AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: SRH ತಂಡಕ್ಕೆ ಗುಡ್ ಬೈ… ಮೌನ ಮುರಿದ ನಿತೀಶ್ ಕುಮಾರ್ ರೆಡ್ಡಿ

Nitish Kumar Reddy: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಕಳೆದ 3 ವರ್ಷಗಳಿಂದ ಸನ್​ರೈಸರ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಎಸ್​ಆರ್​ಹೆಚ್ ಪರ ಈವರೆಗೆ 28 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅವರು ಮುಂಬರುವ ಸೀಸನ್​ನಲ್ಲಿ ಹೊಸ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಸುದ್ದಿಗಳಿಗೆ ನಿತೀಶ್ ಕುಮಾರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಝಾಹಿರ್ ಯೂಸುಫ್
|

Updated on: Jul 29, 2025 | 11:54 AM

Share
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಕ್ಕೂ ಮುನ್ನ ನಿತೀಶ್ ಕುಮಾರ್ ರೆಡ್ಡಿ ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಗುಡ್ ಬೈ ಹೇಳಲಿದ್ದಾರೆ. ಎಸ್​ಆರ್​ಹೆಚ್ ಜೊತೆಗಿನ ಒಪ್ಪಂದವನ್ನು ಅವರು ಶೀಘ್ರದಲ್ಲೇ ಕೊನೆಗೊಳಿಸಲಿದ್ದಾರೆ ಎಂಬ ಸುದ್ದಿಗಳು ಕಳೆದ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

1 / 5
ಈ ಸುದ್ದಿಗಳಿಗೆ ಖುದ್ದು ನಿತೀಶ್ ಕುಮಾರ್ ರೆಡ್ಡಿ ಬ್ರೇಕ್ ಹಾಕಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿರುವ ನಿತೀಶ್, ಸನ್​ರೈಸರ್ಸ್ ಹೈದರಾಬಾದ್ ಜೊತೆಗಿನ ನನ್ನ ಬಂಧವು ನಂಬಿಕೆ, ಗೌರವ ಮತ್ತು ವರ್ಷಗಳ ಉತ್ಸಾಹದ ಮೇಲೆ ನಿರ್ಮಿತವಾಗಿದೆ. ಹೀಗಾಗಿ ನಾನು ಯಾವಾಗಲೂ ಎಸ್​​ಆರ್​ಹೆಚ್​ ತಂಡದೊಂದಿಗೆ ಇರುತ್ತೇನೆ ಎಂದು ತಿಳಿಸಿದ್ದಾರೆ.

2 / 5
ಈ ಮೂಲಕ ಸನ್​ರೈಸರ್ಸ್ ಹೈದರಾಬಾದ್ ತಂಡದಿಂದ ನಾನು ಹೊರ ನಡೆಯಲಿದ್ದೇನೆ ಎಂಬುದು ಕೇವಲ ವದಂತಿ ಅಷ್ಟೇ. ನಾನು ಯಾವಾಗಲೂ ಎಸ್​ಆರ್​ಹೆಚ್ ತಂಡದ ಭಾಗವಾಗಲು ಬಯಸುತ್ತೇನೆ. ಇದೇ ತಂಡದೊಂದಿಗೆ ಮುಂದುವರೆಯುತ್ತೇನೆ ಎಂದು ನಿತೀಶ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಮುಂಬರುವ ಸೀಸನ್​ನಲ್ಲೂ ಎನ್​ಕೆಆರ್​ ಎಸ್​ಆರ್​ಹೆಚ್ ತಂಡದಲ್ಲೇ ಕಾಣಿಸಿಕೊಳ್ಳಲಿದ್ದಾರೆ.

3 / 5
ನಿತೀಶ್ ಕುಮಾರ್ ರೆಡ್ಡಿ ಐಪಿಎಲ್ ಕೆರಿಯರ್ ಆರಂಭಿಸಿದ್ದು 2023 ರಲ್ಲಿ. ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಯ್ಕೆಯಾಗುವ ಮೂಲಕ ರಂಗೀನ್ ಕ್ರಿಕೆಟ್ ಟೂರ್ನಿಗೆ ಎಂಟ್ರಿ ಕೊಟ್ಟಿದ್ದ ಯುವ ಆಲ್​ರೌಂಡ್ ಕಳೆದ ಮೂರು ಸೀಸನ್​ಗಳಲ್ಲಿ ಎಸ್​ಆರ್​ಹೆಚ್ ತಂಡದ ಭಾಗವಾಗಿದ್ದಾರೆ. ಅದರಲ್ಲೂ ಕಳೆದ ಎರಡು ಸೀಸನ್​ಗಳಿಂದ ಸನ್​ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್​ನ ಖಾಯಂ ಸದಸ್ಯರಾಗಿ ಕಾಣಿಸಿಕೊಂಡಿದ್ದಾರೆ. 

4 / 5
ಸನ್​ರೈಸರ್ಸ್ ಹೈದರಾಬಾದ್ ಪರ ಈವರೆಗೆ 28 ಪಂದ್ಯಗಳನ್ನಾಡಿರುವ ನಿತೀಶ್ ಕುಮಾರ್ ರೆಡ್ಡಿ ಒಟ್ಟು 485 ರನ್ ಕಲೆಹಾಕಿದ್ದಾರೆ. ಈ ವೇಳೆ 2 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನು ಬೌಲಿಂಗ್​ನಲ್ಲಿ 139 ಎಸೆತಗಳನ್ನು ಎಸೆದಿರುವ ಅವರು ಒಟ್ಟು 5 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಎಸ್​ಆರ್​ಹೆಚ್ ತಂಡದ ಭರವಸೆಯ ಆಲ್​ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ.

5 / 5