IPL 2026: KKR ತಂಡದಿಂದ ಆ್ಯಂಡ್ರೆ ರಸೆಲ್ ರಿಲೀಸ್..!

Updated on: Nov 15, 2025 | 5:02 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಕ್ಕಾಗಿ ಮುಂದಿನ ತಿಂಗಳು ಮಿನಿ ಹರಾಜು ನಡೆಯಲಿದೆ. ಈ ಹರಾಜಿಗೂ ಮುನ್ನ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗುತ್ತದೆ. ಹೀಗೆ ರಿಟೈನ್ ಪಟ್ಟಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 15.

1 / 5
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಕ್ಕಾಗಿ ಕೊಲ್ಕತ್ತಾ ನೈಟ್ ರೈಡರ್ಸ್​ ಫ್ರಾಂಚೈಸಿಯು ಆ್ಯಂಡ್ರೆ ರಸೆಲ್ (Andre Russell) ಅವರನ್ನು ತಂಡದಲ್ಲಿ ಉಳಿಸಿಕೊಂಡಿಲ್ಲ. ಅಂದರೆ ಮಿನಿ ಹರಾಜಿಗಾಗಿ ತನ್ನ ಸ್ಟಾರ್ ಆಟಗಾರನನ್ನು ಬಿಡುಗಡೆ ಮಾಡಿದ್ದಾರೆ.

2 / 5
ಕಳೆದೊಂದು ದಶಕದಿಂದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಅವಿಭಾಜ್ಯ ಅಂಗವಾಗಿರುವ ಆ್ಯಂಡ್ರೆ ರಸೆಲ್ ಅವರನ್ನು ಇದೇ ಮೊದಲ ಬಾರಿಗೆ ಬಿಡುಗಡೆ ಮಾಡಿದ್ದಾರೆ. ಅಂದರೆ ಕೆಕೆಆರ್ ಫ್ರಾಂಚೈಸಿಯು 2014 ರಲ್ಲಿ ಆ್ಯಂಡ್ರೆ ರಸೆಲ್ ಅವರನ್ನು ಖರೀದಿಸಿತ್ತು. ಇದಾದ ಬಳಿಕ ಒಮ್ಮೆಯೂ ತಂಡದಿಂದ ಕೈ ಬಿಟ್ಟಿರಲಿಲ್ಲ.

3 / 5
ಇದೀಗ 11 ವರ್ಷಗಳ ಬಳಿಕ ಆ್ಯಂಡ್ರೆ ರಸೆಲ್ ಅವರನ್ನು ಕೆಕೆಆರ್ ಬಿಡುಗಡೆ ಮಾಡಿದ್ದು, ಅದರಂತೆ ಡಿಸೆಂಬರ್ 16 ರಂದು ನಡೆಯಲಿರುವ ಮಿನಿ ಹರಾಜಿನಲ್ಲಿ ಆ್ಯಂಡ್ರೆ ರಸೆಲ್ ಅವರ ಹೆಸರು ಕೂಡ ಕಾಣಿಸಿಕೊಳ್ಳಲಿದೆ. ಈ ವೇಳೆ ಮತ್ತೆ ಕೆಕೆಆರ್ ಅವರಿಗಾಗಿ ಬಿಡ್ ಮಾಡಲಿದೆಯಾ ಕಾದು ನೋಡಬೇಕಿದೆ.

4 / 5
ಏಕೆಂದರೆ ಆ್ಯಂಡ್ರೆ ರಸೆಲ್ ಅವರನ್ನು ಕೆಕೆಆರ್ ಕಳೆದ ಸೀಸನ್​ನಲ್ಲಿ 12 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಇದೀಗ ಅವರನ್ನು ಹರಾಜಿನಲ್ಲಿಟ್ಟು ಮತ್ತೆ ಕಡಿಮೆ ಮೊತ್ತಕ್ಕೆ ಖರೀದಿಸುವ ಸಾಧ್ಯತೆಯಿದೆ. ಆದರೆ ಈ ಖರೀದಿಯ ಪೈಪೋಟಿ ನಡುವೆ ರಸೆಲ್ ಬೇರೊಂದು ತಂಡದ ಪಾಲಾಗಲಿದ್ದಾರಾ ಕಾದು ನೋಡಬೇಕಿದೆ.

5 / 5
ಆ್ಯಂಡ್ರೆ ರಸೆಲ್ ಅಲ್ಲದೆ, ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ವೆಂಕಟೇಶ್ ಅಯ್ಯರ್ (23.75 ಕೋಟಿ ರೂ), ಅನ್ರಿಕ್ ನೋಕಿಯ (6.50 ಕೋಟಿ ರೂ) ಕ್ವಿಂಟನ್ ಡಿಕಾಕ್ (3.6 ಕೋಟಿ ರೂ), ಸೆನ್ಸರ್ ಜಾನ್ಸನ್ (2.8 ಕೋಟಿ ರೂ), ಮೊಯೀನ್ ಅಲಿ (2 ಕೋಟಿ ರೂ) ಹಾಗೂ ರಹಮಾನುಲ್ಲಾ ಗುರ್ಬಾಝ್ (2 ಕೋಟಿ ರೂ) ಅವರನ್ನು ಸಹ ಬಿಡುಗಡೆ ಮಾಡಿದೆ.

Published On - 5:01 pm, Sat, 15 November 25