IPL 2026: ರವೀಂದ್ರ ಜಡೇಜಾ, ಕರನ್, ಸಂಜು ಸ್ಯಾಮ್ಸನ್ ಟ್ರೇಡಿಂಗ್​ಗೆ ದೊಡ್ಡ ತೊಡಕು..!

Updated on: Nov 12, 2025 | 8:25 AM

IPL 2026: ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ವಿದೇಶಿ ಆಟಗಾರರಾಗಿ ಲುವಾನ್-ಡ್ರೆ ಪ್ರಿಟೋರಿಯಸ್, ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಫಝಲ್​ಹಕ್ ಫಾರೂಖಿ, ಜೋಫ್ರಾ ಆರ್ಚರ್, ಕ್ವೇನಾ ಮಫಾಕ, ಮಹೀಶ್ ತೀಕ್ಷಣ, ನಾಂಡ್ರೆ ಬರ್ಗರ್ ಇದ್ದಾರೆ. ಅಂದರೆ ಆರ್​ಆರ್ ತಂಡದಲ್ಲಿ ವಿದೇಶಿ ಆಟಗಾರರ ಕೋಟ ಸಂಪೂರ್ಣ ಭರ್ತಿಯಾಗಿದೆ. ಇದುವೇ ಈಗ ಟ್ರೇಡಿಂಗ್ ಪ್ರಕ್ರಿಯೆಗೆ ಸಮಸ್ಯೆಯಾಗಿ ಪರಿಣಮಿಸಿದೆ.

1 / 6
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ರ ಮಿನಿ ಹರಾಜಿಗೂ ಮುನ್ನ ಸ್ಟಾರ್ ಆಟಗಾರರನ್ನು ಟ್ರೇಡ್ ಮಾಡಿಕೊಳ್ಳಲು ಮುಂದಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ರಾಜಸ್ಥಾನ್ ರಾಯಲ್ಸ್ (RR) ಫ್ರಾಂಚೈಸಿಗಳಿಗೆ ಇದೀಗ ಸಮಸ್ಯೆಯೊಂದು ಎದುರಾಗಿದೆ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ರ ಮಿನಿ ಹರಾಜಿಗೂ ಮುನ್ನ ಸ್ಟಾರ್ ಆಟಗಾರರನ್ನು ಟ್ರೇಡ್ ಮಾಡಿಕೊಳ್ಳಲು ಮುಂದಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ರಾಜಸ್ಥಾನ್ ರಾಯಲ್ಸ್ (RR) ಫ್ರಾಂಚೈಸಿಗಳಿಗೆ ಇದೀಗ ಸಮಸ್ಯೆಯೊಂದು ಎದುರಾಗಿದೆ.

2 / 6

ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಅವರನ್ನು ನೀಡಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಖರೀದಿಸಲು ಮುಂದಾಗಿದೆ. ಅಲ್ಲದೆ ಈ ಸ್ವಾಪ್ ಡೀಲ್ ಪ್ರಕ್ರಿಯೆಗೆ ಅಧಿಕೃತ ಚಾಲನೆಯನ್ನು ಸಹ ನೀಡಿದ್ದಾರೆ.

3 / 6

ಆದರೆ ಅತ್ತ ಕಡೆಯಿಂದ ಸಂಜು ಸ್ಯಾಮ್ಸನ್ ಅವರನ್ನು ನೀಡಲು ಮುಂದಾಗಿರುವ ರಾಜಸ್ಥಾನ್ ರಾಯಲ್ಸ್ ತಂಡದ ವಿದೇಶಿ ಕೋಟಾ ಭರ್ತಿಯಾಗಿರುವುದೇ ಈಗ ಸಮಸ್ಯೆ. ಅಂದರೆ ಸ್ಯಾಮ್ಸನ್ ಅವರನ್ನು ನೀಡಿ ಆರ್​ಆರ್​ ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಅವರನ್ನು ತನ್ನ ತಂಡಕ್ಕೆ ಸೇರ್ಪಡೆಗೊಳಿಸಲು ಮುಂದಾಗಿತ್ತು. 

4 / 6

ಈ ಸೇರ್ಪಡೆಗೆ ವಿದೇಶಿ ಆಟಗಾರರ ನಿಯಮ ಅಡ್ಡಿಯಾಗಿದೆ.  ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ 8 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶವಿದೆ. ಅತ್ತ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಈಗಾಗಲೇ 8 ವಿದೇಶಿ ಆಟಗಾರರು ಇದ್ದಾರೆ. ಹೀಗಾಗಿ ಸ್ಯಾಮ್ ಕರನ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸುವಂತಿಲ್ಲ.

5 / 6

ಅಂದರೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ತನ್ನ ತಂಡದಲ್ಲಿರುವ ವಿದೇಶಿ ಆಟಗಾರನೊಬ್ಬನ್ನು ಬಿಡುಗಡೆ ಮಾಡಿದರೆ ಮಾತ್ರ ಸ್ಯಾಮ್ ಕರನ್ ಅವರನ್ನು ತನ್ನ ತಂಡಕ್ಕೆ ಸೇರ್ಪಡೆಗೊಳಿಸಬಹುದು. ಇತ್ತ ಐಪಿಎಲ್ ಹರಾಜಿಗೂ ಮುನ್ನ ರಿಟೈನ್  ಹಾಗೂ ರಿಲೀಸ್ ಪಟ್ಟಿ ಸಲ್ಲಿಸಲು ನವೆಂಬರ್ 15 ರವರೆಗೆ ಕಾಯಲೇಬೇಕು.

6 / 6

ಹೀಗಾಗಿ ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಸ್ಯಾಮ್ ಕರನ್ ಡೀಲ್ ಮತ್ತಷ್ಟು ವಿಳಂಬವಾಗಲಿದೆ. ಅಂದರೆ ನವೆಂಬರ್ 15 ರಂದು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಅಧಿಕೃತವಾಗಿ ವಿದೇಶಿ ಆಟಗಾರನೊಬ್ಬನನ್ನು ತಂಡದಿಂದ ಬಿಡುಗಡೆಗೊಳಿಸಿದರೆ ಮಾತ್ರ ಸಿಎಸ್​ಕೆ ಹಾಗೂ ಆರ್​ಆರ್ ನಡುವಣ ಸ್ವಾಪ್ ಡೀಲ್ ಅಧಿಕೃತವಾಗಲಿದೆ. ಅಲ್ಲಿಯವರೆಗೆ ಉಭಯ ಫ್ರಾಂಚೈಸಿಗಳು ಕಾಯಲೇಬೇಕು.

Published On - 8:24 am, Wed, 12 November 25

Loading...
Unable to load recommendations.
Follow Us