
IPL 2026: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಹಂತದ 20 ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿದೆ. ಈ ಇಪ್ಪತ್ತು ಪಂದ್ಯಗಳಲ್ಲಿ 4 ಡಬಲ್ ಹೆಡ್ಡರ್ ಮ್ಯಾಚ್ಗಳಿವೆ. ಅಂದರೆ 4 ದಿನಗಳಲ್ಲಿ ಒಟ್ಟು 8 ಮ್ಯಾಚ್ಗಳು ನಡೆಯಲಿವೆ. ಇಲ್ಲಿ ಮೊದಲ ಮ್ಯಾಚ್ 3.30 ಕ್ಕೆ ಶುರುವಾದರೆ, ದ್ವಿತೀಯ ಪಂದ್ಯ 7.30 ಕ್ಕೆ ಆರಂಭವಾಗಲಿದೆ. ಅದರಂತೆ ಐಪಿಎಲ್ನ ವೇಳಾಪಟ್ಟಿ ಈ ಕೆಳಗಿನಂತಿದೆ...

ಮಾರ್ಚ್ 28 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಏಪ್ರಿಲ್ 4 ರಂದು ಮೊದಲ ಡಬಲ್ ಹೆಡ್ಡರ್ ಪಂದ್ಯ ನಡೆಯಲಿದೆ. 3.30 ಕ್ಕೆ ಶುರುವಾಗಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ದ್ವಿತೀಯ ಮ್ಯಾಚ್ನಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಕಣಕ್ಕಿಳಿಯಲಿದೆ.

ಏಪ್ರಿಲ್ 5 ರಂದು ಜರುಗಲಿರುವ ದ್ವಿತೀಯ ಡಬಲ್ ಹೆಡ್ಡರ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಮೊದಲ ಪಂದ್ಯವಾಡಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ದ್ವಿತೀಯ ಪಂದ್ಯವಾಡಲಿದೆ.

ಎಸ್ಆರ್ಹೆಚ್ ಹಾಗೂ ಎಲ್ಎಸ್ಜಿ ಪಂದ್ಯದ ಬಳಿಕ ನಾಲ್ಕು ದಿನ ಡಬಲ್ ಹೆಡ್ಡರ್ ಪಂದ್ಯಗಳಿರುವುದಿಲ್ಲ. ಆದರೆ ಐಪಿಎಲ್ನ 16ನೇ ಪಂದ್ಯದ ನಂತರದ ಬ್ಯಾಕ್ ಟು ಬ್ಯಾಕ್ ಎರಡು ಡಬಲ್ ಹೆಡ್ಡರ್ ಪಂದ್ಯಗಳಿಗೆ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ...

ಏಪ್ರಿಲ್ 11 ರಂದು ಮೂರನೇ ಡಬಲ್ ಹೆಡ್ಡರ್ ಪಂದ್ಯ ನಡೆಯಲಿದೆ. ಮೊದಲ ಮ್ಯಾಚ್ನಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದೆ. ಏಪ್ರಿಲ್ 12 ರಂದು ನಡೆಯಲಿರುವ ಮತ್ತೊಂದು ಡಬಲ್ ಹೆಡ್ಡರ್ನ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಜೈಂಟ್ಸ್ ಕಣಕ್ಕಿಳಿಯಲಿದೆ.