IPL 2026: ಕೇವಲ 4 ಪಂದ್ಯಗಳಿಗಾಗಿ 2 ಕೋಟಿ ರೂ. ಘೋಷಿಸಿದ ಆಸ್ಟ್ರೇಲಿಯಾ ಆಟಗಾರ

Updated on: Dec 09, 2025 | 7:53 AM

IPL 2026 Auction: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 19ರ ಮಿನಿ ಹರಾಜು ಡಿಸೆಂಬರ್ 16 ರಂದು ನಡೆಯಲಿದೆ. ಅಬುಧಾಬಿಯಲ್ಲಿ ಜರುಗಲಿರುವ ಈ ಆಕ್ಷನ್ ಪ್ರಕ್ರಿಯೆಗಾಗಿ ಬರೋಬ್ಬರಿ 1355 ಆಟಗಾರರು ಹೆಸರು ನೀಡಿದ್ದಾರೆ. ಈ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟರ್ ಕೂಡ ಕಾಣಿಸಿಕೊಂಡಿದ್ದಾರೆ.

1 / 5
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿನ ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ಆಟಗಾರರ ನೋಂದಣಿ ಪ್ರಕ್ರಿಯೆ ಮುಗಿದಿದ್ದು. ಒಟ್ಟು 1355 ಆಟಗಾರರು ಹರಾಜಿಗಾಗಿ ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಹೀಗೆ ಹೆಸರು ನೋಂದಣಿ ಮಾಡಿಕೊಂಡ ಆಟಗಾರರಲ್ಲಿ 45 ಮಂದಿ 2 ಕೋಟಿ ರೂ. ಮೂಲ ಬೆಲೆ ಘೋಷಿಸಿದ್ದಾರೆ.

2 / 5
ಹೀಗೆ ಗರಿಷ್ಠ ಮೂಲ ಬೆಲೆ ಘೋಷಿಸಿದ 45 ಆಟಗಾರರಲ್ಲಿ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟರ್ ಜೋಶ್ ಇಂಗ್ಲಿಸ್ ಕೂಡ ಇರುವುದು ವಿಶೇಷ. ಕಳೆದ ಸೀಸನ್​​ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಇಂಗ್ಲಿಸ್ ಅವರನ್ನು ಈ ಬಾರಿ ತಂಡದಿಂದ ಕೈ ಬಿಡಲು ಮುಖ್ಯ ಕಾರಣ ಅವರು ಮುಂದಿನ ಸೀಸನ್​​ಗೆ ಅಲಭ್ಯರಾಗಲಿರುವುದು.

3 / 5
ಐಪಿಎಲ್ 2026 ರಲ್ಲಿ ಕೆಲ ಪಂದ್ಯಗಳಿಗೆ ಮಾತ್ರ ಲಭ್ಯನಿರಲಿದ್ದೇನೆ ಎಂದು ತಿಳಿಸಿದ ಕಾರಣ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಜೋಶ್ ಇಂಗ್ಲಿಸ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದ್ದರು. ಇತ್ತ ರಿಲೀಸ್ ಆದ ಬೆನ್ನಲ್ಲೇ ಇಂಗ್ಲಿಸ್ ಐಪಿಎಲ್ ಮಿನಿ ಹರಾಜಿಗೆ ಹೆಸರು ನೀಡಿದ್ದಾರೆ.

4 / 5
ಅದು ಕೂಡ ಬರೋಬ್ಬರಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಎಂಬುದು ವಿಶೇಷ. ಅಂದರೆ ಜೋಶ್ ಇಂಗ್ಲಿಸ್ ಐಪಿಎಲ್ 2026 ರಲ್ಲಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಈ ನಾಲ್ಕು ಪಂದ್ಯಗಳಿಗಾಗಿ ಇಂಗ್ಲಿಸ್ ಬರೋಬ್ಬರಿ 2 ಕೋಟಿ ರೂ. ಬೇಸ್​ ಪ್ರೈಸ್ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.

5 / 5
ಇತ್ತ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಳ್ಳಲಿರುವ ಜೋಶ್ ಇಂಗ್ಲಿಸ್ ಅವರನ್ನು ಕೇವಲ 4 ಮ್ಯಾಚ್​​ಗಳಿಗಾಗಿ ಯಾವುದಾದರೂ ತಂಡ ಖರೀದಿಸಲಿದೆಯಾ ಎಂಬುದೇ ಈಗ ಕುತೂಹಲ. ಒಂದು ವೇಳೆ ಅವರನ್ನು ಯಾವುದಾದರೂ ಫ್ರಾಂಚೈಸಿ ಆಯ್ಕೆ ಮಾಡಿಕೊಂಡರೂ ಟೂರ್ನಿ ಮಧ್ಯೆದಲ್ಲೇ ಬದಲಿ ಆಟಗಾರರನ್ನು ಸಹ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಹೀಗಾಗಿ ಈ ಬಾರಿ ಜೋಶ್ ಇಂಗ್ಲಿಸ್ ಅವರ ಬಿಕರಿಯಾಗದೇ ಉಳಿಯಲಿದ್ದಾರಾ? ಅಥವಾ ಕೋಟಿ ಮೊತ್ತಕ್ಕೆ ಮಾರಾಟವಾಗಲಿದ್ದಾರಾ ಕಾದು ನೋಡಬೇಕಿದೆ.