IPL 2026: 10 ಫ್ರಾಂಚೈಸಿಗಳು ಕಣ್ಣಿಟ್ಟಿರುವ 34 ಆಟಗಾರರ ಪಟ್ಟಿ ಇಲ್ಲಿದೆ
IPL 2026 Auction: ಇಂಡಿಯನ್ ಪ್ರೀಮಿಯರ್ ಲೀಗ್ 2026ರ (ಐಪಿಎಲ್ 2026) ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಆಟಗಾರರನ್ನು ಸೆಟ್ಗಳಾಗಿ ವಿಂಗಡಿಸಲಾಗಿದೆ. ಇಲ್ಲಿ ಎಲ್ಲಾ ಫ್ರಾಂಚೈಸಿಗಳು ಖರೀದಿಸಲು ಬಯಸಿರುವ ಆಟಗಾರರನ್ನು ಟಾಪ್-5 ನಲ್ಲಿ ಇರಿಸಲಾಗಿದೆ. ಅದರಂತೆ 10 ಫ್ರಾಂಚೈಸಿಗಳು ಕಣ್ಣಿಟ್ಟಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...
Updated on: Dec 15, 2025 | 2:53 PM

IPL 2026: ಐಪಿಎಲ್ 2026ರ ಮಿನಿ ಹರಾಜಿಗಾಗಿ ವೇದಿಕೆ ಸಿದ್ಧವಾಗಿದೆ. ನಾಳೆ (ಡಿ.16) ಅಬುಧಾಬಿಯಲ್ಲಿ ನಡೆಯಲಿರುವ ಮಿನಿ ಆಕ್ಷನ್ನಲ್ಲಿ 359 ಆಟಗಾರರ ಭವಿಷ್ಯ ನಿರ್ಧಾರವಾಗಲಿದೆ. ಇವರಲ್ಲಿ 34 ಆಟಗಾರರು ಮೊದಲ 5 ಸೆಟ್ಗಳಲ್ಲೇ ಹರಾಜಾಗಲಿದ್ದಾರೆ. ಅಂದರೆ ಪ್ರಮುಖ ಆಟಗಾರರನ್ನು ಒಳಗೊಂಡಂತೆ ಐದು ಸೆಟ್ಗಳನ್ನು ರೂಪಿಸಲಾಗಿದ್ದು, ಈ ಹರಾಜಿನ ಬಳಿಕ ಉಳಿದ ಪ್ಲೇಯರ್ಸ್ಗಳಿಗಾಗಿ ಬಿಡ್ಡಿಂಗ್ ನಡೆಯಲಿದೆ. ಹೀಗೆ ಟಾಪ್-5 ಸೆಟ್ಗಳಲ್ಲಿ ಹರಾಜಾಗಲಿರುವ 34 ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

ಪ್ರಮುಖ ಬ್ಯಾಟರ್ಗಳ ಸೆಟ್: ಡೆವೊನ್ ಕಾನ್ವೆ (ನ್ಯೂಝಿಲೆಂಡ್), ಜೇಕ್ ಫ್ರೆಸರ್ ಮೆಕ್‌ಗುರ್ಕ್ (ಆಸ್ಟ್ರೇಲಿಯಾ), ಕ್ಯಾಮರೋನ್ ಗ್ರೀನ್ (ಆಸ್ಟ್ರೇಲಿಯಾ), ಸರ್ಫರಾಝ್ ಖಾನ್ (ಭಾರತ), ಡೇವಿಡ್ ಮಿಲ್ಲರ್ (ಸೌತ್ ಆಫ್ರಿಕಾ), ಪೃಥ್ವಿ ಶಾ (ಭಾರತ).

ಪ್ರಮುಖ ಆಲ್ರೌಂಡರ್ಗಳ ಸೆಟ್: ಗಸ್ ಅಟ್ಕಿನ್ಸನ್ (ಇಂಗ್ಲೆಂಡ್), ವನಿಂದು ಹಸರಂಗ (ಶ್ರೀಲಂಕಾ), ದೀಪಕ್ ಹೂಡಾ (ಭಾರತ), ವೆಂಕಟೇಶ್ ಅಯ್ಯರ್ (ಭಾರತ), ಲಿಯಾಮ್ ಲಿವಿಂಗ್‌ಸ್ಟೋನ್ (ಇಂಗ್ಲೆಂಡ್), ವಿಯಾನ್ ಮುಲ್ಡರ್ (ಸೌತ್ ಆಫ್ರಿಕಾ), ರಚಿನ್ ರವೀಂದ್ರ (ನ್ಯೂಝಿಲೆಂಡ್)

ಪ್ರಮುಖ ವಿಕೆಟ್ ಕೀಪರ್ಗಳ ಸೆಟ್: ಫಿನ್ ಅಲೆನ್ (ನ್ಯೂಝಿಲೆಂಡ್), ಜಾನಿ ಬೈರ್‌ಸ್ಟೋವ್ (ಇಂಗ್ಲೆಂಡ್), ಕೆಎಸ್ ಭರತ್ (ಭಾರತ), ಕ್ವಿಂಟನ್ ಡಿ ಕಾಕ್ (ಸೌತ್ ಆಫ್ರಿಕಾ), ಬೆನ್ ಡಕೆಟ್ (ಇಂಗ್ಲೆಂಡ್), ರಾಮಾನುಲ್ಲಾ ಗುರ್ಬಾಝ್ (ಅಫ್ಘಾನಿಸ್ತಾನ್), ಜೇಮಿ ಸ್ಮಿತ್ (ಇಂಗ್ಲೆಂಡ್).

ಪ್ರಮುಖ ವೇಗಿಗಳ ಸೆಟ್: ಜೆರಾಲ್ಡ್ ಕೋಟ್ಝಿ (ಸೌತ್ ಆಫ್ರಿಕಾ), ಆಕಾಶ್ ದೀಪ್ (ಭಾರತ), ಜೇಕಬ್ ಡಫಿ (ನ್ಯೂಝಿಲೆಂಡ್), ಫಝಲ್ಹಕ್ ಫಾರೂಕಿ (ಅಫ್ಘಾನಿಸ್ತಾನ್), ಮ್ಯಾಟ್ ಹೆನ್ರಿ (ನ್ಯೂಝಿಲೆಂಡ್), ಸ್ಪೆನ್ಸರ್ ಜಾನ್ಸನ್ (ಆಸ್ಟ್ರೇಲಿಯಾ), ಶಿವಂ ಮಾವಿ (ಭಾರತ), ಅನ್ರಿಕ್ ನೋಕಿಯಾ (ಸೌತ್ ಆಫ್ರಿಕಾ), ಮಥೀಶ ಪತಿರಾಣ (ಶ್ರೀಲಂಕಾ).

ಪ್ರಮುಖ ಸ್ಪಿನ್ನರ್ಗಳ ಸೆಟ್: ರವಿ ಬಿಷ್ಣೋಯ್ (ಭಾರತ), ರಾಹುಲ್ ಚಹರ್ (ಭಾರತ), ಅಕೀಲ್ ಹೊಸೈನ್ (ವೆಸ್ಟ್ ಇಂಡೀಸ್), ಮುಜೀಬ್ ಉರ್ ರೆಹಮಾನ್ (ಅಫ್ಗಾನಿಸ್ತಾನ್), ಮಹೀಶ್ ತೀಕ್ಷಣ (ಶ್ರೀಲಂಕಾ).




