IPL 2023 Auction: ಒಬ್ಬ ಭಾರತೀಯನಿಲ್ಲ; ಮಾರ್ಕ್ಯೂ ಆಲ್ರೌಂಡರ್ಸ್ ವಿಭಾಗದಲ್ಲಿ 6 ವಿದೇಶಿಗರು!
TV9 Web | Updated By: ಪೃಥ್ವಿಶಂಕರ
Updated on:
Dec 15, 2022 | 2:50 PM
IPL 2023 Auction: ಈ ಆವೃತ್ತಿಯ ಐಪಿಎಲ್ ಮಿನಿ ಹರಾಜಿಗೆ ಎಲ್ಲಾ ತಂಡಗಳು ಸಂಪೂರ್ಣವಾಗಿ ಸಿದ್ಧವಾಗಿವೆ. ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿರುವ ಹರಾಜಿಗಾಗಿ 405 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
1 / 7
ಈ ಆವೃತ್ತಿಯ ಐಪಿಎಲ್ ಮಿನಿ ಹರಾಜಿಗೆ ಎಲ್ಲಾ ತಂಡಗಳು ಸಂಪೂರ್ಣವಾಗಿ ಸಿದ್ಧವಾಗಿವೆ. ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿರುವ ಹರಾಜಿಗಾಗಿ 405 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಬಿಡುಗಡೆಯಾದ ಆಟಗಾರರ ಪಟ್ಟಿಯಲ್ಲಿ ಈ 6 ಮಾರ್ಕ್ಯೂ ಆಲ್ರೌಂಡರ್ಗಳ ಜೇಬು ಭರ್ತಿಯಾಗುವುದು ಖಚಿತವೆಂಬುದು ಪರಿಣಿತರವಾದವಾಗಿದೆ.
2 / 7
ಈ ಹರಾಜಿನಲ್ಲಿ ಅನೇಕ ಫ್ರಾಂಚೈಸಿಗಳು ಸ್ಯಾಮ್ ಕರನ್ ಮೇಲೆ ಕಣ್ಣಿಟ್ಟಿವೆ. ಈ ವರ್ಷದ ಟಿ20 ವಿಶ್ವಕಪ್‌ನಲ್ಲಿ ತನ್ನ ಆಲ್‌ರೌಂಡರ್ ಪ್ರದರ್ಶನದಿಂದ ಕರನ್, ತಮ್ಮ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಮೂಲ ಬೆಲೆ ಎರಡು ಕೋಟಿ. ರೂಗಳೊಂದಿಗೆ ಹರಾಜಿಗೆ ಹೆಸರು ನೀಡಿರುವ ಕರನ್ರನ್ನು ಖರೀದಿಸಲು ಎಲ್ಲಾ ಫ್ರಾಂಚೈಸಿಗಳು ಮುಗಿಬೀಳುವುದು ಖಚಿತ.
3 / 7
ಜಿಂಬಾಬ್ವೆಯ ಅನುಭವಿ ಆಟಗಾರ ಸಿಕಂದರ್ ರಜಾ ತನ್ನ ಮೂಲ ಬೆಲೆಯನ್ನು 50 ಲಕ್ಷ ರೂ.ಗೆ ಘೋಷಿಸಿಕೊಂಡಿದ್ದಾರೆ. ಆದರೆ ಅವರ ಮೇಲೆ ಕೋಟಿಗಳ ಸುರಿಮಳೆಯಾದರೂ ಅಚ್ಚರಿ ಪಡಬೇಕಿಲ್ಲ.
4 / 7
ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಕೂಡ ಮಾರ್ಕ್ಯೂ ಆಟಗಾರರ ವಿಭಾಗದಲ್ಲಿ ಸೇರ್ಪಡೆಗೊಂಡಿದ್ದು, ಅವರ ಮೂಲ ಬೆಲೆಯೂ ಎರಡು ಕೋಟಿ. ಸ್ಟೋಕ್ಸ್ ಎಷ್ಟು ದೊಡ್ಡ ಮ್ಯಾಚ್ ವಿನ್ನರ್ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಕಳೆದ ಮೆಗಾ ಹರಾಜಿನಲ್ಲಿ ಅವರ ಹೆಸರು ಇರಲಿಲ್ಲ ಆದರೆ ಈ ಬಾರಿ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಕೋಟಿಗಟ್ಟಲೆ ಹಣ ಅವರ ಮೇಲೆ ಹರಿದುಬರುವ ನಿರೀಕ್ಷೆ ಇದೆ.
5 / 7
ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಹರಾಜಿನಲ್ಲಿ ತಮ್ಮ ಮೂಲ ಬೆಲೆ 1.5 ಕೋಟಿ ರೂ. ಗೆ ಇರಿಸಿದ್ದಾರೆ. ಕಳೆದ ವರ್ಷ ಹರಾಜಿನ ಶಕೀಬ್ ಭಾಗಿಯಾಗಿರಲಿಲ್ಲ. ಆದರೆ ಈ ಬಾರಿ ಅವರು ಹೊಸ ತಂಡವನ್ನು ಪಡೆಯುವುದು ಖಚಿತವಾಗಿದೆ.
6 / 7
ವೆಸ್ಟ್ ಇಂಡೀಸ್ನ ಓಡಿಯನ್ ಸ್ಮಿತ್ ಆಕ್ರಮಣಕಾರಿ ಬ್ಯಾಟಿಂಗ್ಗೆ ಹೆಸರುವಾಸಿ. ಅಲ್ಲದೆ 140 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮಥ್ಯ್ರವನ್ನು ಸಹ ಹೊಂದಿದ್ದಾರೆ. 50 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿಗೆ ಎಂಟ್ರಿಕೊಟ್ಟಿರುವ ಅವರ ಮೇಲೆ ಹಣದ ಮಳೆಯಾಗುವ ಸಾಧ್ಯತೆಗಳಿವೆ.
7 / 7
ಆಸ್ಟ್ರೇಲಿಯಾದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ರನ್ನು ಖರೀದಿಸಲು ಹಲವು ತಂಡಗಳು ಮುಂದಾಗಿವೆ. ಈ ವರ್ಷ ಟಿ20 ಮಾದರಿಯಲ್ಲಿ ಗ್ರೀನ್ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಅಲ್ಲದೆ ಸೆಪ್ಟೆಂಬರ್‌ನಲ್ಲಿ ಭಾರತ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಗ್ರೀನ್ 214.54 ಸ್ಟ್ರೈಕ್ ರೇಟ್‌ನಲ್ಲಿ ಎರಡು ಅದ್ಭುತ ಅರ್ಧಶತಕಗಳನ್ನು ಬಾರಿಸಿದ್ದರು.
Published On - 2:47 pm, Thu, 15 December 22