂಲಗಳ ಮಾಹಿತಿ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಜಡೇಜಾ ಅವರನ್ನು ಸ್ವಾಪ್ ಡೀಲ್ ಮಾಡಿಕೊಳ್ಳಲು ಮುಂದಾಗಿದೆ.

3 / 7
ಅಂದರೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿರುವ ಸಂಜು ಸ್ಯಾಮ್ಸನ್ ಅವರನ್ನು ಸಿಎಸ್​ಕೆ ತಂಡಕ್ಕೆ ಕರೆತರಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಸ್ವಾಪ್ ಡೀಲ್​ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅದರಂತೆ ರವೀಂದ್ರ ಜಡೇಜಾ ಅವರನ್ನು ನೀಡಿ ಸಂಜು ಸ್ಯಾಮ್ಸನ್ ಅವರನ್ನು ಖರೀದಿಸಲು ಸಿಎಸ್​ಕೆ ಮುಂದಾಗಿದೆ.

4 / 7
ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಟ್ರಿಸ್ಟನ್ ಸ್ಟಬ್ಸ್ ಅವರನ್ನು ನೀಡಿ ಸಂಜು ಸ್ಯಾಮ್ಸನ್ ಅವರನ್ನು ಖರೀದಿಸಲು ಮುಂದಾಗಿತ್ತು. ಈ ಟ್ರೇಡ್ ಪ್ರಕ್ರಿಯೆಯು ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ರಾಜಸ್ಥಾನ್ ರಾಯಲ್ಸ್ ಮುಂದೆ ಜಡೇಜಾ ಅವರ ಸ್ವಾಪ್ ಡೀಲ್ ಮುಂದಿಟ್ಟಿದೆ.

5 / 7
ರವೀಂದ್ರ ಜಡೇಜಾ ಹಾಗೂ ಸಂಜು ಸ್ಯಾಮ್ಸನ್ ತಲಾ 18 ಕೋಟಿ ರೂ. ಸಂಭಾವನೆ ಪಡೆಯುತ್ತಿರುವ ಆಟಗಾರರು. ಇಬ್ಬರನ್ನು ಪರಸ್ಫರ ಬದಲಿಸಿಕೊಳ್ಳೋಣ ಎಂಬ ಆಫರ್​ ಒಂದನ್ನು ಸಿಎಸ್​ಕೆ, ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಮುಂದಿಟ್ಟಿದ್ದಾರೆ ಎಂದು ಕ್ರಿಕ್​ಬಝ್ ವರದಿ ಮಾಡಿದೆ.

6 / 7
ಆದರೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ರವೀಂದ್ರ ಜಡೇಜಾ ಜೊತೆ ಡೆವಾಲ್ಡ್ ಬ್ರೆವಿಸ್​ಗಾಗಿಯೂ ಬೇಡಿಕೆಯಿಟ್ಟಿದೆ ಎಂದು ತಿಳಿದು ಬಂದಿದೆ. ಅಂದರೆ ಜಡೇಜಾ ಹಾಗೂ ಬ್ರೆವಿಸ್ ಅವರನ್ನು ನೀಡಿದರೆ ಸಂಜು ಸ್ಯಾಮ್ಸನ್ ಅವರನ್ನು ಬಿಟ್ಟು ಕೊಡುವುದಾಗಿ ಆರ್​ಆರ್ ಫ್ರಾಂಚೈಸಿ ತಿಳಿಸಿದೆ.

7 / 7
ಈ ಬೇಡಿಕೆಯ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ರವೀಂದ್ರ ಜಡೇಜಾ ಅವರನ್ನು ಮಾತ್ರ ಸ್ವಾಪ್ ಮಾಡಿಕೊಳ್ಳುವ ತನ್ನ ನಿಲುವಿನಲ್ಲಿ ದೃಢವಾಗಿದೆ. ಸದ್ಯ ಚೆಂಡು ಆರ್​ಆರ್ ಅಂಗಳದಲ್ಲಿದ್ದು, ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಜಡೇಜಾ ಅವರನ್ನು ಸ್ವಾಪ್ ಡೀಲ್ ಮಾಡಿಕೊಳ್ಳಲು ಒಪ್ಪಿದರೆ ಸಂಜು ಸ್ಯಾಮ್ಸನ್ ಮುಂದಿನ ಸೀಸನ್​ನಲ್ಲಿ ಸಿಎಸ್​ಕೆ ಪರ ಕಣಕ್ಕಿಳಿಯುವುದು ಖಚಿತ.