Updated on: Dec 22, 2022 | 11:08 PM
ಐಪಿಎಲ್ ಮಿನಿ ಹರಾಜಿಗಾಗಿ ವೇದಿಕೆ ಸಿದ್ಧವಾಗಿದೆ. ಶುಕ್ರವಾರ (ಡಿ.23) ಕೊಚ್ಚಿನ್ನಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಕೆಲ ಆಟಗಾರರ ಭವಿಷ್ಯ ನಿರ್ಧಾರವಾಗಲಿದೆ. ಏಕೆಂದರೆ ಈ ಬಾರಿ ಮಿನಿ ಹರಾಜು ನಡೆಯುತ್ತಿದ್ದು, ಹೀಗಾಗಿ 405 ಆಟಗಾರರಲ್ಲಿ ಕೇವಲ 87 ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ.
ವಿಶೇಷ ಎಂದರೆ ಈ 87 ಆಟಗಾರರಲ್ಲಿ 57 ಭಾರತೀಯರು ಆಟಗಾರರು ಹಾಗೂ 30 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ಸಿಗಲಿದೆ. ಏಕೆಂದರೆ ಈ ಬಾರಿ ಪ್ರತಿ ತಂಡಗಳಲ್ಲಿ ಖಾಲಿ ಇರುವ ಸ್ಥಾನಗಳಿಗಾಗಿ ಹರಾಜು ನಡೆಯುತ್ತಿದ್ದು, ಹೀಗಾಗಿ 318 ಆಟಗಾರರು ಅವಕಾಶ ವಂಚಿತರಾಗಲಿದ್ದಾರೆ. ಹಾಗಿದ್ರೆ ಯಾವ ತಂಡ ಎಷ್ಟು ಆಟಗಾರರನ್ನು ಖರೀದಿಸಬಹುದು ಎಂದು ನೋಡೋಣ...
ಸನ್ರೈಸರ್ಸ್ ಹೈದರಾಬಾದ್: ಎಸ್ಆರ್ಹೆಚ್ ತಂಡದ ಬಳಿ ಒಟ್ಟು 42.25 ಕೋಟಿ ಹರಾಜು ಮೊತ್ತವಿದೆ. ಈ ಮೊತ್ತದಲ್ಲಿ ಒಟ್ಟು 13 ಆಟಗಾರರನ್ನು ಖರೀದಿಸಬಹುದು. ಇದರಲ್ಲಿ 4 ವಿದೇಶಿ ಆಟಗಾರರನ್ನು ಖರೀದಿಸುವ ಅವಕಾಶವಿದೆ.
ರಾಜಸ್ಥಾನ್ ರಾಯಲ್ಸ್: ಆರ್ಆರ್ ಫ್ರಾಂಚೈಸಿ ಬಳಿ 13.2 ಕೋಟಿ ಹರಾಜು ಮೊತ್ತವಿದೆ. ಈ ಮೊತ್ತದಲ್ಲಿ 4 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 9 ಆಟಗಾರರನ್ನು ಖರೀದಿಸಬಹುದು.
ಪಂಜಾಬ್ ಕಿಂಗ್ಸ್: ಪಂಜಾಬ್ ಫ್ರಾಂಚೈಸಿ ಬಳಿ 32.2 ಕೋಟಿ ರೂ. ಹರಾಜು ಮೊತ್ತವಿದೆ. ಇದರಲ್ಲಿ ಒಟ್ಟು 9 ಆಟಗಾರರನ್ನು ಖರೀದಿಸಬಹುದಾಗಿದೆ. ಅವರಲ್ಲಿ ಮೂವರು ವಿದೇಶಿ ಆಟಗಾರರನ್ನು ಆಯ್ಕೆ ಮಾಡಲು ಅವಕಾಶವಿದೆ.
ಮುಂಬೈ ಇಂಡಿಯನ್ಸ್: ಮುಂಬೈ ಫ್ರಾಂಚೈಸಿ ಬಳಿ ಉಳಿದಿರುವ ಹರಾಜು ಮೊತ್ತ 20.55 ಕೋಟಿ ರೂ. ಈ ಮೊತ್ತದಲ್ಲಿ 3 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 9 ಆಟಗಾರರನ್ನು ಖರೀದಿಸಲು ಅವಕಾಶವಿದೆ.
ಲಕ್ನೋ ಸೂಪರ್ ಜೈಂಟ್ಸ್: ಎಲ್ಎಸ್ಜಿ ತಂಡವು ಒಟ್ಟು 23.35 ಕೋಟಿ ಹೊಂದಿದ್ದು, ಈ ಮೊತ್ತದಲ್ಲಿ 4 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 10 ಪ್ಲೇಯರ್ಸ್ ಅನ್ನು ಖರೀದಿಸಬಹುದು.
ಕೊಲ್ಕತ್ತಾ ನೈಟ್ ರೈಡರ್ಸ್: ಕೆಕೆಆರ್ ತಂಡದ ಬಳಿ ಕೇವಲ 7.05 ಕೋಟಿ ರೂ. ಹರಾಜು ಮೊತ್ತ ಉಳಿದಿದೆ. ಈ ಮೊತ್ತದಲ್ಲಿ 3 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 11 ಆಟಗಾರರನ್ನು ಖರೀದಿಸಲು ಅವಕಾಶವಿದೆ.
ಗುಜರಾತ್ ಟೈಟಾನ್ಸ್: ಜಿಟಿ ಫ್ರಾಂಚೈಸಿ ಬಳಿ ಉಳಿದಿರುವುದು 19.25 ಕೋಟಿ ರೂ. ಈ ಮೊತ್ತದಲ್ಲಿ ಮೂವರು ವಿದೇಶಿ ಆಟಗಾರರನ್ನು ಒಳಗೊಂಡಂತೆ ಒಟ್ಟು 7 ಆಟಗಾರರನ್ನು ಖರೀದಿಸಬಹುದು.
ಡೆಲ್ಲಿ ಕ್ಯಾಪಿಟಲ್ಸ್: ಡೆಲ್ಲಿ ಫ್ರಾಂಚೈಸಿ ಬಳಿ ಒಟ್ಟು 19.45 ಕೋಟಿ ರೂ. ಇದ್ದು, ಈ ಮೊತ್ತದಲ್ಲಿ 5 ಆಟಗಾರರನ್ನು ಖರೀದಿಸಬಹುದು. ಇವರಲ್ಲಿ ಇಬ್ಬರು ವಿದೇಶಿ ಆಟಗಾರರನ್ನು ಆಯ್ಕೆ ಮಾಡಲು ಅವಕಾಶವಿದೆ.
ಚೆನ್ನೈ ಸೂಪರ್ ಕಿಂಗ್ಸ್: ಸಿಎಸ್ಕೆ ತಂಡದ ಬಳಿ ಒಟ್ಟು 20.45 ಕೋಟಿ ರೂ. ಹರಾಜು ಮೊತ್ತವಿದೆ. ಈ ಮೊತ್ತದಲ್ಲಿ ಇಬ್ಬರು ವಿದೇಶಿ ಆಟಗಾರರು ಸೇರಿದಂತೆ ಒಟ್ಟು 7 ಆಟಗಾರರನ್ನು ಖರೀದಿಸುವ ಅವಕಾಶವಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್ಸಿಬಿ ತಂಡದ ಬಳಿ ಇರುವುದು ಕೇವಲ 8.75 ಕೋಟಿ ರೂ. ಈ ಮೊತ್ತದಲ್ಲಿ ಒಟ್ಟು 7 ಆಟಗಾರರನ್ನು ಖರೀದಿಸಬಹುದು. ಇದರಲ್ಲಿ ಇಬ್ಬರು ವಿದೇಶಿ ಆಟಗಾರರನ್ನು ಖರೀದಿಸಬಹುದಾಗಿದೆ.