
ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ಇಂಗ್ಲೆಂಡ್‌ನ ಯುವ ಆಟಗಾರ ಜೇಕಬ್ ಬೆಥೆಲ್ ಅವರನ್ನು ತಂಡದಿಂದ ಬಿಡುಗಡೆ ಮಾಡಿರುವುದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್‌ಗೆ ಅಚ್ಚರಿ ಮೂಡಿಸಿದೆ. ಬೆಥೆಲ್ ಒಬ್ಬ ಅದ್ಭುತ ಪ್ರತಿಭೆ. ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯ ಅವರಿಗಿದೆ. ಹೀಗಿರುವಾಗ ಆರ್‌ಸಿಬಿ ಅವರನ್ನು ಕೈಬಿಟ್ಟಿದ್ದು ಸರಿಯಾದ ನಿರ್ಧಾರವಲ್ಲ ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ(PC-PTI).
ಜಿಯೋಸ್ಟಾರ್‌ನ ‘ಐಪಿಎಲ್ 2027 ರಿಟೆನ್ಷನ್ಸ್' ಕಾರ್ಯಕ್ರಮದಲ್ಲಿ ಮಾತನಾಡಿದ ಇರ್ಫಾನ್ ಪಠಾಣ್, ಆರ್‌ಸಿಬಿ ತಂಡದಿಂದ ಬಿಡುಗಡೆಗೊಂಡ ಆಟಗಾರರ ಬಗ್ಗೆ ವಿಶ್ಲೇಷಣೆ ನಡೆಸಿದ್ದು, ಜೇಕಬ್ ಬೆಥೆಲ್ ಅವರನ್ನು ಬಿಡುಗಡೆ ಮಾಡಿರುವುದೊಂದೇ ತಮಗೆ ನಿಜಕ್ಕೂ ಅಚ್ಚರಿ ತಂದ ನಿರ್ಧಾರ ಎಂದು ಪಠಾಣ್ ಹೇಳಿದ್ದಾರೆ. ಫಿಲ್ ಸಾಲ್ಟ್ ಉತ್ತಮ ಪ್ರದರ್ಶನ ನೀಡಲು ವಿಫಲರಾದರೆ, ಅವರ ಬದಲಿಗೆ ಬೆಥೆಲ್ ತಂಡಕ್ಕೆ ನೆರವಾಗಬಹುದಿತ್ತು ಎಂಬುದು ಪಠಾಣ್ ಅಭಿಪ್ರಾಯ(PC-PTI).
ಜೇಕಬ್ ಬೆಥೆಲ್ ಅವರನ್ನು ಹೊರತುಪಡಿಸಿ ಆರ್‌ಸಿಬಿ ಬಿಡುಗಡೆ ಮಾಡಿದ ಬೇರೆ ಯಾವುದೇ ಆಟಗಾರನ ನಿರ್ಧಾರ ನನಗೆ ಅಚ್ಚರಿ ತಂದಿಲ್ಲ. ಸ್ವಪ್ನಿಲ್ ಸಿಂಗ್ ಅನುಭವಿ ಆಟಗಾರ. ಕಡಿಮೆ ಬೆಲೆಯಲ್ಲೂ ಲಭ್ಯವಿದ್ದರು. ಕ್ರುನಾಲ್ ಪಾಂಡ್ಯಗೆ ಬ್ಯಾಕಪ್ ಆಗಿ ಅವರನ್ನು ಉಳಿಸಿಕೊಳ್ಳಬಹುದಿತ್ತು. ಆದರೆ ಆ ಸ್ಥಾನಕ್ಕೆ ಎಡಗೈ ಸ್ಪಿನ್ ಜೊತೆಗೆ ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿರುವ ವಿಕ್ಕಿ ಓಸ್ತ್ವಾಲ್ ಅವರನ್ನು ಬೆಂಬಲಿಸಲು ತಂಡ ನಿರ್ಧರಿಸಿರಬಹುದು. ಯುವ ಆಟಗಾರನಿಗೆ ಅವಕಾಶ ನೀಡುವುದು ಒಳ್ಳೆಯ ನಿರ್ಧಾರವೇ ಎಂದು ಪಠಾಣ್ ಹೇಳಿದ್ದಾರೆ(PC-PTI).
ಫಿಲ್ ಸಾಲ್ಟ್ ನಿರೀಕ್ಷಿತ ಪ್ರದರ್ಶನ ನೀಡದಿದ್ದರೆ, ಜೇಕಬ್ ಬೆಥೆಲ್ ಉತ್ತಮ ಆಯ್ಕೆಯಾಗಬಹುದಿತ್ತು. ಅವರು ಅಸಾಧಾರಣ ಪ್ರತಿಭೆ ಹೊಂದಿರುವ ಆಟಗಾರ. ತಮ್ಮೊಬ್ಬರೇ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಅವರಿಗಿದೆ. ಜೊತೆಗೆ ಅವರನ್ನು ಉಳಿಸಿಕೊಳ್ಳಲು ಹೆಚ್ಚಿನ ಹಣವೂ ಬೇಕಿರಲಿಲ್ಲ. ಹೀಗಾಗಿ ಆರ್‌ಸಿಬಿ ಅವರನ್ನು ಬಿಡುಗಡೆ ಮಾಡಬಾರದಿತ್ತು ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ(PC-PTI).
ಆರ್ಸಿಬಿಯಿಂದ ಹೊರಬಿದ್ದ ಬಳಿಕ ಮಾಹಿತಿ ನೀಡಿರುವ ಬೆಥೆಲ್, ‘ದುರದೃಷ್ಟವಶಾತ್ ಈ ವರ್ಷ ಐಪಿಎಲ್‌ನಲ್ಲಿ ಆಡುತ್ತಿಲ್ಲ. ನನ್ನ ಮೊಣಕಾಲಿನ ಸಮಸ್ಯೆಯನ್ನು ಸಂಪೂರ್ಣವಾಗಿ ಸರಿಪಡಿಸಿಕೊಳ್ಳಲು ಶ್ರಮಿಸುತ್ತೇನೆ. ಭಾರತದಲ್ಲಿ ನನ್ನ ಮತ್ತು ತಂಡದ ಪ್ರಯಾಣವನ್ನು ವಿಶೇಷವಾಗಿಸಿದ ಆರ್‌ಸಿಬಿ ಅಭಿಮಾನಿಗಳಿಗೆ ನನ್ನ ಪ್ರೀತಿ ಹಾಗೂ ಧನ್ಯವಾದಗಳು. ಇದು ಆರ್‌ಸಿಬಿ ಜೆರ್ಸಿಯಲ್ಲಿ ನನ್ನ ಕೊನೆಯ ಪಂದ್ಯವಾಗಿರದೆ, ಮತ್ತೆ ಭೇಟಿಯಾಗುವ ಅವಕಾಶವಾಗಲಿ ಎಂದು ಆಶಿಸುತ್ತೇನೆ’ ಎಂದಿದ್ದಾರೆ(PC-PTI).
Published On - 7:22 pm, Wed, 25 November 26